LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಲಯನ್ ಸಂಸ್ಥೆಯಿಂದ ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ ಸೇವಾ ಕಾರ್ಯಗಳಿಗೆ ಅದ್ಯತೆ: ಲಯನ್ ವಿ.ವಿಜಯ್ ಕುಮಾರ್ ರಾಜು

ಬೆಂಗಳೂರು: ಅಂತರಾಷ್ಟ್ರೀಯ ಲಯನ್ ಸಂಸ್ಥೆ ದೇಶ ಹಾಗೂ ಪ್ರಪಂಚದಾದ್ಯಂತ 210 ದೇಶಗಳಲ್ಲಿ ಕಾರ್ಯಲಯ ಹೊಂದಿದ್ದು ಅನೇಕ ಸೇವಾ ಕಾರ್ಯದಲ್ಲಿ ತೊಡಗಿದ್ದು ಬಡ ಜನತೆಗೆ ಆಶಾಕಿರಣವಾಗಿದೆ ಎಂದು ಅಂತರಾಷ್ಟ್ರೀಯ ಮಾಜಿ ನಿರ್ದೇಶಕ ವಿ. ವಿಜಯಕುಮಾರ್ ರಾಜು ತಿಳಿಸಿದರು.

ಬೆಂಗಳೂರಿನ ನಿಮ್ಯಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ಭಾನುವಾರ ಸಂಜೆ ನಡೆದ ಲಯನ್ ಜಿಲ್ಲಾ 317 ಎಫ್ ನ 2024 - 25 ನೇ ಸಾಲಿನ ಕ್ಯಾಬಿನೆಟ್ ಪದಾಧಿಕಾರಿಗಳ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿ ಜಿಲ್ಲೆಯ ಉಪರಾಜ್ಯ ಪಾಲರಾದ ಆಕಾಶ್ ಎ. ಸುವರ್ಣ, ರಾಜು ಚಂದ್ರಶೇಖರ್ ಹಾಗೂ ಕ್ಯಾಬಿನೆಟ್ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಲಯನ್ ಸಂಸ್ಥೆ ಬೃಹತ್ ಸಂಸ್ಥೆಯಾಗಿದ್ದು, ಉತ್ತಮ ಸೇವೆ ಮಾಡುತ್ತಿದೆ ಜಿಲ್ಲಾ 317 ಎಫ್ ರ ರಾಜ್ಯಪಾಲರಾದ ಸಿ.ಎಂ. ನಾರಾಯಣಸ್ವಾಮಿ ಹಾಗೂ ತಂಡದವರು ಉತ್ತಮ ಸೇವಾ ಕಾರ್ಯ ಮಾಡುತ್ತಿದ್ದು ಈ ದಿನ 40 ಲಕ್ಷಕ್ಕೂ ಹೆಚ್ಚಿನ ಸೇವಾ ಕಾರ್ಯ ನಡೆಸಿದ್ದಾರೆ ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರಾಜ್ಯಪಾಲರಾದ ಸಿ.ಎಂ. ನಾರಾಯಣಸ್ವಾಮಿ ಮಾತನಾಡಿ ನಮ್ಮ ಜಿಲ್ಲಾ ಲಯನ್ಸ್ ಸಂಸ್ಥೆ ಎಲ್ಲರ ಸಹಕಾರದೊಂದಿಗೆ ಉತ್ತಮ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು ಈ ದಿನ 52 ಬಡ ವಿದ್ಯಾರ್ಥಿಗಳಿಗೆ ತಲಾ 20 ಸಾವಿರ ರೂಗಳ ಚೆಕ್, ಉತ್ತಮ ಗುಣಮಟ್ಟದ 15 ಲ್ಯಾಪ್ಟಾಪ್, ನೂರು ಜನಕ್ಕೆ ಹಕ್ಕಿ ಮೂಟೆ, ರೈನ್ ಕೋಟ್ ವಿತರಣೆ, ಕೆ.ಸಿ. ಜನರಲ್ ಆಸ್ಪತ್ರೆಯ ರೋಗಿಗಳ ಅಟೆಂಡರ್ ಗಳಿಗೆ ಒಂದು ವರ್ಷ ಊಟದ ವ್ಯವಸ್ಥೆ, ಪರಿಸರ ಸಂರಕ್ಷಣೆ, ಬಾಲ್ಯ ವ್ಯವಸ್ಥೆ ಕ್ಯಾನ್ಸರ್ ತಡೆಗಟ್ಟಲು ಹಣದ ನೆರವು, ದೃಷ್ಟಿ ದೋಷ ನಿವಾರಣೆ ಹಾಗೂ ಶಸ್ತ್ರ ಚಿಕಿತ್ಸೆಗೆ ಇಂದು ನಡೆದ ಕಾರ್ಯಕ್ರಮದಲ್ಲಿ ನೆರವು ನೀಡಿರುವುದಾಗಿ ತಿಳಿಸಿದರು.

ಅತಿಥಿಗಳಾಗಿ ಅಂತರಾಷ್ಟ್ರೀಯ ಮಾಜಿ ನಿರ್ದೇಶಕರಾದ ವಿ.ವಿ. ಕೃಷ್ಣಾರೆಡ್ಡಿ, ಕೆ.ವಂಶಿಧರ್ ಬಾಬು, ಎಂ.ಸಿ.ಸಿ. ಡಾಕ್ಟರ್:ಎಸ್. ಕೃಷ್ಣೇಗೌಡ, ಬಿ.ಎಸ್. ರಾಜಶೇಖರಯ್ಯ, ಜಿಲ್ಲೆಯ ಮಾಜಿ ರಾಜ್ಯಪಾಲರು ಇತರೆ ಜಿಲ್ಲಾ ಪದಾಧಿಕಾರಿಗಳು, ಲಯನ್ ಜಿಲ್ಲಾ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.ಹೋಸ್ಟ್ ಕಮಿಟಿ ಅಧ್ಯಕ್ಷ ಅಜಿತ್ ಬಾಬು, ಕಾರ್ಯದರ್ಶಿ ಎಮ್.ಆರ್ ಶ್ರೀನಿವಾಸ್, ಸಂಘಟನಾ ಸಮಿತಿಯ ಲಯನ್ ಸಿಂಹ ಶಾಸ್ತ್ರಿ, ಮಾಧ್ಯಮ ಸಂಪರ್ಕಾಧಿಕಾರಿ ಮಂಜುನಾಥ್ ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು