ದೇಶದ ಪ್ರಮುಖ ಆರೋಗ್ಯ ಮತ್ತು ಸೌಂದರ್ಯವರ್ಧಕ ಸಂಸ್ಥೆಗಳಲ್ಲಿ ಒಂದಾದ ಕಲರ್ಸ್ ಹೆಲ್ತ್ ಕೇರ್ ಇಂಡಿಯಾ ಸಂಸ್ಥೆಯ ನೂತನ ವೆಲ್‌ನೆಸ್ ಮತ್ತು ಫಿಟ್‌ನೆಸ್ ಕೇಂದ್ರವನ್ನು ವೈಟ್ ಫೀಲ್ಡ್ ನಲ್ಲಿ ತಾರಾ ದಂಪತಿ ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನಾ ನಾಗರಾಜ್ ಉದ್ಘಾಟಿಸಿದರು.
ತಮ್ಮ ಹೈಸ್ಕೂಲ್ ದಿನಗಳ ಅನುಭವ ಮೆಲುಕು ಹಾಕಿದ ಡಾರ್ಲಿಂಗ್ ಕೃಷ್ಣ ತುಂಬಾ ತೆಳ್ಳಗಿದ್ದ ಕಾರಣ ಹುಡುಗಿಯರ ಗಮನ ಸೆಳೆಯಲು ಮತ್ತು ಧರಿಸುವ ಉಡುಪುಗಳು ಮೈಕಟ್ಟಿಗೆ ಸರಿಯಾಗಿ ಹೊಂದಿಕೊಳ್ಳಬೇಕೆAಬ ಆಸೆಯಿಂದ ವರ್ಕೌಟ್ ಆರಂಭಿಸಿದ್ದಾಗಿ ತಮಾಷೆಯಾಗಿ ನೆನಪಿಸಿಕೊಂಡರು.
ನಟಿ ಮಿಲನಾ ನಾಗರಾಜ್ ತಮ್ಮ ಸೌಂದರ್ಯ ಹಾಗೂ ಆರೋಗ್ಯದ ಗುಟ್ಟನ್ನು ಬಿಚ್ಚಿಡುತ್ತಾ, ತಾವು ಕಳೆದ ಎರಡೂವರೆ ದಶಕಗಳಿಂದ ಕ್ರೀಡಾಪಟು ಮತ್ತು ಈಜುಗಾರ್ತಿಯಾಗಿದ್ದ ಕಾರಣ ನಿರಂತರವಾಗಿ ಕ್ರಿಯಾಶೀಲವಾಗಿರುವುದೇ ತಮ್ಮ ಫಿಟ್‌ನೆಸ್‌ಗೆ ಕಾರಣ ಎಂದರು. ನಿಯಮಿತ ಜಿಮ್, ಯೋಗ ಮತ್ತು ಈಜಿನ ಜೊತೆಗೆ ಪ್ರಸ್ತುತ ನಿತ್ಯ 10 ಸಾವಿರ ಹೆಜ್ಜೆ ನಡೆಯುವ ಗುರಿಯನ್ನು ಅನುಸರಿಸುತ್ತಿರುವುದಾಗಿ ತಿಳಿಸಿದ ಅವರು, ಯಾವುದೇ ಕಠಿಣ ಆಹಾರ ಪದ್ಧತಿಗೆ ಒಳಗಾಗದೆ ಹಿತಮಿತವಾದ ಊಟ ಸೇವಿಸುವುದಾಗಿ ಹೇಳಿದರು. ಜೊತೆಗೆ ತಾವು ಮತ್ತು ಕೃಷ್ಣ ಇಬ್ಬರೂ ಆಹಾರದಲ್ಲಿ ಸಕ್ಕರೆ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿದ್ದು, ಇದರಿಂದ ಚರ್ಮ, ಕೂದಲು ಮತ್ತು ಸಂಪೂರ್ಣ ದೈಹಿಕ ಆರೋಗ್ಯದಲ್ಲಿ ಗಮನಾರ್ಹ ಸಕಾರಾತ್ಮಕ ಬದಲಾವಣೆ ಕಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ವಿಜಯ್ ಕೃಷ್ಣ ಅವರು ಮಾತನಾಡಿ, ಇಂದಿನ ಬದಲಾಗುತ್ತಿರುವ ಆಧುನಿಕ ಜೀವನಶೈಲಿಯಲ್ಲಿ ಜನರ ಆರೋಗ್ಯ ಮತ್ತು ಯೋಗಕ್ಷೇಮದ ಅಗತ್ಯತೆಗಳು ಹೆಚ್ಚುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಸಮುದಾಯಕ್ಕೆ ಉತ್ಕöÈಷ್ಟ ಮಟ್ಟದ ವೆಲ್‌ನೆಸ್ ಸೇವೆಗಳನ್ನು ನೀಡುವ ಸಲುವಾಗಿ ವೈಟ್‌ಫೀಲ್ಡ್ನಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ನೂತನ ಕೇಂದ್ರವನ್ನು ತೆರೆಯಲಾಗಿದೆ ಎಂದರು.ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ ಶಿವಾಜಿ ಕೂನಾ ಮಾತನಾಡಿ ಬೆಂಗಳೂರಿನಲ್ಲಿ ಸಂಸ್ಥೆ ಬಹು ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ ಎಂದರು ಸಂಸ್ಥೆಯ ಆಪರೇಷನ್ ಡೈರೆಕ್ಟರ್ ಕೃಷ್ಣರಾಜ್ ತುಮ್ಮಾಲ ಅವರು, ಗ್ರಾಹಕರ ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ವೈಟ್‌ಫೀಲ್ಡ್ನಲ್ಲಿ ಈ ನೂತನ ಶಾಖೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.