LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ರ. ನರಸಿಂಹಮೂರ್ತಿಗೆ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವತಿಯಿಂದ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಓಬಳಾಪುರ ಗ್ರಾಮದ ಪತ್ರಕರ್ತ ಹಾಗೂ ಕನ್ನಡ ಜಾನಪದ ಪರಿಷತ್ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷರು, ಗೋ ವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾಗಿದ್ದ ರ. ನರಸಿಂಹಮೂರ್ತಿ ರವರ ಜೀವಮಾನದ ಸಾಧನೆಗಾಗಿ ಇವರನ್ನು ಸೇರಿ ದೇಶದ 38 ಜನರನ್ನು ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು: ರಾಕೇಶ್ ಶರ್ಮಾ (ಮಧ್ಯಪ್ರದೇಶ), ಮುಕೇಶ್ ಠಾಕೂರ್ (ಜಾರ್ಖಂಡ್)  ಪ್ರೊ . ತಮಿಳ್ ಸೆಲ್ವಿ (ತಮಿಳುನಾಡು), ಸಾದರ ನರೇಶ್ ಕುಮಾರ್ (ಮಹಾರಾಷ್ಟ್ರ), ಪ್ರಮೋದ ಕುಲಕರ್ಣಿ (ಕೊಪ್ಪಳ), ಡಾ. ಸೋಮಶೇಖರ ಡಿ. (ಕಲಬುರಗಿ), ಡಾ.ರಾಜು ಗುಂಡಾಪುರ (ರಾಮನಗರ), ಡಾ. ಶುಭ ನಂದೀಶ (ಕೋಲಾರ), ಪ್ರೊ. ಅಂಬಿಕಾ ಎ.ಆರ್. (ಬೆಂಗಳೂರು ಗ್ರಾ.), ಪ್ರೊ ಮನೋಜ ಎಂ.(ಮಂಡ್ಯ), ಡಾ.ಕೆ.ಸಿ.ನಾಗರಜ್ಜಿ (ಹಾವೇರಿ) ಮತ್ತು ರಾಷ್ಟ್ರೀಯ ಜಾನಪದ ಶ್ರೀ ಪ್ರಶಸ್ತಿಗೆ ಬೆಂಗಳೂರು ನಗರ ಜಿಲ್ಲೆಯ ಕಡಬಗೆರೆ ಮುನಿರಾಜು ಮತ್ತು ತುಮಕೂರು ಜಿಲ್ಲೆಯ ಬಿ. ಸಿ. ಗಂಗಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.

ರಾಜ್ಯ ಪ್ರಶಸ್ತಿ: ಮೈಸೂರಿನ ಪ್ರೊ|ಎಚ್.ಆರ್.ವೆಂಕಟೇಶ, ರಾಯಚೂರಿನ ತಾಯಪ್ಪ ಬಾಗಲಕೋಟೆಯ ರಾಜ ಅಹ್ಮದ ನಬೀವಾಲೆ, ದಾವಣಗೆರೆಯ ಜಿ.ಎಸ್.ಷಡಾಕ್ಷರಪ್ಪ, ಕೊಡಗಿನ ಕೆ.ಎಸ್.ಮೂರ್ತಿ, ಬೆಳಗಾವಿಯ ನಾಗೇಂದ್ರ ಚೌಗಲೆ, ಚಿಕ್ಕಮಗಳೂರಿನ ಓಣಿತೋಟ ರತ್ನಾಕರ್, ಧಾರವಾಡದ ಈರಪ್ಪ ಎಮ್ಮಿ, ಉಡುಪಿಯ ಡಾ|ಗಣೇಶ ಗಂಗೊಳ್ಳಿ, ಬೀದರನ ರಾಘವೇಂದ್ರ ಡಿ.ಎಸ್., ತುಮಕೂರಿನ ನರಸಿಂಹಮೂರ್ತಿ. ರ, ಗದಗಿನ ವಸಂತ ಮದ್ದೂರ, ಶಿವಮೊಗ್ಗದ ಡಾ|ರಾಜುನಾಯ್ಕ ಎಸ್., ವಿಜಯನಗರದ ಸ್ಯಾಮಸನ್ ಪೆಂಡೆಮ್, ಹಾಸನದ ಆರ್ .ಜಿ.ಗಿರೀಶ್, ಚಿತ್ರದುರ್ಗದ ಬಿ.ಮೈಲಾರಪ್ಪ, ಚಿಕ್ಕಬಳ್ಳಾಪುರದ ಡಾ|ಸೋ.ಸು.ನಾಗೇಂದ್ರನಾಥ, ಚಾಮರಾಜನಗರದ ವಿ.ರಾಮದಾಸ, ಯಾದಗಿರಿಯ ಬಸವಯ್ಯ ಸ್ವಾಮಿ, ಬಳ್ಳಾರಿಯ ಜಗದೀಶ ಪೂಜಾರ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಸಾಂಘಿಕ ಪ್ರಶಸ್ತಿಗೆ ದಕ್ಷಿಣ ಕನ್ನಡದ ಪ್ರೇರಣಾ, ಚಿಕ್ಕಮಗಳೂರಿನ ಚಂಡಿಕೇಶ್ವರಿ ಅಂಟಿಗೆ ಪಿಂಟಿಗೆ ತಂಡ, ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ಹಸಿರು ತೋರಣ ಗೆಳೆಯರ ಬಳಗ ಆಯ್ಕೆಯಾಗಿದೆ.ಫೆಬ್ರುವರಿ 5 ರಂದು ಮುದ್ದೇಬಿಹಾಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಡಾ.ಜಾನಪದ ಎಸ್. ಬಾಲಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು