LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಶ್ರೀವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಜರುಗಿದ 11ನೇ ವಾರ್ಷಿಕೋತ್ಸವ ಹಾಗೂ ಹನುಮ ಜಯಂತಿ

ಬೆಂಗಳೂರು: ಯಶವಂತಪುರ ಎಪಿಎಂಸಿ ಯಾರ್ಡ್‍ನ 9 ನೇ ಗೇಟ್ ಎದುರಿನಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಮಹಿಮೆ ಅಪಾರ. ಯಾರ್ಡ್‍ನಲ್ಲಿ ಶ್ರಮಪಟ್ಟು ದುಡಿಯುವ ಬಡ ಹಮಾಲಿಗಳು, ಸರಕು ಸಾಗಣೆ ವಾಹನಗಳ ಚಾಲಕರುಗಳು, ದಿನಗೂಲಿ ನೌಕರರ ಕಷ್ಟ ಸುಖಗಳಿಗೆ ಅಭಯ ಪ್ರದನಾಗಿ ದಕ್ಷಿಣ ಮುಖಿಯಾಗಿ ನಿಂತಿರುವ ಶ್ರೀ ಸ್ವಾಮಿಯೇ ಆಪದ್ಬಾಂಧವ.

ಸಹಸ್ರಾರು ಸರಕು ವಾಹನಗಳಲ್ಲಿ ಲೋಡುಗಟ್ಟಲೆ ಮಾರುಕಟ್ಟೆಗೆ ಬರುವ ದವಸಧಾನ್ಯ, ತರಕಾರಿ ಹಣ್ಣು ಹಂಪಲುಗಳ ಲಕ್ಷಾಂತರ ರೂಪಾಯಿಗಳ ವ್ಯಾಪಾರ ವಹಿವಾಟುಗಳ ಕಾರುಬಾರಿನ ನಡುವೆ, ಸಾವಿರಾರು ಜನರ ಓಡಾಟ ಈ ಭಾಗದಲ್ಲಿ ಸರ್ವೇಸಾಮಾನ್ಯ ಸಂಗತಿ. ಸ್ಥಳೀಯರೇ ಅಲ್ಲದೆ, ದೂರ ದೂರದ ಊರುಗಳಿಂದಲೂ ಬರುವ ಜನರಿಗೆ ಸನ್ನಿಧಾನವು ತನ್ನ ಇರುವಿಕೆಯಿಂದಾಗಿ ಭಕ್ತ ಜನರಲ್ಲಿನ ದುಗುಡ, ಭಯ, ನಿರಾಸೆ ನಿಸ್ಸಾಹಾಯಕತೆಯನ್ನು ದೂರ ಮಾಡಿ ಮನಸ್ಸಿಗೆ ಧೈರ್ಯ ತುಂಬಿ, ನವ ಚೈತನ್ಯ ತುಂಬುವ ಶಕ್ತಿಕೇಂದ್ರವೆಂಬುದಾಗಿ, ಜನರಲ್ಲಿ ಪ್ರಚಲಿತವಾಗಿದೆ ಈ ಸನ್ನಿಧಾನವು.

ಶುಕ್ರವಾರದಿಂದ ಮಂಗಳವಾರದವರೆವಿಗೂ ಐದು ದಿನಗಳ ಕಾಲ ಶ್ರೀ ಹನುಮ ಜಯಂತಿ ಆಚರಣೆಯೊಂದಿಗೆ ದೇವಾಲಯದ ಹನ್ನೊಂದನೇ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಸ್ವಾಮಿ ಅವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು, ಹವನ ಹೊಮಾದಿಗಳನ್ನು ದೇಗುಲದ ಪ್ರಧಾನ ಅರ್ಚಕರಾದ ಚಂದ್ರಶೇಖರ್ ರವರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಹಮ್ಮಿಕೊಳ್ಳಲಾಗಿದೆ ಅಲ್ಲದೆ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ಎಲ್ಲಾ 5 ದಿನಗಳಲ್ಲಿಯೂ ಪ್ರತಿನಿತ್ಯ ಮಧ್ಯಾಹ್ನ ಸುಮಾರು ಐದು ಸಾವಿರ ಜನರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದ್ದು ಸಾರ್ವಜನಿಕರು ಹಾಗೂ ಭಕ್ತಾದಿಗಳು ಸಕಾಲಕ್ಕೆ ಆಗಮಿಸಿ ಸ್ವಾಮಿ ಸೇವೆಯಲ್ಲಿ ಭಾಗವಹಿಸಿ ಅನ್ನ ಪ್ರಸಾದವನ್ನು ಸ್ವೀಕರಿಸಬೇಕೆಂದು ದೇವಸ್ಥಾನದ ಆಡಳಿತ ಸೇವಾ ಸಮಿತಿಯ ಅಧ್ಯಕ್ಷರು ಸೆಲ್ವರಾಜ್ ಮಾಹಿತಿ ನೀಡಿ ವಿನಂತಿಸಿಕೊಂಡಿರುತ್ತಾರೆ.

ಸಮಾಜ ಸೇವಕರು, ಬೆಂಗಳೂರು ಬಿಜೆಪಿ ಉತ್ತರ ಕಾರ್ಯಕಾರಿಣಿ ಸದಸ್ಯರಾದ ಡಾ. ಜಿ. ಎಸ್. ಚೌಧರಿ ಹಾಗೂ ದೇವಸ್ಥಾನದ ಅಧ್ಯಕ್ಷರಾದ ಜೆ. ಸೆಲ್ವರಾಜ್ ಹಾಗೂ ಇತರರ ಮೇಲುಸ್ತುವಾರಿಯಲ್ಲಿ ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಕಳೆದ ಹನ್ನೊಂದು ವರ್ಷಗಳಿಂದಲೂ ಪ್ರತಿ ತಿಂಗಳು ಹುಣ್ಣಿಮೆಯ ದಿನದಂದು ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ, ಲೋಕಕಲ್ಯಾಣಾರ್ಥ ಹವನ ಹೋಮ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತಿದ್ದು, ಅಮಾವಾಸ್ಯೆ ಹಾಗೂ ಪ್ರತಿ ಮಂಗಳವಾರದಂದು ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಪ್ರತಿ ಶನಿವಾರ ಸಂಜೆ 6 ರಿಂದ 9 ರ ತನಕ ನಡೆಯುವ ಹೂಪ್ರಸಾದದಲ್ಲಿ ಭಕ್ತಾದಿಗಳು ಭಾಗವಹಿಸಿ, ತಮ್ಮ ಮನೋ ಇಚ್ಛೆಗಳ ಈಡೇರಿಕೆಗಾಗಿ ಸ್ವಾಮಿಯ ಮೊರೆಹೋಗುವುದು ಹಾಗೂ ಇಲ್ಲಿ ಸ್ವಾಮಿಯ ಹೂ ಪ್ರಸಾದವನ್ನು ಪಡೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡ ಉದಾಹರಣೆಗಳು ಅನೇಕವಿವೆ ಎಂದು ವ್ಯವಸ್ಥಾಪಕರು ಮಾಹಿತಿ ನೀಡಿದರು.

ಉಪಾಧ್ಯಕ್ಷರು ಎನ್. ಪ್ರಕಾಶ್, ಲಲಿತ್ ಕುಮಾರ್ ಹಾಗೂ ಇತರರು ಈ ಕಾರ್ಯಕ್ರಮದ ಯಶಸ್ಸಿಗಾಗಿ ಸೇವಾನಿರತರಾಗಿದ್ದಾರೆ. ವಾರ್ಷಿಕೋತ್ಸವದ ಕಡೆಯ ದಿನವಾದ 17-12-2024 ಮಂಗಳವಾರದಂದು ಶ್ರೀ ವೀರಾಂಜನೇಯ ಸ್ವಾಮಿ ರವರ ಉತ್ಸವ ಮೂರ್ತಿಯನ್ನು ಭವ್ಯವಾಗಿ ಅಲಂಕರಿಸಲಾಗುವ ವಾಹನದಲ್ಲಿ ಎಪಿಎಂಸಿ ಯಾರ್ಡ್, ಗಜಾನನ ನಗರ -1, ಉಲ್ಲಾಸ ಟಾಕೀಸ್ ಸುತ್ತಮುತ್ತಲಿನ ಪ್ರದೇಶ, ಮಾರಪ್ಪನ ಪಾಳ್ಯ, ಅಶೋಕಪುರಂ, ಸೋಮೇಶ್ವರ ನಗರ ಹಾಗೂ ಗಜಾನನ ನಗರ -2 ಪ್ರದೇಶಗಳಲ್ಲಿ ವಾದ್ಯ ಮೇಳಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆಯನ್ನು ಆಯೋಜಿಸಲಾಗಿರುವುದಾಗಿ ವ್ಯವಸ್ಥಾಪಕರು ತಿಳಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು