LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಲಯನ್ ಡಾ:ಬಿ.ಎಂ.ರವಿನಾಯ್ಡು ಅವರ 3 ದಶಕಗಳ ಸಮಾಜ ಸೇವೆ ಶ್ಲಾಘನೀಯ: ಲಯನ್ ರಾಜುಚಂದ್ರಶೇಖರ್

ಬೆಂಗಳೂರು ದೊಡ್ಡಬೊಮ್ಮಸಂದ್ರ ಸಿ.ಎಂ.ಆರ್ ರೆಸಿಡೆನ್ಸಿಯಲ್ಲಿ ಲಯನ್ಸ್ ಇಂಟರ್‍ನ್ಯಾಷನಲ್ 317 ಎಫ್, ದೊಡ್ಡಬೊಮ್ಮಸಂದ್ರ ಲಯನ್ಸ್ ಕ್ಲಬ್‍ನ ಸಮಾರಂಭದಲ್ಲಿ ಲಯನ್ಸ್ 2ನೇ ಉಪಜಿಲ್ಲಾ ಗೌರ್ನರ್‍ರಾದ ಲಯನ್ ರಾಜುಚಂದ್ರಶೇಖರ್‍ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾನು ಗಳಿಸಿದ ಹಣದಲ್ಲಿ ಸಮಾಜಸೇವೆ ಸಲ್ಲಿಸುವುದು ಭಗವಂತ ಮೆಚ್ಚುತ್ತಾನೆ ಹಾಗೆ ರವಿನಾಯ್ಡುರವರು 30 ವರ್ಷಗಳಿಂದ ವಿಭಿನ್ನ ರೀತಿಯಲ್ಲಿ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ, ಬಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ,ಹೆಚ್ಚಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು,ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಡ ರೋಗಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಾರೆ.

ಧಾರ್ಮಿಕ ಕ್ಷೇತ್ರವಾದ ದೊಡ್ಡಬೊಮ್ಮಸಂದ್ರದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪ್ರತಿ ದಿನ ಅಭಿಷೇಕ,ಪೂಜೆ ಜರುಗುತ್ತದೆ.ಹಬ್ಬ,ಹರಿದಿನಗಳಲ್ಲಿ ಹೋಮ,ಪೂಜೆ,ಹಿರಿಯರಿಗೆ ಬಾಗಿನ ಬಡಬಗ್ಗರಿಗೆ ಸೀರೆ ಹಂಚುತ್ತಾರೆ. 10 ಸಾವಿರಕ್ಕೂ ಹೆಚ್ಚಿನ ಜನರಿಗೆ ಅನ್ನಸಂತರ್ಪಣೆ ಏರ್ಪಡಿಸುತ್ತಾರೆ. 2023-24ನೇ ಸಾಲಿನಲ್ಲಿ ದೊಡ್ಡಬೊಮ್ಮಸಂದ್ರದ ಲಯನ್ಸ್ ಕ್ಲಬಿಗೆ ಡಾ:ರವಿನಾಯ್ಡು ಪಿಎಂಜೆಎಫ್ ಅಧ್ಯಕ್ಷರಾದಾಗ 174 ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ 20 ಸಾವಿರಕ್ಕೂ ಹೆಚ್ಚಿನ ನೇತ್ರ ಪರೀಕ್ಷೆ ನಡೆಸಿ, 140 ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಮಾಡಿಸಿದ್ದು 150ಕ್ಕೂ ಹೆಚ್ಚಿನ ಕನ್ನಡಕಗಳು ನೀಡಿದ್ದಾರೆ.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿದ್ದಾರೆ.ಈ ಸಾಲಿನಲ್ಲಿ 32 ಲಕ್ಷ ರೂ ವೆಚ್ಚ ಮಾಡಿದ್ದಾರೆ. ಇದೊಂದು ಉತ್ತಮ ಸಾಧನೆ ಎಂದು ರಾಜುಚಂದ್ರಶೇಖರ್‍ರವರು ಡಾ:ರವಿನಾಯ್ಡುರವರನ್ನು ಅಭಿನಂದಿಸಿದರು.ದೊಡ್ಡಬೊಮ್ಮಸಂದ್ರ ಲಯನ್ಸ್ ಕ್ಲಬ್‍ನ 2024-25ನೇ ಸಾಲಿನ ನೂತನ ಪದಾಧಿಕಾರಿಗಳು: ಅಧ್ಯಕ್ಷ: ಲಯನ್ ಎನ್.ಸಂಜೀವಪ್ಪ, 2ನೇ ಉಪಾಧ್ಯಕ್ಷರಾಗಿ ಲಯನ್ ಮಂಜುಳಾರವಿನಾಯ್ಡು, ಕಾರ್ಯದರ್ಶಿ ಲಯನ್ ತಂಬಿರಾಜು, ಖಜಾಂಚಿ: ಲಯನ್ ಲ್ಯಾಬ್ ನಾಗರಾಜು.

ಇದೇ ಸಂದರ್ಭದಲ್ಲಿ ವಿಶ್ವವೈದ್ಯ ದಿನಾಚರಣೆ ಪ್ರಯುಕ್ತ ಶಾಂತ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಸಂಸ್ಥಾಪಕರಾದ ಡಾ.ಶಿವರಾಜಗೌಡ, ದಂತವೈದ್ಯ. ಕಾರ್ತಿಕ್‍ರವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಲಯನ್ಸ್ ಮಾಜಿ ಗೌರ್ನರ್‍ಗಳಾದ ಲಯನ್ ಅನಿಲ್‍ಕುಮಾರ್,ಲಯನ್ ರವೀಂದ್ರ ಹಾಗೂ ಲಯನ್ ಹರೀಶ್, ಲಯನ್ ಶಾಶಾ, ಲಯನ್ ಜಿಎಲ್‍ಟಿ ಕೋಆರ್ಡಿನೇಟರ್, ಲಯನ್ ಆರ್.ಲೀಲಾಕೃಷ್ಣ ಪಿಎಂಜೆಎಫ್ ಸೇರಿದಂತೆ ಅನೇಕರಿದ್ದರು.
ಚಿತ್ರ: ಜಿ.ಎಲ್.ಸಂಪಂಗಿರಾಮುಲು

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು