LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chikkaballapura

ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆ : ಅಧ್ಯಕ್ಷರಾಗಿ ಟಿ.ಎಸ್.ಬಾಬು ಆಯ್ಕೆ

ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ೨೦೨೪ ರಿಂದ ೨೦೨೭ ಮೂರು ವರ್ಷದ ಅವಧಿಯ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಟಿ. ಎಸ್. ಬಾಬು ಭರ್ಜರಿ ಗೆಲುವು ಸಾಧಿಸಿದ್ದು ಸಂಘದ ಸದಸ್ಯರಿಗೆ ಇದೇ ಸಂದರ್ಭದಲ್ಲಿ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು.

ನಗರದ ಕೆಇಬಿ ಸಮುದಾಯ ಭವನದಲ್ಲಿ ಗುರುವಾರ ಒಂದು ಅಧ್ಯಕ್ಷ ಸ್ಥಾನ ೨ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಟಿ.ಎಸ್. ಬಾಬು ಭರ್ಜರಿ ಜಯಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಜಿ.ಆಂಜಿನಪ್ಪ, ಬೈರೆಡ್ಡಿ ಗೆಲುವು ಕಂಡಿದ್ದಾರೆ.ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಸ್ಪರ್ಧೆ ಮಾಡಿದ್ದರು.ಈ ಪೈಕಿ ಟಿ.ಎಸ್.ಬಾಬು ಅವರಿಗೆ ೧೨೨ ಮತ ಬಿದ್ದಿದ್ದರೆ, ಇವರ ಎದುರಾಳಿ ವೈ.ಎಸ್.ನರಸಿಂಹಮೂರ್ತಿಗೆ ಕೇವಲ ೬೯ ಮತಗಳು ಬಿದ್ದಿದ್ದು ಸೋಲನ್ನಪ್ಪಿದ್ದಾರೆ.

ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾಗಿ ಆಂಜಿನಪ್ಪ ೧೦೨ ಹಾಗೂ ಬೈರೆಡ್ಡಿ ೧೩೯ ವೋಟ್ ಪಡೆದು ಜಯಗಳಿಸಿದ್ದರೆ ಇವರ ಎದುರಾಳಿ ಗೋವಿಂದರಾಜು ೮೬ ವೋಟ್ ಪಡೆದು ಪರಾಜಿತರಾಗಿದ್ದಾರೆ.ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಂಘದ ಸದಸ್ಯರು ತಪ್ಪದೆ ಹಾಜರಾಗಿ ಮತ ಚಲಾಯಿಸಿದರು.ಸಂಜೆ ೪ ಘಂಟೆ ವರೆಗೆ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಶಾಮ್ ಸುಂದರ್ ಕರ್ತವ್ಯ ನಿರ್ವಹಿಸಿದ್ದು ಸಂಜೆಗೆ ಫಲಿತಾಂಶ ಘೋಷಿಸಿದರು.

ನೂತನ ಅಧ್ಯಕ್ಷರಾಗಿ ಭರ್ಜರಿ ಜಯದಾಖಲಿ ಸಿರುವ ಟಿ. ಎಸ್. ಬಾಬು ಮಾತನಾಡಿ ನನ್ನ ಗೆಲವುನಿರೀಕ್ಷಿತವಾಗಿತ್ತು. ನಾನು ಯಾರು ನನ್ನ ಕಾರ್ಯವೈಖರಿ
ಏನು ಎಂಬುದನ್ನು ಈ ಫಲಿತಾಂಶ ಹೇಳಿದೆ. ಮುಂದಿನ ದಿನಗಳಲ್ಲಿ ಸಂಘವನ್ನು ಬಲಪಡಿಸುತ್ತಾ ಸದಸ್ಯರ ಮಾತಿಗೆ ಬೆಲೆ ನೀಡುತ್ತಾ ಪಾರದರ್ಶಕವಾಗಿ ಸಂಘವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ. ಚುನಾವಣೆ ಘೋಷಣೆಯಾದ ಬಳಿಕ ಕಳೆದ ಇಪ್ಪತ್ತು ದಿನದಿಂದ ಸದಸ್ಯರು ನನ್ನ ಗೆಲುವಿಗೆ ಬಹಳಷ್ಟು ಶ್ರಮ ಪಟ್ಟಿದ್ದು ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಕಳೆದ ೧೩ ವರ್ಷಗಳಿಂದ ಸಂಘದ ಸದಸ್ಯರು ನನಗೆ ಬೆಂಬಲವಾಗಿ ನಿಂತಿದ್ದಾರೆ. ಮುಂದೆಯೂ ನಿಲ್ಲುತ್ತಾರೆ. ಪ್ರಾಮಾಣಿಕ ಸದಸ್ಯರೇ ನನ್ನ ಬಲ. ಜಿಲ್ಲೆಯ ಎಲ್ಲ ಸದಸ್ಯರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಲ್ಲದೆ, ನನ್ನ ಸಹಕಾರ ಅವರಿಗೆ ಇದ್ದೆ ಇರುತ್ತದೆ ಎಂದರು.ಈ ಸಂದರ್ಭದಲ್ಲಿ ರತ್ನ ಎಲೆಕ್ಟ್ರಿಕಲ್ಸ್ ವಿಜಯ ಕುಮಾರ್ ನಾಯ್ಡು, ವೆಂಕಿ ಎಲೆಕ್ಟ್ರಿಕಲ್ಸ್ ಮಂಡಿಕಲ್ ಶ್ರೀನಿವಾಸ್, ವರಪ್ರಕಾಶ್ ಎಲೆಕ್ಟ್ರಿಕಲ್ಸ್ ಮಧುಚಂದ್ರ, ಎಸ್‌ಎಲ್‌ಎನ್ ಎಲೆಕ್ಟ್ರಿಕಲ್ಸ್ನ ಸಂತೋಷ್, ರಾಮಚಂದ್ರಪ್ಪ ಸೈಯದ್ ಆರಿಫ್, ವೆಂಕಟೇಶ್, ಮುನಿರಾಜು, ಗುಡಿಬಂಡೆ ಶ್ರೀನಾಥ್, ಬಾಗೇಪಲ್ಲಿ ನಾರಾಯಣಸ್ವಾಮಿ, ಅಯೂಬ್ ಖಾನ್, ನಾಗರಾಜ್, ಸಲೀಂ, ಹರೀಶ್, ಮೌಲಾ ಮತ್ತು ಗಿರೀಶ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ವಿದ್ಯುತ್ ಗುತ್ತಿಗೆದಾರರ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವವನ್ನು ಆಚರಿಸಿ ಸಂಭ್ರಮಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು