LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ರಾಜ್ಯ ಮಟ್ಟದ ವಿಶ್ವ ಕನ್ನಡ ಐದನೇ ಸಾಹಿತ್ಯ ಮತ್ತು ಪರಿಸರ ಜಾಗೃತಿ ಸಮ್ಮೇಳನ

ಬೆಂಗಳೂರು: ವಿಶ್ವ ಕನ್ನಡ ರಾಜ್ಯಮಟ್ಟದ ಐದನೇ ಸಾಹಿತ್ಯ ಮತ್ತು ಪರಿಸರ ಜಾಗೃತಿ ಸಮ್ಮೇಳನ ಜರುಗಿತು. ಈ ಕಾರ್ಯಕ್ರಮದ ಇನ್ನೊಂದು ವಿಶೇಷತೆ ರಾಜ್ಯಮಟ್ಟದ ಕಾಯಕಯೋಗಿ ಸೊನ್ನಲಿಗೆ ಸಿದ್ದರಾಮೇಶ್ವರ ಮತ್ತು ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪಡೆದವರಿಗೆ ಹಾರ ಶಾಲು ಇಲ್ಲದೆ ವಿಶಿಷ್ಟ ರೀತಿಯಲ್ಲಿ 75 ಪಂಚೆ, ಶಲ್ಯ ಹಾಗೂ 30 ಸೀರೆ, ಮುಡಿ ತುಂಬುವುದರ ಮೂಲಕ ವಿಶೇಷವಾಗಿ ಆಚರಿಸಲಾಯಿತು.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಹುಲಿಕೆರೆ ಗ್ರಾಮದ ವಿಶ್ವೇಶ್ವರ ಸಜ್ಜನ್ ಹುಲಿಕೆರೆ ಇವರ ತೋಟದಲ್ಲಿ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ವಿಶ್ವ ಕನ್ನಡ ಕಲಾ ಸಂಸ್ಥೆ ವತಿಯಿಂದ ವಿಶ್ವ ಕನ್ನಡ ರಾಜ್ಯಮಟ್ಟದ ಐದನೇ ರಾಜ್ಯ ಸಮ್ಮೇಳನ ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮಾಡುವುದರ ಜೊತೆಗೆ ಹಾಗೆಯೇ ಈ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ. ರವೀಶ ಅವರ 50 ನೇ ಹುಟ್ಟುಹಬ್ಬದ ಸರಳ ಆಚರಣೆ ಅವರ ವಿರಳ ವ್ಯಕ್ತಿತ್ವಕ್ಕೆ ಮಾದರಿಯಾಯಿತು.

ವಿಶೇಷವಾಗಿ ಪರಿಸರ ಜಾಗೃತಿ ಅಭಿಯಾನ ಮತ್ತು ರೈತ ಚಿಂತನೆಗಳ ಒಂದು ಅಭೂತಪೂರ್ವ ಕಾರ್ಯಕ್ರಮ ಜರುಗಿದ್ದು ಒಂದು ವಿಶೇಷವಾಗಿತ್ತು ಈ ಒಂದು ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ಅನೇಕ ಕವಿಗಳು ಕವನ ವಾಚಕರು ಸಾಹಿತಿಗಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಕಾನ ಮಡಗಿನ ಶ್ರೀ ಐಮುಡಿ ಶರಣಾರ್ಯರು ಮಾತನಾಡಿ,

ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ವಿವಿಧ ಜಿಲ್ಲೆಗಳಿಂದ ಬಂದಿರುವುದು ಅದು ಕೂಡ್ಲಿಗಿ ತಾಲೂಕಿನಲ್ಲಿ ನಡೆಯುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದ್ದು ಅದರಲ್ಲಿ ಪರಿಸರ ಜಾಗೃತಿ ಮತ್ತು ರೈತರ ವಿಚಾರ ಸಂಕೀರ್ಣ ನಡೆಸಿದ್ದು ಇನ್ನೂ ಹೆಚ್ಚು ಅರ್ಥಗರ್ಭಿತವಾದ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು ಅದೇ ರೀತಿಯಾಗಿ ಸಜ್ಜನ್ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೀಣಿಸುತ್ತಾ ಬಂದಿದ್ದು ಅವೈಜ್ಞಾನಿಕ ಕೃಷಿ ಪದ್ಧತಿಯ ಇದಕ್ಕೆಲ್ಲ ಕಾರಣ ಎಂದು ಹೇಳಿದರು ಏಕ ಬೆಳೆಯನ್ನು ಬೆಳೆಯುವುದರ ಬದಲು ಮರ ಆಧಾರಿತ ಕೃಷಿಗಳನ್ನು ಮಾಡಿ ಅನೇಕ ಆದಾಯಗಳನ್ನು ಕೂಡ ಪಡೆಯಬಹುದು ಎಂದು ಹೇಳಿದರು.

ಸಂಸ್ಥಾಪಕ ಅಧ್ಯಕ್ಷರಾದ ರವೀಶ (ಅಕ್ಕರ )ವರು ಮಾತನಾಡಿ ಇಂತಹ ಒಂದು ಪ್ರಕೃತಿಯ ಮಡಿಲಿನಲ್ಲಿ ವೈವಿಧ್ಯಮಯ ತೋಟದಲ್ಲಿ ಈ ಒಂದು ಕಾರ್ಯಕ್ರಮ ಆಯೋಜನೆ ಮಾಡಿರುವುದು ನಮಗೆಲ್ಲ ತುಂಬಾ ಖುಷಿಯಾದ ವಿಚಾರ ಎಂದರು.ಅದರಲ್ಲೂ ಕೂಡ್ಲಿಗಿ ತಾಲೂಕಿನಲ್ಲಿ ಅನೇಕ ರೀತಿಯ ಬರಹಗಾರರು ಚಿಂತಕರು ಸಾಹಿತಿಗಳನ್ನು ಹೊಂದಿರುವ ತಾಲೂಕು ಕೂಡ್ಲಿಗಿ ಎಂದು ಹೇಳಿದರು ಬರದ ನಾಡಲ್ಲೂ ಕೂಡ ಅನೇಕ ರೀತಿಯ ಹೊಸ ಹೊಸ ಹವಿಷ್ಕಾರಗಳನ್ನು ಮಾಡಿ ಕೃಷಿಯಲ್ಲಿಯೂ ಕೂಡ ಸಮೃದ್ಧಿಯಿಂದ ಬೆಳೆಯುವ ಅನೇಕ ರೈತರನ್ನು ಇಲ್ಲಿ ಕಾಣಬಹುದು ಎಂದರು.

ಭೀಮಣ್ಣ ಗಜಪುರ ಇವರು ಮಾತನಾಡಿ ನಮ್ಮ ತಾಲೂಕು ಹಿಂದಿನಿಂದಲೂ ಕೂಡ ಅನೇಕ ಪರಂಪರೆ ಉಳಿಸಿಕೊಂಡು ಬಂದಿದೆ ಪತ್ರಿಕಾ ರಂಗ ಎನ್ನುವುದು ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಆಗಿ ಮಾರ್ಪಟ್ಟಾಗಿದೆ ಹಾಗೂ ಶಿಕ್ಷಣವು ಕೂಡ ಶಿಕ್ಷಣ ಉದ್ಯಮವಾಗಿ ಕಾರ್ಯನಿರ್ವಹಿಸುತ್ತಿದೆ ಪತ್ರಕರ್ತರು ಯಾವುದೇ ರೀತಿಯ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ವಸ್ತು ನಿಷ್ಠೆಯ ವರದಿಯನ್ನು ಮಾಡುತ್ತ ಹಳ್ಳಿಗಳ ಸಮಸ್ಯೆಯನ್ನು ಸರ್ಕಾರಕ್ಕೆ ಮುಟ್ಟಿಸುವುದರ ಮುಖಾಂತರ ಹಳ್ಳಿಗಳ ಸಮಸ್ಯೆ ಗಳನ್ನು ಬಗೆಹರಿಸಿವಂತಾಗಬೇಕು ಸಮಾಜವನ್ನು ತಿದ್ದುವ ಕೆಲಸ ನಮ್ಮದಾಗಬೇಕು ಎಂದರು.

ಸಮ್ಮೇಳನ ಅಧ್ಯಕ್ಷರು ಮಹೇಂದ್ರ ಕುರುಡಿ ಅವರು ಕಾರ್ಯಕ್ರಮವನ್ನು ವಿಶ್ವೇಶ್ವರ ಸಜ್ಜನ್ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಉದ್ಘಾಟಿಸಿದರು, ಎಂ ಬಸವರಾಜ್ ಕಕ್ಕುಪ್ಪಿ ರೈತ ಸಂಘ ವಿಜಯನಗರ ಜಿಲ್ಲಾ ಕಾರ್ಯಅಧ್ಯಕ್ಷರು ಮಾತನಾಡಿ ಇತ್ತೀಚಿಗೆ ಕೃಷಿ ಒಂದು ಜೂಜಾಟ ವಾಗಿದೆ ಪ್ರಕೃತಿ ಗೆ ನಾವೇನು ಕೊಡುತ್ತೀವೋ ಅದೇ ವಾಪಾಸ್ ಕೊಡುತ್ತಿದೆ ಬರ ಒಂದು ಕಡೆ ಅತಿವೃಷ್ಟಿ ಒಂದು ಕಡೆ ಅನಾವೃಷ್ಟಿ ಒಂದು ಕಡೆ ಕೃಷಿ ಮಾಡುವುದೇ ಬೇಡ ಎನ್ನುವ ಮಟ್ಟಿಗೆ ವಾತಾವರಣ ಕೂಡ ಕಾಡುತ್ತಿದೆ ಇದಕ್ಕೆಲ್ಲ ಪರಿಹಾರ ಪರಿಸರ ಉಳಿಸುವುದು ಎಂದರು.

ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಭೀಮಣ್ಣ ಗಜಪುರ ವರದಿಗಾರರು ಸಾಹಿತಿಗಳು, ವ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಈ ರವೀಶ , ಉಪನ್ಯಾಸಕರಾದ ವಸಂತ್ ಸಜ್ಜನ್, ಆರ್ ಗ್ರೂಪ್ ಸಂಸ್ಥಾಪಕ ಅಧ್ಯಕ್ಷರಾದ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಯು ನಾಗೇಶ್, ಕವಿಗೋಷ್ಠಿ ಅಧ್ಯಕ್ಷರಾಗಿ ವಿಜಯನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಏನ್ ಎಂ ರವಿಕುಮಾರ್, ಹೋಬಳಿ ಘಟಕದ ಅಧ್ಯಕ್ಷರಾದ ಎನ್ ಎಸ್ ತಿಪ್ಪೇಸ್ವಾಮಿ, ನಿರಂಜನ್ ಕುಮಾರ್, ನವೀನ್ ಬಿ ಸಜ್ಜನ್, ಕೆ ಸಿ ಹೊರಕೇರಪ್ಪ, ಶಂಕ್ರಣ್ಣ ಗುಬ್ಬಿ, ಡಾಕ್ಟರ್ ಸಿದ್ದಲಿಂಗಯ್ಯ ಹೊರತಾಳು,ಎಚ್ ಎಚ್ ಶಫಿ,ವಿನಾಯಕ, ದಯಾನಂದ ಸಜ್ಜನ್, ಅರವಿಂದ್ ಸಜ್ಜನ್, ವಿವೇಕ್ ಸಜ್ಜನ್, ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಅಭಿನವ ಮಹಿಳಾ ತಂಡ ಶಿವಮೊಗ್ಗ, ಶ್ರೀ ಗುರುಕೊಟ್ಟೂರೇಶ್ವರ ಭರತನಾಟ್ಯ ಕೊಟ್ಟೂರು, ಶಿವರಾತ್ರೇಶ್ವರ ಜನಪದ ಕಲಾ ನಿಕೇತನ ಕೊಟ್ಟೂರು, ವೀರಗಾಸೆ ನೃತ್ಯ, ಸವಿತಾ, ಪಾರ್ವತಮ್ಮ ಮಂಜಣ್ಣ, ಶ್ವೇತ, ಶೈಲಜಾ ಬಾಬು, ಕೆಎಂ ವೀರೇಶ್ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು ಚಿತ್ರದುರ್ಗ ಬಿ.ಟಿ.ಸವಿತಾ , ಪಾರ್ವತಮ್ಮ ಮಂಜಣ್ಣ , ಬಿ .ಇ ರಮೇಶ್ ಚಿತ್ರದುರ್ಗ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು, ಕವಿಗಳು, ಸಾಹಿತಿಗಳು, ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು