LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಸಿಎಂ ಜೊತೆಗೆ ಸಭೆ ನಡೆಸಿ ಚನ್ನರಾಯಪಟ್ಟಣ ರೈತರ ಸಮಸ್ಯೆಗೆ ಪರಿಹಾರ: ಕೆಎಚ್ ಮುನಿಯಪ್ಪ

ದೇವನಹಳ್ಳಿ: ಫಲವತ್ತಾದ ಕೃಷಿ ಭೂಮಿಯನ್ನು ಬಲವಂತದ ಭೂಸ್ವಾಧೀನದಿಂದ ಕೈ ಬಿಡುವಂತೆ ಒತ್ತಾಯಿಸಿ ಕಳೆದ 900 ದಿನಗಳಿಂದ ಧರಣಿ ಕುಳಿತಿರುವ ದೇವನಹಳ್ಳಿ ತಾಲ್ಲೂಕು, ಚನ್ನರಾಯಪಟ್ಟಣ ಹೊಬಳಿಯ 13 ಹಳ್ಳಿಗಳ ರೈತರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆಎಚ್ ಮುನಿಯಪ್ಪನವರ ಮನೆಯ ಮುಂದೆ ಧರಣಿ ನಡೆಸಿದರು.

ದೇವನಹಳ್ಳಿ ತಾಲ್ಲೂಕು,ಚನ್ನರಾಯಪಟ್ಟಣ ಹೋಬಳಿಗೆ ಸೇರಿದ 13 ಗ್ರಾಮಗಳ, 1777-02 ಎಕರೆ ಕೃಷಿಭೂಮಿಯನ್ನು ಕೆ.ಐ.ಎ.ಡಿ.ಬಿ ಕೈಗಾರಿಕೆಗಳ ಅಭಿವೃದ್ಧಿಯ ಹೆಸರಲ್ಲಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು, ಸ್ಥಳೀಯ ಬಹುಪಾಲು ರೈತರು ಇದನ್ನು ವಿರೋಧಿಸಿ ಕಳೆದ 901ದಿನಗಳಿಂದ ರೈತರು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ಸರ್ಕಾರಗಳು ಬದಲಾದರೂ ಇದುವರೆಗೂ ರೈತರ ಸಮಸ್ಯೆ ಬಗೆಹರಿದಿಲ್ಲದ ಕಾರಣ ಇಂದು ರೈತರು ಸಂಯಮದ ಕಟ್ಟೆ ಹೊಡೆದು ತಮ್ಮ ಶಾಸಕರು ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರ ಮನೆಯ ಮುಂದೆ ಬಂದು ಕುಳಿತು ನ್ಯಾಯ ಸಿಗುವ ವರೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದ್ದಿದ್ದರು.ಹಿಂದಿನ ವಿಧಾನಸಭಾ ಚುನಾವಣೆ ಸಂದರ್ಭ ದಲ್ಲಿ ಇಂದಿನ ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪನವರು ಸೇರಿ ದಂತೆ ಇಂದಿನ ಹಲವು ಮಂತ್ರಿಗಳು ವಿರೋಧ ಪಕ್ಷದಲ್ಲಿದ್ದಾಗ ಧರಣಿ ನಿರತ ರೈತರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಆದರೆ ಸರ್ಕಾರ ಬದಲಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆ ಯಾದ ಒಂದೂವರೆ ವರ್ಷದ ನಂತರವೂ ಕೂಡ ಸಮಸ್ಯೆ ಬಗೆಹರಿಸದಿರುವುದು ರೈತರ ಕೋಪಕ್ಕೆ ಕಾರಣವಾಗಿತ್ತು.

ಈ ವಿಚಾರವಾಗಿ ಅನೇಕ ಬಾರಿ ಮಂತ್ರಿಗಳನ್ನು ಬೇಟಿ ಮಾಡಿದ್ದಾರೆ, ಒಮ್ಮೆ ಕೈಗಾರಿಕಾ ಸಚಿವರೊಂದಿಗೆ ಸಭೆ ಕರೆದಾಗ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿರುತ್ತಾರೆ ಕೂಡ. ಅದಲ್ಲದೆ ಲೋಕಸಭಾ ಚುನಾವಣೆ ಸಮಯದಲ್ಲಿ ಧರಣಿ ಸ್ಥಳಕ್ಕೆ ಬಂದ ಸಚಿವರು “ಸಮಸ್ಯೆ ಬಗೆಹರಿಸಲು ತಡವಾಗಿದೆ, ಆದರೆ ಇನ್ನು ತಡ ಮಾಡುವುದಿಲ್ಲ, ಚುನಾವಣೆ ಮುಗಿದ ತಕ್ಷಣ ಸಮಸ್ಯೆ ಬಗೆಹರಿಸುತ್ತೇವೆ” ಎಂದು ಮಾತು ಕೊಟ್ಟಿರುತ್ತಾರೆ.

ಇಷ್ಟಾದಮೇಲು ನಂತರ ಪ್ರತಿ ಬಾರಿ ಬೇಟಿಯಾದಾಗಲೂ ಒಂದಲ್ಲ ಒಂದು ಕಾರಣ ನೀಡಿ ಮುಂದೂಡುತ್ತಲೇ ಇರುವುದು, ಸಬೂಬು ಹೇಳುತ್ತಿರುವುದು ರೈತರನ್ನು ಕೆರಳಿಸಿತ್ತು.ಬೆಳಿಗ್ಗೆ 8.00 ಗಂಟೆಯಿಂದಲೇ 200 ಕ್ಕೂ ಹೆಚ್ಚು ರೈತರು ಸಂಜಯನಗರದ ಸಚಿವರ ಮನೆಯ ಮುಂದೆ ಜಮಾಯಿಸಿದ್ದರಾದರೂ ಬೆಳಿಗ್ಗೆಯೆ ಮನೆಯಿಂದ ಹೊರಟಿದ್ದ ಸಚಿವರ ಮಾತಿಗೆ ಸಿಗದಿದ್ದಾಗ ಮತ್ತಷ್ಟು ಸಿಟ್ಟಿಗೆದ್ದ ರೈತರು, “ಮಾನ್ಯ ಮಂತ್ರಿಗಳ ಮೇಲೆ ನಂಬಿಕೆ ಇಟ್ಟು ವರ್ಷಾನುಗಟ್ಟಲೆ ಕಾಯುತ್ತಿರುವ ಸಾವಿರಾರು ರೈತರಿಗೆ ಅವಮಾನ ಮಾಡುತ್ತಿದ್ದಾರೆ” ಎಂದು ಆರೋಪಿಸಿ, “ಇಂದೂ ಕೂಡ ನಿಮ್ಮನ್ನು ನಂಬುತ್ತೇವೆ,

ಈಗಲಾದರೂ ತಮ್ಮ ಜವಾಬ್ದಾರಿಯಲ್ಲೆ ಮುಖ್ಯಮಂತ್ರಿಗಳು, ಬೃಹತ್ ಕೈಗಾರಿಕಾ ಸಚಿವರು ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆ ಮಾಡಿಸಿ, ತಮ್ಮ ಮಾತಿನಂತೆ ಚನ್ನರಾಯಪಟ್ಟಣ ಹೋಬಳಿಯ ಉದ್ದೇಶಿತ ಭೂಸ್ವಾಧೀನವನ್ನು ರದ್ದುಗೊಳಿಸುವ ಘೋಷಣೆ ಮಾಡಿ” ಅಲ್ಲಿಯವರೆಗೂ ನಾವು ಊರಿಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು.

ಇದರ ಮದ್ಯೆ ಹಲವಾರು ಬಾರಿ ಪೋನ್ ಕರೆಯ ಮೂಲಕ ರೈತ ನಾಯಕರುಗಳನ್ನ ಸಂಪರ್ಕಿಸಿ ಮನವೊಲಿಸಲು ಪ್ರಯತ್ನಿಸಿದರಾದರೂ ರೈತರು ಯಾರ ಮಾತು ಕೇಳಲು ಸಿದ್ದರಿರಲಿಲ್ಲ. ಕೊನೆಗೆ ರೈತಮುಖಂಡರಾದ ಜೆಸಿ ಬಯ್ಯಾರೆಡ್ಡಿಯವರಿಗೆ ಕರೆಮಾಡಿ, ಇದೇ ತಿಂಗಳ 23ಕ್ಕೆ ಮುಖ್ಯಮಂತ್ರಿಗಳೊಂದಿಗೆ ಸಭೇ ನಡೆಸಿ ತೀರ್ಮಾನ ಮಾಡುವುದಾಗಿ ಮಾತುಕೊಟ್ಟ ನಂತರ ತಾತ್ಕಾಲಿಕವಾಗಿ ಹಿಂದೆ ತೆಗೆದುಕೊಳ್ಳಲಾಯಿತು. ಸೆಪ್ಟೆಂಬರ್ 23 ಕ್ಕೆ ಸಭೆ ನಡೆಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಹೆಚ್ಚರಿಸಿದ ರೈತರು ತಮ್ಮ ಮನೆಗಳಿಗೆ ತೆರಳಿದರು.

ಹೋರಾಟದಲ್ಲಿ, ಕರ್ನಾಟಕ ಪ್ರಾಂತ ರೈತ ಸಂಘದ, ಯಶವಂತ್, ಚಂದ್ರ ತೇಜಸ್ವಿ, ಪ್ರಭಾ ಬೆಳವಂಗಲ, ಜನವಾದಿ ಮಹಿಳಾ ಸಂಘಟನೆಯ ದೇವಿ, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆಂಜನೇಯ ರೆಡ್ಡಿ, ರೈತಮುಖಂಡರಾದ ಕಾರಳ್ಳಿ ಶ್ರೀನಿವಾಸ್, ಮಾರೇಗೌಡ, ನಂಜಪ್ಪ ಸೇರಿದಂತೆ 13ಹಳ್ಳಿಗಳ ರೈತರು, ರೈತ ಮಹಿಳೆಯರು, ಯುಜನರು ಭಾಗಿಯಾಗಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು