LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chikkaballapura

`ಶಿಕ್ಷಣಕ್ಕಿರುವ ಶಕ್ತಿ - ನಮ್ಮನ್ನು ಎಲ್ಲಿಗೆ ಬೇಕಾದರೂ ಕರೆದೊಯ್ಯಬಹುದು’

ಚಿಕ್ಕಬಳ್ಳಾಪುರ: ಶಿಕ್ಷಣಕ್ಕಿರುವ ಶಕ್ತಿಯೆಂದರೆ ಅದು ನಮ್ಮನ್ನು ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗಿ ಬದುಕಿಸುತ್ತದೆ.ಇದರ ಮೂಲಕ ಮೂರು ಜನರ ಋಣ ತೀರಿಸಲೇಬೇಕು. ತಂದೆ ತಾಯಿಯ ಗುರು ಮತ್ತು ಜತೆಗೆ ಸ್ನೇಹಿತರ ಋಣ ತೀರಿಸಿ.ಏಕೆಂದರೆ ಭಗವಂತನಷ್ಟೇ ತೂಕ ಇರುವ ಮತ್ತೊಂದು ಶಬ್ಧವೆಂದರೆ ಅದು ಸ್ನೇಹ ಮಾತ್ರ ಎಂದು ಅವಧೂತ ವಿನಯ್ ಗುರೂಜಿ ತಿಳಿಸಿದರು.

ನಗರದ ಹೊರವಲಯ ನಾಗಾರ್ಜುನ ಕಾಲೇಜಿನ ಮ್ಯಾನೇಜ್‍ಮೆಂಟ್ ವಿಭಾಗದಲ್ಲಿ ನಡೆದ ಪದವಿ ಪ್ರಧಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.ವಿದ್ಯಾರ್ಥಿ ದಿಸೆಯಲ್ಲಿ ಅಪರಿಚಿತರಾಗಿಯೇ ಪರಿಚಿತರಾಗುವವರು ದಿನಕಳೆದಂತೆ ಅತ್ಯುತ್ತಮ ಸ್ನೇಹಿತರಾಗುತ್ತಾರೆ. ಇಂತಹ ಸ್ನೇಹವನ್ನು ಪದವಿ ಮುಗಿದ ತಕ್ಷಣಕ್ಕೆ ಕಳೆದುಕೊಳ್ಳದೆ ಜೀವನಪರ್ಯಂತ ಉಳಿಸಿಕೊಳ್ಳಿ. ಅವರ ಕಷ್ಟಕ್ಕೆ ನೀವು ನಿಮ್ಮ ಕಷ್ಟಕ್ಕೆ ಅವರು ಹೆಗಲಾಗಬೇಕು.ಇಂತಹ ಬಳಗ ಹೆಚ್ಚಿದಷ್ಟು ಆರೋಗ್ಯವಂತ ಸಮಾಜ ಕಟ್ಟಲು ಸಾಧ್ಯವಾಗಲಿದೆ ಎಂದರು.

ನಿಮ್ಮ ಜತೆಗಿದ್ದ ಸ್ನೇಹಿತ ಕಷ್ಟದಲ್ಲಿದ್ದರೆ, ನೋಡಿ ಅಪಹಾಸ್ಯ ಮಾಡಿ ನಗುವುದಲ್ಲ.ಬದಲಿಗೆ ಅವನ ಕಷ್ಟಕ್ಕೆ ನೆರವಾಗುವ ಗುಣ ಬೆಳೆಸಿಕೊಳ್ಳಿ.ನಿಮ್ಮ ಬ್ಯಾಚ್‍ನ ಎಲ್ಲಾ ಗೆಳೆಯರು ಕೂಡಿ ಇಂತಿಷ್ಟು ಹಣ ಕೂಡಿಸಿ ಅವನ ಕಷ್ಟಕ್ಕೆ ನೆರವು ನೀಡಿದರೆ ಅವರ ಬದುಕು ಬಂಗಾರವಾಗಲಿದೆ ಎಂದು ಹೇಳಿದರು.ನಿಮ್ಮಿಷ್ಟದ ಪದವಿಗೆ ಸೇರುವ ನೀವು ಗುರುಗಳನ್ನು ತಂದೆ ತಾಯಿಯಂತೆ ಕಂಡಾಗ ಅವರ ಮಾತು ನಿಮಗೆ ತೊಂದರೆ ಕೊಡುವುದಿಲ್ಲ.ಅವರನ್ನು ಹಿಯಾಳಿಸಿ ಮಾತನಾಡಲು ಬಾಯಿ ಬರುವುದಿಲ್ಲ.ಉದ್ಯೋಗ ಬಯಸುವವರು ನಮ್ಮ ಆಶ್ರಮಕ್ಕೆ ಬಂದು ಸ್ವವಿಳಾಸದ ಪತ್ರಕೊಟ್ಟರೆ ಕೆಲಸ ಕೊಡಿಸುತ್ತೇನೆ ಎಂದರು.

ನಾಗಾರ್ಜುನ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಎಸ್.ಜಿ.ಗೋಪಾಲಕೃಷ್ಣ ಮಾತನಾಡಿ ವಿದ್ಯಾರ್ಥಿ ದಿಸೆಯಿಂದಲೇ ಅವಧೂತನಂತೆ ನಡೆದುಕೊಳ್ಳುತ್ತಿದ್ದ ವಿನಯ್ ಗುರೂಜಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ.ಅವರ ಸಹಪಾಠಿಗಳಿಗೆ ಎದುರಾಗುತ್ತಿದ್ದ ಅನೇಕ ಸಮಸ್ಯೆಗಳಿಗೆ ಕ್ಷಣ ಮಾತ್ರದಲ್ಲಿ ಪರಿಹಾರ ತೋರುತ್ತಿದ್ದರು.ಇಂತಹ ದಿವ್ಯತೇಜಸ್ವಿ ನಮ್ಮ ಕಾಲೇಜಿನ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ ಎಂದರು.

ನಾಗಾರ್ಜುನ ಕಾಲೇಜಿನ ಮನೋಹರ್ ನರಜ್ಜಿ ಮಾತನಾಡಿ ಸಾಕ್ಷಾತ್ ಭಗವಂತನೇ ನಮ್ಮ ಕಣ್ಣಮುಂದೆ ಪ್ರತ್ಯಕ್ಷವಾಗಿದ್ದಾರೆ ಎಂಬ ಭಾವ ಅವಧೂತ ವಿನಯ್ ಗುರೂಜಿ ಅವರನ್ನು ಕಂಡಾಗ ಮೂಡಿದೆ.ಇವರ ಮಾತುಗಳನ್ನು ಆಲಿಸಿದ ನೀವೆಲ್ಲಾ ಧನ್ಯರೇ ಸರಿ.ತಾನು ಓದಿರುವ ಕಾಲೇಜಿಗೆ ಬಂದಿ ಆಶೀರ್ವಚನ ನೀಡಿದ್ದಲ್ಲದೆ, ಯಾರಿಗೆ ಉದ್ಯೋಗದ ಅಗತ್ಯವಿದೆಯೋ ಅಂತಹವರಿಗೆ ಉದ್ಯೋಗ ನೀಡುವ ಅಭಯ ನೀಡಿದ್ದಾರೆ.ಉದ್ಯೋಗದ ಮೂಲಕ ಒಬ್ಬರ ಬಾಳು ಬೆಳಗಲು ಕಾರಣರಾದ ವಿನಯ್ ಗುರೂಜಿ ದೇವರ ಸ್ವರೂಪರು ಎಂದರು.

ಕಾರ್ಯಕ್ರಮದಲ್ಲಿ ಬಿಕಾಂ, ಬಿಸಿಎ,ಬಿಬಿಎ, ಬಿಎಸ್‍ಸಿ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಡಾ. ಆನಂದಮ್ಮ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಕಾರ್ಯಕ್ರಮದಲ್ಲಿ ಚಂದ್ರಶೇಖರ್ ರಾವ್ ಸೇರಿದಂತೆ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು