LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಸತೀಶ್ ನೀನಾಸಂರಿಂದ `ಧೀರ ಭಗತ್ ರಾಯ್' ಚಿತ್ರದ ಹಾಡು ಬಿಡುಗಡೆ

`ಆಕಾಶದ ನೀಲಿ ಎದ್ದು' ಹಾಡಿಗೆ ಕವಿರಾಜ್ ಸಾಹಿತ್ಯ, ನವೀನ್ ಸಜ್ಜು ಗಾಯನ`ಧೀರ ಭಗತ್ ರಾಯ್' ಚಿತ್ರವು ಡಿ. 6ರಂದು ರಾಜ್ಯಾದ್ಯಂತ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಚಿತ್ರದ `ಆಕಾಶದ ನೀಲಿ ಎದ್ದು' ಎಂಬ ಹಾಡು ಬಿಡುಗಡೆ ಆಗಿದೆ. ಖ್ಯಾತ ಗೀತರಚನೆಕಾರ ಕವಿರಾಜ್ ಬರೆದು, ನವೀನ್ ಸಜ್ಜು ಹಾಡಿರುವ ಈ ಹಾಡಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡನ್ನು ಇತ್ತೀಚೆಗೆ ಸತೀಶ್ ನೀನಾಸಂ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಹಾಡು ಬಿಡುಗಡೆ ಮಾಡಿ ಮಾತನಾಡಿದ ಸತೀಶ್ ನೀನಾಸಂ, `ಈ ಸಿನಿಮಾ ಹೊಸಬರದ್ದಿರಬಹುದು. ಆದರೆ, ಇಲ್ಲಿರುವವರೆಲ್ಲ ಅನುಭವಸ್ಥರೇ. ಬಹಳ ಚೆನ್ನಾಗಿ ತಿಳಿದುಕೊಂಡಿರುವವರು, ಕಷ್ಟಗಳನ್ನು ನೋಡಿರುವವರು, ಬದುಕಲ್ಲಿ ಸಹಿಸಿಕೊಂಡವರು, ಸೋತವರು, ಬಾಗಿದವರು. ಅದರಲ್ಲಿ ನಾನು ಸಹ ಒಬ್ಬ. ಈ ತರಹದ ಸಿನಿಮಾಗಳನ್ನು ನಾನು ಯಾಕೆ ಮಾಡುವುದಿಲ್ಲ ಎಂದು ಹಲವರು ಕೇಳುತ್ತಿರುತ್ತಾರೆ.

ನನಗೆ ಈ ತರಹದ ಕಥೆಗಳೇ ಇದುವರೆಗೂ ಬಂದಿಲ್ಲ. ನಾನು ಸಹ ಇಂಥ ಚಿತ್ರ ಮಾಡುವುದಕ್ಕೆ ಕಾಯುತ್ತಿದ್ದೇನೆ. ಒಳ್ಳೆಯ ನಿರ್ದೇಶಕ ಬೇಕು, ಒಳ್ಳೆಯ ತಂತ್ರಜ್ಞರು ಸಿಕ್ಕರೆ ಖಂಡಿತಾ ಸಿನಿಮಾ ಮಾಡುತ್ತೇನೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಒಂದು ಸಮುದಾಯದ ಹೋರಾಟವನ್ನು ಧೈರ್ಯವಾಗಿ ಹೇಳಲಾಗುತ್ತಿದೆ. ಒಂದು ಹೋರಾಟವನ್ನು ಮಾತುಗಳ ಮೂಲಕ, ದೃಶ್ಯಗಳ ಮೂಲಕ ಕಟ್ಟಿಕೊಡುತ್ತಿರುವ ಬಗ್ಗೆ ಖುಷಿ ಇದೆ. ಈ ತರಹದ ಸಿನಿಮಾಗಳು ಸಾಕಷ್ಟು ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ಬಂದಿರಲಿಲ್ಲ. ಈಗ ನಿಮ್ಮ ಸಿನಿಮಾ ನಾಂದಿ ಹಾಡುತ್ತಿದೆ. ಇದು ಲಕ್ಷಾಂತರ ಜನ ನೋಡುವ ಸಿನಿಮಾ ಆಗಬೇಕು' ಎಂದರು.

ಹಾಡಿಗೆ ಸಾಹಿತ್ಯ ರಚಿಸಿರುವ ಕವಿರಾಜ್ ಮಾತನಾಡಿದರು. ಕರ್ಣನ್ ಕಥೆ, ಚಿತ್ರಕತೆ ಬರೆದು ನಿರ್ದೇಶಿಸಿರುವ `ಧೀರ ಭಗತ್ ರಾಯ್' ಚಿತ್ರದಲ್ಲಿ ನಾಯಕನಾಗಿ ರಾಕೇಶ್ ದಳವಾಯಿ ನಟಿಸುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ಸುಚರಿತಾ ನಟಿಸಿದ್ದಾರೆ. ಜೊತೆಗೆ ಶರತ್ ಲೋಹಿತಶ್ವ, ನೀನಾಸಂ ಅಶ್ವಥ್, ಪ್ರವೀಣ್ ಗೌಡ, ಕೆ.ಎಂ. ಸಂದೇಶ್ ಮುರೋಳಿ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ, ಸೆಲ್ಪಂ ಜಾನ್ ಛಾಯಾಗ್ರಹಣವಿದೆ. ಚಿತ್ರವನ್ನು ವೈಟ್ ಲೋಟಸ್ ಎಂಟರ್ಟೈನ್ಮೆಂಟ್ ಮತ್ತು ಶ್ರೀ ಓಂ ಸಿನಿ ಎಂಟ್ರಟೈನರ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು