LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ರಾಯರ ವೈಭವೋಪೇತ ಉತ್ಸವ ಮತ್ತು ಸುಮನೋಹರ ಭರತನಾಟ್ಯ

ಬೆಂಗಳೂರಿನ ಜಯನಗರದ 5 ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್, ಕೆ ವಾದೀಂದ್ರಾಚಾರ್ಯರ ಮಾರ್ಗದರ್ಶನದಲ್ಲಿ ಪ್ರತಿ ಗುರುವಾರದಂತೆ ವಿಶೇಷವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಲಂಕಾರ, ಉತ್ಸವಗಳು, ಮತ್ತು ಸಹಸ್ರಾರು ಭಕ್ತಾದಿಗಳಿಗೆ "ಅನ್ನಸಂತರ್ಪಣೆಯ ಕಾರ್ಯಕ್ರಮವು ನೆರವೇರಿತು,

ಸಂಜೆ ಭರತನಾಟ್ಯ ಕಾರ್ಯಕ್ರಮವನ್ನು ಕಲಾಯೋಗಿ ವಿದ್ವಾನ್ - ಎಸ್ ರಘುನಂದನ್ ಮತ್ತು ಅವರ ಶಿಷ್ಯವೃಂದದ ವಿದ್ಯಾರ್ಥಿಗಳು "ಭರತನಾಟ್ಯ"ಕಾರ್ಯಕ್ರಮ ವನ್ನು ವಿಶೇಷವಾಗಿ ನಡೆಸಿಕೊಟ್ಟರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಲೇಖಕಿ ವೈ , ಕೆ ಸಂಧ್ಯಾ ಶರ್ಮ ರವರು ಮತ್ತು ವೀಣಾ ಕಲಾವಿದೆ ಗೀತಾ ಶ್ಯಾಂ ಪ್ರಕಾಶ್ ಉಪಸ್ಥಿತರಿದ್ದರು. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಭಾಗವಹಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

ಖ್ಯಾತ `ಅಭಿವ್ಯಕ್ತಿ ಡ್ಯಾನ್ಸ್ ಸೆಂಟರ್' ನ ಗುರು ರಘುನಂದನ್ ಮತ್ತು ಶಿಷ್ಯರು ಪುಷ್ಪಾಂಜಲಿಯಿಂದ ಪ್ರಾರಂಭಿಸಿ ಗಣೇಶ ಸ್ತುತಿ, ಜತಿಸ್ವರ, ನರ್ತನ ಗಣಪತಿ ಕೀರ್ತನೆ , ನವರಸ ರಾಮಾಯಣ, ಆನಂದ ತಾಂಡವ, ಪೋಗದಿರಲೋ ರಂಗ ದೇವರನಾಮ ಮತ್ತು ತಿಲ್ಲಾನದವರೆಗೂ ಬಹು ಸುಂದರ ಆಂಗಿಕಾಭಿನಯ- ಭಾವ-ಭಂಗಿಗಳಿಂದ ಮನಸೆಳೆದರು. ಸಮೂಹ ನೃತ್ಯದ ಸಾಮರಸ್ಯ- ರಮ್ಯ ನೃತ್ತಗಳ ನಿರೂಪಣೆ, ಚೆಂದದ ಅಭಿನಯ ನೃತ್ಯದ ಪರಿಣಾಮ ಹೆಚ್ಚಿಸಿತು. ಶ್ರೀ ರಘುನಂದನ್ ಸಾದರಪಡಿಸಿದ `ನವರಸ ರಾಮಾಯಣ'ನುರಿತ ನೃತ್ತ ಸೌಂದರ್ಯದಿಂದ ಮತ್ತು ಅಭಿನಯ ಪ್ರೌಢತೆಯಿಂದ ಗಮನ ಸೆಳೆಯಿತು.
ಪ್ರಾರಂಭದಲ್ಲಿ ಮಾಸ್ಟರ್. ರಿಷಿಕೇಶ್ ರಘುನಂದನ್ ಸುಶ್ರಾವ್ಯವಾಗಿ ಪ್ರಾರ್ಥನೆ ನಡೆಸಿದರು. ಕಾರ್ಯಕ್ರಮದಲ್ಲಿ ಭಾಗವಹಿ ಸಿದ ನೃತ್ಯ ಕಲಾವಿದೆಯರು ಅಶ್ವಿನಿ, ಸಿಂಧು, ಗುಣಶ್ರೀ, ದಿವ್ಯ, ಸೌದಾಮಿನಿ, ಅಮೂಲ್ಯ, ಮಂದಿರ, ಶ್ರೀ ರಕ್ಷಾ, ರಿಂಶ, ಅನನ್ಯ, ತುಳಸಿ, ಯಶಸ್ವಿ ಮತ್ತು ಸೇಜಲ್.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು