LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವಿದ್ಯುತ್ ಚಾಲಿತ ಸಂಚಾರ ವ್ಯವಸ್ಥೆ; ಶೃಂಗಸಭೆಯಲ್ಲಿ ಭರವಸೆ ಮೂಡಿಸಿದ ಭಾರತ

ಬೆಂಗಳೂರು: 29 ನೇ ಕಾಪ್ ಶೃಂಗ ಸಭೆಯಲ್ಲಿ ಭಾರತವು ಇವಿ ಕಡೆಗಿನ ತನ್ನ ಪಯಾಣವನ್ನು ಜಾಗತಿಕ ವೇದಿಕೆಯ ಮುಂದೆ ಪ್ರಸ್ತುತಪಡಿಸಿತು. ಗ್ಲೋಬಲ್ ಸೌತ್‍ನಲ್ಲಿ ಭಾರತವು ಇವಿ ಸಾರಿಗೆ ಕ್ಷೇತ್ರದ ಕಡೆಗೆ ಹೊರಳುವ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.

ಹವಾಮಾನ ಬದಲಾವಣೆಗೆ ಪ್ರೇರಣೆ ನೀಡಬೇಕಾದ ‘ಸಿಒಪಿ 29’ ಶೃಂಗಸಭೆಯು ನಿಧಾನಗತಿಯ ಮಾತುಕತೆ ಮತ್ತು ಕಡಿಮೆ ನಿರೀಕ್ಷೆಗಳಿಂದ ಸೊರಗುತ್ತಿರುವ ನಡುವೆಯೂ ಭಾರತದ ಉಪಕ್ರಮಗಳು ಆಶಾದಾಯಕ ಸಂಗತಿ ಎನಿಸಿತು ಅಜೆರ್‍ಬೈಜಾನ್ ರಾಜಧಾನಿಯಲ್ಲಿ ಇತ್ತೀಚೆಗೆ ಹವಾಮಾಣ ಬದಲಾವಣೆ ಕುರಿತ ಚರ್ಚಗಾಗಿ ಸದಸ್ಯ ರಾಷ್ಟ್ರಗಳ `ಕಾಪ್ 29’ ಶೃಂಗಸಭೆಯ ನಡೆಯಿತು. ಅಲ್ಲಿನ `ವಿ ಮೀನ್ ಬಿಸಿನೆಸ್ ಪೆವಿಲಿಯನ್‍ನಲ್ಲಿ ನಡೆದ “ಇಂಡಿಯಾಸ್ ಎಲೆಕ್ಟ್ರಿಕ್ ಮೊಬಿಲಿಟಿ ಲೀಡರ್‍ಶಿಪ್ : ಸ್ಪಾಟ್‍ಲೈಟಿಂಗ್ ಇವಿ ಟ್ರಾನ್ಸಿಷನ್ ಪಾಥ್‍ವೇಸ್ ಫಾರ್ ದ ಗ್ಲೋಬಲ್ ಸೌತ್” ಎಂಬ ಗೋಷ್ಠಿಯಲ್ಲಿ ಭಾರತದ ಸುಸ್ಥಿರ ಸಾರಿಗೆ ಹವಾಮಾನ ಬದಲಾವಣೆಯಲ್ಲಿ ಭಾರತದ ನೀತಿಗಳು, ಉಪಕ್ರಮಗಳು ಹಾಗೂ ಸಹಭಾಗಿತ್ವವನ್ನು ವಿವರಿಸಲಾಯಿತು.

“ಕ್ಷಿಪ್ರವಾಗಿ ನಡೆಯುತ್ತಿರವ ಇವಿ ಪರಿವರ್ತನೆ ಯೋಜನೆಗಳನ್ನು ಹೆಚ್ಚಿಸುವ ಗುರಿಯನ್ನು ನಮ್ಮ ರಾಜ್ಯದ ನೀತಿಗಳು ಹೊಂದಿವೆ. ತೆಲಂಗಾಣವು ಭಾರತದಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಹೆಮ್ಮೆಯಾಗುತ್ತಿದೆ” ಎಂದು ತೆಲಂಗಾಣ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಟೋಮೋಟಿವ್ ಮತ್ತು ಇವಿ ನಿರ್ದೇಶಕ ಗೋಪಾಲಕೃಷ್ಣನ್ ವಿಸಿ ಅಭಿಪ್ರಾಯ ಪಟ್ಟರು.

ಭಾರತದ ವಿದ್ಯುತ್ ಚಾಲಿತ ಸಾರಿಗೆ ಕ್ರಾಂತಿಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಸುಸ್ಥಿರ ಮತ್ತು ಅಂತರ್ಗತ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದೆ ಎಂದು ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ.ಎನ್.ವಿ. ಪ್ರಸಾದ್ ಹೇಳಿದರು.ಇದೇ ಸಂದರ್ಭದಲ್ಲಿ ಜೆಎಸ್‍ಡಬ್ಲ್ಯು ಗ್ರೂಪ್‍ನ ಉಪಾಧ್ಯಕ್ಷ ಸ್ವರೂಪ್ ಬ್ಯಾನರ್ಜಿ, ಕಾರ್ಯತಂತ್ರ ಮುಖ್ಯಸ್ಥ ಸಂಜೀವ್ ಗೋಪಾಲ್ ಮತ್ತಿತರು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು