LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಯುವ ಪಡೆಗಳ "ಮ್ಯಾಡಿ" ಹೀರೋ ಇಂಟ್ರೊಡಕ್ಷನ್ ಪ್ರಮೋಶನಲ್ ಸಾಂಗ್ ರಿಲೀಸ್

ಮಾಜಿ ಸಚಿವ ಹೆಚ್. ಎಂ.ರೇವಣ್ಣ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ರಿಂದ ಬಿಡುಗಡೆ.ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ಯುವ ಪಡೆಗಳ ತಂಡ ಭರ್ಜರಿಯಾಗಿ ಸದ್ದು ಮಾಡಲು ಸಿದ್ಧವಾಗಿದೆ. ಬಹಳಷ್ಟು ಪೂರ್ವ ತಯಾರಿಯೊಂದಿಗೆ ಸಿನಿಮಾ ಮಾಡಲು ಮುಂದಾಗಿರುವ ಈ ತಂಡವು ತಮ್ಮ ಚಿತ್ರ ಸಂಸ್ಥೆಯ ಹೆಸರು , ಶೀರ್ಷಿಕೆ ಹಾಗೂ ನಾಯಕನ ಪರಿಚಯಿಸುವ ಪ್ರಮೋಷನಲ್ ಸಾಂಗ್ ಬಿಡುಗಡೆ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಬೆಂಗಳೂರಿನ ಕಲಾವಿದರ ಭವನದಲ್ಲಿ ಅದ್ದೂರಿಯಾಗಿ ಆಯೋಜಿಸಲಾಯಿತು.

ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಹೆಚ್. ಎಂ. ರೇವಣ್ಣ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ , ಭರ್ಜರಿ ಚೇತನ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.ಮಾಜಿ ಸಚಿವರಾದ ಹೆಚ್. ಎಂ. ರೇವಣ್ಣ ಅವರು ನೂತನ ಸಂಸ್ಥೆ ಮಹೇಶ್ಮತಿ ಬ್ಯಾನರ್ ಲೋಗೋ ಲಾಂಚ್ ಮಾಡಿದರು.

ತದನಂತರ ಹೀರೋ ಇಂಟ್ರೊಡಕ್ಷನ್ ಸಾಂಗ್ ನೋಡಿ ಮಾತನಾಡುತ್ತಾ ಅಂದಿನ ಡ್ಯಾನ್ಸ್ ಹಾಗೂ ಇಂದಿನ ಡ್ಯಾನ್ಸ್ ಗೂ ತುಂಬಾ ವ್ಯತ್ಯಾಸವಿದೆ. ಹೀರೋ ತುಂಬಾ ಜೋಶ್ ಹಾಗೂ ಶ್ರಮಪಟ್ಟು ಸಾಂಗ್ ಮಾಡಿದ್ದಾರೆ. ಇಡೀ ತಂಡಕ್ಕೆ ಶುಭವಾಗಲಿ ಚಿತ್ರ ಯಶಸ್ವಿಯಾಗಿ ಮೂಡಿ ಬರಲಿ ಎಂದು ಶುಭ ಕೋರಿದರು.
ಹಾಗೆಯೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರದ ಟೈಟಲ್  ಪೋಸ್ಟರ್ ರಿವಿಲ್ ಮಾಡಿದ್ದನ್ನ ಕೂಡ ಪ್ರದರ್ಶಿಸಲಾಯಿತು.

ಇನ್ನು ಮತ್ತೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹೀರೋ ಫಸ್ಟ್ ಲುಕ್ ರಿವೀಲ್ ಮಾಡಿ ಮಾತನಾಡುತ್ತಾ , ಈ ಚಿತ್ರದ ಹೀರೋ ಅಂಡ್ ಟೀಮ್ ನನಗೆ ಬಹಳ ಆತ್ಮೀಯರು. ಒಂದು ಪ್ರಮೋಶನಲ್ ಸಾಂಗೇ ಇಷ್ಟು ಅದ್ಭುತವಾಗಿ ಮಾಡಿರುವುದು ಖುಷಿಕೊಟ್ಟಿದೆ. ನನಗೆ ಹಾಡು ಬಹಳ ಇಷ್ಟ ಆಯಿತು. ಅದರಲ್ಲೂ ಚಿತ್ರ ಸಾಹಿತಿ ಚೇತನ್ ಕುಮಾರ್ ಹಾಡಿರುವುದು ಮತ್ತೊಂದು ವಿಶೇಷ. ಇನ್ನು ಮುಂದೆ ಇವರು ಎಕ್ಸ್ಪೆನ್ಸಿವ್ ಸಿಂಗರ್ ಆಗುತ್ತಾರೆ. ಸಿನಿಮಾ ಶೋಕಿ ಅಲ್ಲ. ಶ್ರದೆ , ಪ್ರಾಮಾಣಿಕತೆ ಮುಖ್ಯ. ಇಲ್ಲಿ ಬೆಳೆಯಬೇಕಾದರೆ ವಿದ್ಯೆ ಗಿಂತ ಬದುಕೋ ಕಲೆ ಮುಖ್ಯ. ಇಡೀ ತಂಡ ಬಹಳ ಉತ್ಸಾಹದಿಂದ ಮುಂದಾಗಿದ್ದಾರೆ. ಯುವಕರ ತಂಡಕ್ಕೆ ಶುಭವಾಗಲಿ ಎಂದರು.

ಈ ಚಿತ್ರಕ್ಕೆ ಪ್ರಮೋಶನಲ್ ಸಾಂಗ್ ಬರೆದು ಹಾಗೂ ಗಾಯಕರಾಗಿ ಹಾಡಿರುವ ನಿರ್ದೇಶಕ ಭರ್ಜರಿ ಚೇತನ್ ಕುಮಾರ್ ಮಾತನಾಡುತ್ತಾ ನಾಯಕ ನಟ ಧನುಷ್ ಕುಮಾರ್ ನನ್ನ ಪ್ರೀತಿಯ ಗೆಳೆಯ ಪಮ್ಮಿ ಹತ್ತು ವರ್ಷಗಳಿಂದ ಸ್ನೇಹಿತ, ಹಾಗೆ ನಿರ್ದೇಶಕ ನಾಗಭೂಷಣ್ ಕೂಡ ಬಹಳಷ್ಟು ವರ್ಷಗಳಿಂದ ಸಹ ನಿರ್ದೇಶಕನಾಗಿ ಚಿತ್ರಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದಾನೆ. ಇದು ಅವನ ಪ್ರಥಮ ನಿರ್ದೇಶನದ ಚಿತ್ರ , ಒಂದು ಪ್ರಮೋಷನಲ್ ಹಾಡು ಬೇಕು ಎಂದಾಗ ಬರೆಯಲು ಮುಂದಾದೆ. ನನಗೆ ಬರೆಯುವುದು ಅಂದರೆ ಇಷ್ಟ. ಈ 'ಜೋರು ಜೋರು ಸಿಕ್ಕಾಪಟ್ಟೆ ಜೋರು'.

ಎಂಬ ಹಾಡು ಆರು ವರ್ಷನ್ ಬದಲಾವಣೆ ನಂತರ ಬಹಳ ಸುಂದರವಾಗಿ ಮೂಡಿ ಬಂದಿದೆ. ನಾನು ಟ್ರ್ಯಾಕ್ ಮಾತ್ರ ಹಾಡಿದ್ದೆ. ಅದನ್ನೇ ಈಗ ತಂಡ ಬಳಸಿಕೊಂಡು ಸಾಂಗ್ ಹೊರ ತಂದಿದೆ. ಈ ಸಾಂಗ್ ಗೆ ಹಾಕಿರುವ ಎಫರ್ಟ್ ಸ್ಕ್ರೀನ್ ಮೇಲೆ ಕಾಣುತ್ತೆ. ಚಿತ್ರ ಚೆನ್ನಾಗಿ ಮೂಡಿಬರಲಿ ಎಂದು ಶುಭ ಕೋರಿದರು. ಇನ್ನು ಮತ್ತೊಬ್ಬ ಚಿತ್ರ ಸಾಹಿತಿ ಗೌಸ್ ಪೀರ್, ನಟ ಧರ್ಮಣ್ಣ , ನಿರ್ದೇಶಕ ಮದಗಜ ಮಹೇಶ್ ಸೇರಿದಂತೆ ಹಲವಾರು ಗಣ್ಯರು ಇಡೀ ತಂಡಕ್ಕೆ ಶುಭವನ್ನು ಹಾರೈಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು