LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸಚಿವರು, ಸ್ವಾಮೀಜಿಯ ಕೈವಾಡ ಶಂಕೆ!

ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಗೆದಷ್ಟು ಅವ್ಯವಹಾರ ಬಯಲಾಗುತ್ತಿದೆ. ಕಳೆದ ವಾರ ಚಿನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಾಹಿತಿ ಕಲೆ ಹಾಕಿದ್ದ ಡಿಆರ್‍ಐ ಅಧಿಕಾರಿಗಳಿಗೆ ಈಗ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ರನ್ಯಾ ರಾವ್ ರಾಜ್ಯ ಸರ್ಕಾರದಲ್ಲಿ ಇಬ್ಬರು ಪ್ರಮುಖ, ಪ್ರಭಾವಿ ರಾಜಕಾರಣಿಗಳ ಸಂಪರ್ಕ ಹೊಂದಿದ್ದಳು ಎಂಬ ಮಾಹಿತಿ ಸಿಕ್ಕಿತ್ತು. ಆದ್ರೆ, ಈಗ ಹೊಸದಾಗಿ ಪ್ರಕರಣದಲ್ಲಿ ಸ್ವಾಮೀಜಿ ಒಬ್ಬರು ಕೂಡ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದ ಸರ್ಕಾರ ಸಿಐಡಿ ತನಿಖೆಗೆ ವಹಿಸಿದ್ರೆ, ಇತ್ತ ಡಿಆರ್‍ಐ ಅಧಿಕಾರಿಗಳು ಸಿಬಿಐಗೆ ಪ್ರಕರಣವನ್ನು ಹಸ್ತಾಂತರ ಮಾಡುವ ಪ್ರಕ್ರಿಯೆ ಮಾಡಿದ್ದಾರೆ. ಇದರ ಭಾಗವಾಗಿಯೇ ಕಳೆದ ಸೋಮವಾರ ಸಂಜೆ ಇಬ್ಬರು ಸಿಬಿಐ ಅಧಿಕಾರಿಗಳು ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ನಟಿ ರನ್ಯಾ ರಾವ್ ಮನೆಗೆ ಭೇಟಿ ನೀಡಿದ್ರು. ತಪಾಸಣೆ ನಡೆಸಿದ್ರು. ಈ ಸಂದರ್ಭದಲ್ಲಿ 2 ಕೋಟಿ ರೂಪಾಯಿ ನಗದು ಹಾಗೂ ಅರ್ಧ ಕೆಜಿ ಬಂಗಾರ ಕೂಡ ರನ್ಯಾ ರಾವ್ ಅವರ ಮನೆಯಲ್ಲಿ ಸಿಕ್ಕಿತ್ತು. ಈಗ ರಾಜ್ಯ ಸರ್ಕಾರದ ಇಬ್ಬರು ಪ್ರಮುಖ ಪ್ರಭಾವಿ ಸಚಿವರ ಬುಡಕ್ಕೆ ಈ ಪ್ರಕರಣ ಬಂದಿದ್ದು, ಅವರು ಯಾರು? ಪ್ರಕರಣದಲ್ಲಿ ಅವರ ಪಾತ್ರವೇನು? ಅವರ ತಲೆದಂಡಕ್ಕೆ ಆಗ್ರಹ ಏನಾದ್ರು ಮಾಡಲಾಗುತ್ತಾ? ಎಂಬ ಪ್ರಶ್ನೆ ಎದ್ದಿದೆ.

ಇನ್ನು ರನ್ಯಾ ರಾವ್ ಅವರ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಬಗ್ಗೆ ಬಿಜೆಪಿಯ ಶಾಸಕ ಸುನಿಲ್‍ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮೊದಲು ಗೋಲ್ಡ್ ತಂದಿದ್ದು ಎಲ್ಲಿಗೆ ಹೋಯ್ತು? ಚಾಮರಾಜಪೇಟೆಗಾಸದಾಶಿವನಗರಕ್ಕಾ? ಎಂದು ಪ್ರಶ್ನಿಸಿದ್ದು, ಚಾಮರಾಜಪೇಟೆ ಅಂದರೆ ಏನು? ಸದಾಶಿವನಗರ ಅಂದರೆ ಏನು? ಎಂಬ ಕುತೂಹಲ ಹುಟ್ಟಿದೆ.ಚಾಮರಾಜಪೇಟೆಯ ಶಾಸಕರಾಗಿ ಸರ್ಕಾರದಲ್ಲಿ ಅಂಗವೂ ಆಗಿರುವ ಜಮೀರ್ ಅಹ್ಮದ್ ಖಾನ್ ಅವರ ಹೆಸರು ಹೇಳದೇ ಸುನಿಲ್‍ಕುಮಾರ್ ಏನಾದ್ರೂ ಟಾಂಗ್ ಕೊಟ್ರಾ? ಇನ್ನು ಸದಾಶಿವನಗರದಲ್ಲಿ ಸಾಕಷ್ಟು ರಾಜಕಾರಣಿಗಳ ಮನೆಗಳಿದೆ.

ಅಲ್ಲಿ ಏನಾದ್ರೂ ಟಾರ್ಗೆಟ್ ಮಾಡಿಕೊಂಡು ಸುನಿಲ್‍ಕುಮಾರ್ ಹೀಗೆ ಹೇಳಿದ್ರಾ? ಎಂಬ ಅನುಮಾನ ಹುಟ್ಟಿದೆ.ಇದೆಲ್ಲದರ ಮಧ್ಯೆ ಸರ್ಕಾರ ತನ್ನ ವರ್ಚಸ್ಸಿಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ.ಇಷ್ಟೆಲ್ಲದರ ಮಧ್ಯೆ, ಈ ಪ್ರಕರಣದಲ್ಲಿ ಪ್ರಬಲ ಸಮುದಾಯಕ್ಕೆ ಸೇರಿದ ಸ್ವಾಮೀಜಿ ಒಬ್ಬರು ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಅದನ್ನು ಮಾಧ್ಯಮಗಳ ಮುಂದೆ ರಿವೀಲ್ ಮಾಡಿಲ್ಲ.ಒಟ್ಟಾರೆ, ಒಂದು ಕಡೆ ಸರ್ಕಾರ ತನಗೂ ಪ್ರಕರಣಕ್ಕೆ ಸಂಬಂಧವಿಲ್ಲ ಎಂಬಂತೆ ಪಾರದರ್ಶಕ ತನಿಖೆಗೆ ಎಂದು ಸಿಐಡಿಗೆ ವಹಿಸಿದ್ರೆ, ಡಿಆರ್‍ಐ ಅಧಿಕಾರಿಗಳು ಸಿಬಿಐಗೆ ಕೇಸ್ ರೆಫರ್ ಮಾಡುವ ಮೂಲಕ ಹೊಸ ಆಯಾಮದಲ್ಲಿ ತನಿಖೆಯ ದಿಕ್ಕನ್ನು ಕೊಂಡೊಯ್ಯುತ್ತಿದ್ದಾರೆ. ಇದರಲ್ಲಿ ಜಯ ಯಾರ ಪಾಲಿಗೆ ಸಿಗಲಿದೆ? ಎಂಬುದೇ ಕುತೂಹಲ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು