LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವಿದ್ಯಾಮಂದಿರ ಪಿಯು ಕಾಲೇಜು ವಾರ್ಷಿಕೋತ್ಸವ: ಶ್ರೀ ಗುರುವಾಯೂರಪ್ಪನ ಕಥಾ ಚರಿತ್ರೆಯ ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳು

ಬೆಂಗಳೂರು: ಬೆಂಗಳೂರಿನ ಮಲೇಶ್ವರದ ವಿದ್ಯಾ ಮಂದಿರ ಪಿಯು ಕಾಲೇಜಿನ ವಿದ್ಯಾರ್ಥಿಗಳು 2024-25ರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕೇರಳದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ "ಗುರುವಾಯೂರಪ್ಪನ್ ಕಥಾ ಮಹಿಮಾ ಚರಿತ್ರೆ"ಯನ್ನು ಅದ್ಬುತ ನೃತ್ಯ ನಾಟಕದ ಮೂಲಕ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.

ಸುಮಾರು 100 ವಿದ್ಯಾರ್ಥಿಗಳು ಗುರುವಾಯೂರಪ್ಪನ್ ಚರಿತ್ರಾ ಕಥಾ ನಾಟಕದಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡು ಅದ್ಬುತವಾಗಿ ನಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು, ನಿಜವಾದ ಭಕ್ತಿಯಿಂದ ಗುರುವಾಯೂರಪ್ಪನ್ ಅರ್ಥಾತ್ ಶ್ರೀ ಕೃಷ್ಣನ ಕೃಪೆ ಪಾತ್ರರಾಗ ಬಹುದು ಎಂಬುದನ್ನು ಒಂದೊಂದು ಪಾತ್ರ,ದೃಶ್ಯಗಳ ತುಣುಕುಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಸೂರೆಗೊಂಡರು. ಮಹಾಭಾರತ ಕಥನದ ನಾಟಕ ದೃಶ್ಯಗಳು, ಕೇರಳದ ಕಳಾರಿಪಟು ಸಾಹಸ ನೃತ್ಯ ಪ್ರದರ್ಶನ ಎಲ್ಲ ಮೈನೆವರೇಳುವಂತೆ ಮಾಡಿತು.

ವಿದ್ಯಾಮಂದಿರ ಪಿಯು ಕಾಲೇಜಿನ ಉಪನ್ಯಾಸಕರೇ ಈ ನಾಟಕವನ್ನು ಸಂಪೂರ್ಣವಾಗಿ ನಿರ್ದೇಶನ ನೀಡಿ ಸಂಗೀತ ನೀಡಿದ್ದಾರೆ, ಉಪನ್ಯಾಸಕಿ ಮಂಗಳಾ ಸತೀಶ್ ಗುರುವಾಯೂರಪ್ಪನ ಕಥೆಯ ಪುಸ್ತಕವನ್ನು ನಾಟಕ ರೂಪದಲ್ಲಿ ವೇದಿಕೆ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ, ಉಪನ್ಯಾಸಕರಾದ ರಾಜಾರಾಮ್, ತ್ರಿಪುರ ಉತ್ತಮ ಸಂಗೀತ ರಚಿಸಿದ್ದಾರೆ.ಜೂನ್ ತಿಂಗಳಿಂದ ಈ ನಾಟಕದ ಪೂರ್ವ ನಡೆಸಲಾಗಿದೆ ಎಂದು ಮಂಗಳಾ ಸತೀಶ್ ತಿಳಿಸಿದರು.

2024-25ರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಶೋಕ್ ಲೈ ಲ್ಯಾಂಡ್ ಕಂಪನಿಯ ಜಿ.ಯೋಗೇಶ್ ಬೋಳಾರ್ ಭಾಗವಹಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ವಿದ್ಯಾಮಂದಿರ ಪಿಯು ಕಾಲೇಜಿನ ಕಾರ್ಯದರ್ಶಿ ಬಾಬುದೊರೈಸ್ವಾಮಿ,ಪ್ರಾಂಶುಪಾಲರಾದ ಭಾರತಿ ಬಾಬು ದೊರೈಸ್ವಾಮಿ ಅಧ್ಯಾಪಕರು,ವಿವಿಧ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು