LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chikkaballapura

ಸಚಿವರಿಂದ ಪ್ರಜಾಸೌಧ ಮಂಜೂರಾತಿ ಭರವಸೆ

ಬಾಗೇಪಲ್ಲಿ: ಅನೇಕ ದಿನಗಳ ಜನರ ಕನಸು ನನಸಾಗಿದೆ ಚೇಳೂರು ತಾಲ್ಲೂಕಿಗೆ ಮುಂದಿನ ವರ್ಷದಲ್ಲಿ ಪ್ರಜಾಸೌಧ (ಮಿನಿವಿಧಾನಸೌಧ) ಮಂಜೂರಾತಿ ಮಾಡಿಸಿ ಕೊಡುವುದಾಗಿ ರಾಜ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಭರವಸೆ ನೀಡಿದರು.

ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜೋಡಿ ಗ್ರಾಮಗಳ ಪಹಣಿ ವಿತರಣೆ ಕಾರ್ಯಕ್ರಮದ ನಂತರ ಚೇಳೂರು ತಾಲ್ಲೂಕು ಹೋರಾಟಗಾರರ ಮನವಿಪತ್ರ ಸ್ವೀಕರಿಸಿ ಮಾತನಾಡಿದ ಅವರು ಚೇಳೂರು ನೂತನ ತಾಲ್ಲೂಕಿಗೆ ಅಭಿವೃದ್ದಿ ದೃಷ್ಠಿಯಿಂದ ಒಳ್ಳೆಯ ಜಾಗವನ್ನು ನೋಡಿ ಶಾಸಕರ ಮುಖೇನಾ ಹಂತ ಹಂತವಾಗಿ ತಾಲ್ಲೂಕು ಮಟ್ಟದ ಸರಕಾರಿ ಕಛೇರಿಗಳನ್ನ ತೆರಸುವುದಾಗಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ ಸುಧಾಕರ್ ಮಾತನಾಡಿ ಜಿಲ್ಲೆಯ ಚೇಳೂರು ಮತ್ತು ಮಂಚೇನಹಳ್ಳಿ ತಾಲ್ಲೂಕುಗಳನ್ನು ಅಭಿವೃದ್ದಿ ಮಾಡುತ್ತೇವೆ ಅನೇಕ ವರ್ಷಗಳ ತಾಲ್ಲೂಕು ಆಗಲು ಚೇಳೂರು ಹೋರಾಟ ಸಮಿತಿ ಹೋರಾಟಗಾರರು ಅಲ್ಲಿನ ಜನತೆ ಸುಮಾರು ವರ್ಷಗಳ ಸತತ ಹೋರಾಟದ ಪ್ರತಿಫಲವಾಗಿ ತಾಲ್ಲೂಕಾಗಿದೆ ಎಂದರು.

5 ವರ್ಷಗಳಾದರೂ ಚೇಳೂರು ತಾಲ್ಲೂಕಿಗೆ ಅಧಿಕಾರಿಗಳಿಲ್ಲ ಯಾವುದೇ ಇಲಾಖೆಗಳ ಕಛೇರಿಗಳಿಲ್ಲ ಭೂಮಿ ಶಾಖೆ ಪ್ರಾರಂಭ ಮಾಡ ಎರಡುವರೇ ತಿಂಗಳಿಂದ ವಿಳಂಭ ಮಾಡುತ್ತಿದ್ದಾರೆ ಚಿಂತಾಮಣಿ ತಾಲ್ಲೂಕಿನಿಂದ ಚೇಳೂರು ತಾಲ್ಲೂಕಿಗೆ ಬರುವ ಚಿಲಕಲನೇರ್ಪು, ಏನಿಗದಲೆ, ಬುರುಡಗುಂಟೆ, ಟಿ.ಗೊಲ್ಲಹಳ್ಳಿ, ನಾರೇಮದ್ದೇಪಲ್ಲಿ, ಸೋಮನಾಥಪುರ, ಕುರುಬರಹಳ್ಳಿ, ಪೋಲನಾಯಕನಹಳ್ಳಿ ಗ್ರಾಮಗಳ 8 ಕಂದಾಯ ವೃತ್ತಗಳ ಹಳೇ ಮೂಲ ದಾಖಲಾತಿಗಳು ಬಂದಿರುವುದಿಲ್ಲ ಚೇಳೂರು ಸರಕಾರಿ ಆಸ್ತಿಗಳು ಕಬಳಿಸಿ ಭೂ-ಕಳ್ಳರು ಒತ್ತುವರಿ ಮಾಡಿಕೊಂಡಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿದೆ ಸರಕಾರಿ ಆಸ್ಪತ್ರೆ ಮೇಲ್ಧರ್ಜಗೆ ಏರಿಸಬೇಕಾಗಿದೆ ಇಬ್ಬರು ವೈಧ್ಯಾಧಕಾರಿಗಳನ್ನು ನೇಮಕ ಮಾಡಬೇಕೆಂದು ಸಚಿವರುಗಳಿಗೆ ಮನವಿ ಪತ್ರದಲ್ಲಿ ಮನವಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ, ಕಂದಾಯ ವಿಭಾಗೀಯ ಆಯುಕ್ತ ಸುನೀಲ್ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹಾಜರಿದ್ದ ಸಭೆಯಲ್ಲಿ ಚೇಳೂರು ತಾಲ್ಲೂಕು ಹೋರಾಟ ಸಮಿತಿ ನಿಯೋಗದಲ್ಲಿ ಪ್ರಮುಖ ಸದಸ್ಯರಾದ ಮರವಪಲ್ಲಿ ಜಿ.ವಿ.ಕೃಷ್ಣಾರೆಡ್ಡಿ. ಕೋತ್ತೂರುಪಲ್ಲಿ ಕೆ.ವಿ.ಶ್ರೀನಿವಾಸರೆಡ್ಡಿ ಪಿ.ರಾಧಾಕೃಷ್ಣ ಪೇಪರ್ ಚಲಪತಿ, ಜಿ.ಪಾಪಿರೆಡ್ಡಿ, ಕೆ.ಎನ್.ಅಶ್ವಥನಾರಾಯಣ, ಜಿ.ಸುಧಾಕರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು