LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಶೂಟಿಂಗ್ ಮುಗಿಸಿದ 'ಒನ್ ಅಂಡ್ ಹಾಫ್'...ನಿರ್ಮಾಪಕ ಹುಟ್ಟುಹಬ್ಬಕ್ಕೆ ಸಾಂಗ್ ಗ್ಲಿಂಪ್ಸ್ ಉಡುಗೊರೆ

ಸ್ಯಾಂಡಲ್ ವುಡ್ ನಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲವು ಪ್ರಯತ್ನಗಳು ಯಶಸ್ವಿಯಾದರೆ, ಕೆಲವು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕಳೆದು ಹೋಗುತ್ತವೆ. ಹೊಸತನಕ್ಕೆ ಬೆಂಬಲ ಸಿಗಲಿ, ಸಿಗದೇ ಇರಲಿ ಆದರೆ ಪ್ರಯತ್ನಗಳಂತೂ ನಿಂತಿಲ್ಲ ಎಂಬುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಖುಷಿಯ ಸಂಗತಿ.

ಸಿನಿಮಾ ಬಗ್ಗೆ ಅತೀವ ಪ್ರೀತಿ ಹೊಂದಿರುವ ಖ. ಚರಣ್'ಒನ್ ಅಂಡ್ ಹಾಫ್' ಸಿನಿಮಾ ಮೂಲಕ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇವರ ಜನ್ಮದಿನದ ಪ್ರಯುಕ್ತ ಹಾಡಿನ ಗ್ಲಿಂಪ್ಸ್ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಖಾಸಗಿಹೋಟೆಲ್ ನಲ್ಲಿ ಪ್ರತಿಕಾಗೋಷ್ಠಿ ಇಡೀ ಚಿತ್ರತಂಡ ಭಾಗಿಯಾಗಿ ಮಾಹಿತಿ ಹಂಚಿಕೊಂಡಿದೆ.

ನಟಿ ಮಾನ್ವಿತಾ, ನನಗೆ ಇದು ಸ್ಪೆಷಲ್ ಸಿನಿಮಾ. ಈ ಸಿನಿಮಾ ಬಂದ ಮೇಲೆ ನನ್ನ ಲೈಫ್ ಗೆ ಹೊಸ ವ್ಯಕ್ತಿ ಬಂದರು. ಸಿನಿಮಾ ತುಂಬಾ ಚೆನ್ನಾಗಿ ಮಾಡಿದ್ದಾರೆ. ಮ್ಯೂಸಿಕ್ ಗೆ ಕುಂತ್ರೆ ಮಣಿ ಅಣ್ಣ ಸೂಪರ್. ಲಿಖಿತಾ ಸಿರಿ ನನ್ನ ಕೋಸ್ಟಾರ್. ನಮ್ಮ 3 ಜನಕ್ಕೂ ಒಳ್ಳೆ ಬಾಂಡಿಂಗ್ ಇತ್ತು. ಶ್ರೇಯಸ್ ಡೈರೆಕ್ಟರ್ ಆಕ್ಟರ್ ಆಗಿ ಒಳ್ಳೆ ಕೆಲಸ ಮಾಡಿದ್ದಾರೆ ಎಂದರು.

ನಿರ್ದೇಶಕ ಕಂ ನಾಯಕ ಶ್ರೇಯಸ್ ಚಿಂಗಾ ಮಾತನಾಡಿ, ಇದು ತಂತ್ರಜ್ಞನರ ಸಿನಿಮಾ..ಪ್ರತಿಯೊಬ್ಬ ತಂತ್ರಜ್ಞರು ಕೂಡ ಫ್ಯಾಮಿಲಿ ತರ. ಅವರು ಅವರ ಕರ್ತವ್ಯ ನಿರ್ವಹಿಸಿದ್ದಾರೆ. ನಾನು ಸಿನಿಮಾವನ್ನು ತೆರೆಗೆ ತರಲು ಬೆಂಬಲಿಸಿದ ಇಡೀ ಚಿತ್ರತಂಡಕ್ಕೆ ಧನ್ಯವಾದ. ಈ ಸಮಯದಲ್ಲಿ ಜನ ಥಿಯೇಟರ್ ಗೆ ಬರುತ್ತಿಲ್ಲ. ನಿಮ್ಮ ಬೆಂಬಲ ನಮಗೆ ಇರಬೇಕು. ಇದು ತುಂಬಾ ವಿಭಿನ್ನ ಸಿನಿಮಾ. ಬೇರೆ ಭಾಷೆಯಲ್ಲಿ ಮಾಡುವ ಸಾಧ್ಯತೆ ನೂರಷ್ಟಿದೆ ಎಂದು ಅಭಿಪ್ರಾಯಪಟ್ಟರು.

ನಿರ್ಮಾಪಕ ಆರ್.ಚರಣ್ ಸುಬ್ಬಯ್ಯ ಮಾತನಾಡಿ, ನಾನು ಗಾಂಧಿನಗರದ ಹುಡ್ಗ. ಶ್ರೇಯಸ್ ಮಾಡಿದ ಡೆವಿಡ್ ಸಿನಿಮಾ ನೋಡಿ ಇಷ್ಟವಾಯ್ತು. ನನಗೆ ಊಹೆ ಕೂಡ ಮಾಡಲು ಆಗಲಿಲ್ಲ. ಈ ರೀತಿ ಸಿನಿಮಾ ಮಾಡಿದ್ದಾನೆ ಎಂದು. ಯಾವುದಾದರೂ ಕನ್ಸೆಪ್ಟ್ ಇದ್ದರೆ ಹೇಳು ಎಂದು ಹೇಳಿದೆ. ಅವನು ಹೇಳಿದ ಕೇಳಿದ ಕಥೆ ನನಗೆ ಇಷ್ಟವಾಗಿ ಅಡ್ವಾನ್ಸ್ ಕೊಟ್ಟಿದ್ದೆ. ಒಂದೊಳ್ಳೆ ಬ್ಯೂಟಿಫುಲ್ ಸಬ್ಜೆಕ್ಟ್. ಈ ಸಿನಿಮಾವನ್ನು ಥಿಯೇಟರ್ ಗೆ ಬಂದು ನೋಡಬೇಕು ಎಂದರು.

ಶ್ರೇಯಸ್ ಚಿಂಗಾ, ಮಾನ್ವಿತಾ ಕಾಮತ್ ಜೊತೆಗೆ ಸಾಧು ಕೋಕಿಲಾ, ಅನಿನಾಶ್, ಸುಚೇಂದ್ರ ಪ್ರಸಾದ್, 'ಸ್ಪರ್ಶ' ರೇಖಾ, ಅನಂತು, ಸುಂದರಶ್ರೀ, 'ಕಾಮಿಡಿ ಕಿಲಾಡಿ' ಖ್ಯಾತಿಯ ಹಿತೇಶ್ ಕುಮಾರ್, ಮಹಾಂತೇಶ್ ಹಿರೇಮಠ್, ನಿಕಿತಾ ದೋರ್ತೊಡಿ, ಲಲಿತಾ ನಾಯಕ್, ರೋಹಿತ್ ಅರುಣ್, ಅಮಾನ್, ರಾಖಿ ಭೂತಪ್ಪ ಮುಂತಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

'ಒನ್ ಅಂಡ್ ಹಾಫ್' ಸಿನಿಮಾಗೆ ದೇವೇಂದ್ರ ಛಾಯಾಗ್ರಹಣ ಮಾಡುತ್ತಿದ್ದು, ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಕಥೆಯುಳ್ಳ ಈ ಸಿನಿಮಾಗೆ ಸುಲಕ್ಷ್ಮೀ ಫಿಲ್ಮ್ಸ್ ಬ್ಯಾನರ್‍ನಡಿ ಆರ್.ಚರಣ್ ಹಣ ಹಾಕುತ್ತಿದ್ದಾರೆ. ಇಂಪನಾ ಪ್ರಸಾದ್, ಅರ್ಪಿತ್ ನಾರಾಯಣ್, ಸಂತೋಷ್ ನಾಗೇನಹಳ್ಳಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು