LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸೆ.28ಕ್ಕೆ ಪಾಂಚಜನ್ಯ ಪ್ರತಿಷ್ಠಾನದ 12ನೇ ವಾರ್ಷಿಕೋತ್ಸವ: `ಪಾಂಚಜನ್ಯ ಪುರಸ್ಕಾರ' ಪ್ರದಾನ

ಸೆ.28, ಶನಿವಾರ ಪಾಂಚಜನ್ಯ ಪ್ರತಿಷ್ಠಾನದ ಹನ್ನೆರಡನೇ ವಾರ್ಷಿಕೋತ್ಸವ ಮತ್ತು ಆರೋಗ್ಯ ಕ್ಷೇತ್ರದ ಅನನ್ಯ ಸೇವೆಗಾಗಿ ಖ್ಯಾತ ವೈದ್ಯ ಬರಹಗಾರ ಡಾ.ನಾ. ಸೋಮೇಶ್ವರಅವರಿಗೆ 2024ನೇ ಸಾಲಿನ ಪ್ರತಿಷ್ಠಿತ `ಪಾಂಚಜನ್ಯ ಪುರಸ್ಕಾರ' ಪ್ರದಾನ ಸಮಾರಂಭ.

ಆಧ್ಯಾತ್ಮಿಕತೆಯ ತಳಹದಿಯ ಮೇಲೆ ಅಕ್ಷರ - ಆರೋಗ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪಾಂಚಜನ್ಯ ಪ್ರತಿಷ್ಠಾನದ ಕಳೆದ ಹನ್ನೊಂದು ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ . ಪ್ರತಿಷ್ಠಾನದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಕ್ಷರ, ಆರೋಗ್ಯ , ಅಧ್ಯಾತ್ಮ ಕ್ಷೇತ್ರದಲ್ಲಿನ ಸಾಧಕ ಶ್ರೇಷ್ಠರನ್ನು ಗುರುತಿಸಿ ಪಾಂಚಜನ್ಯ ಪುರಸ್ಕಾರ ನೀಡಿ ಗೌರವಿಸುವ ಪರಿಪಾಠ ಬೆಳೆದು ಬಂದಿದೆ.

ಸೆ.28 , ಶನಿವಾರ ಮಧ್ಯಾಹ್ನ 11.30ಕ್ಕೆ ಬೆಂಗಳೂರು ಜಯನಗರ 4ನೇ ಬ್ಲಾಕ್‍ನ ಯುವಪಥ , ವಿವೇಕ ಆಡಿಟೋರಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆರೋಗ್ಯ ಕ್ಷೇತ್ರದ ಅನನ್ಯ ಸೇವೆಗಾಗಿ ಖ್ಯಾತ ವೈದ್ಯ ಬರಹಗಾರ ಡಾ. ನಾ. ಸೋಮೇಶ್ವರ ಅವರಿಗೆ ಪ್ರತಿಷ್ಠಿತ `ಪಾಂಚಜನ್ಯ ಪುರಸ್ಕಾರ' ವನ್ನು ನೀಡಿ ಸನ್ಮಾನಿಸಲಾಗುವುದು. ಅಭಿನಂದನಾ ಪತ್ರ,ಸ್ಮರಣಿಕೆ, ಫಲ ತಾಂಬೂಲಜೊತೆಗೆ ಪ್ರಸ್ತುತ ವರ್ಷದಿಂದ ಪುರಸ್ಕಾರವು ರೂ.ಒಂದು ಲಕ್ಷ ನಗದು ಒಳಗೊಂಡಿದೆ , ಮೆ|| ಆನಂದ್ ರಾಥಿ ವೆಲ್ತ್ ಲಿಮಿಟೆಡ್ ಹಾಗೂ ಆರ್ಕಿಡ್ ಲ್ಯಾಮಿನೇಟ್ಸ್ ಪ್ರೈ ಲಿ. ಮತ್ತು ಬ್ಲೂನೀಮ್ ಮೆಡಿಕಲ್ ಡಿವೈಸೆಸ್ ಪ್ರೈ.ಲಿ. ರವರು ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದಾರೆ .

ನಿಮ್ಹಾನ್ಸ್ ನ ನಿವೃತ್ತ ಮನೋವಿಜ್ಞಾನ ಪ್ರಾಧ್ಯಾಪಕ , ಪದ್ಮಶ್ರೀ ಪುರಸ್ಕೃತ ಡಾ.ಸಿ.ಆರ್.ಚಂದ್ರಶೇಖರ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರಶಸ್ತಿ ಪ್ರದಾನ ಮಾಡುವರು. ಆರ್.ವಿ.ಶಿಕ್ಷಣ ಸಮೂಹದ ನಿರ್ದೇಶಕರು (ಯೋಜನೆ) ಡಾ.ಟಿ.ವಿ.ರಾಜು ಮತ್ತು ಬಿಹೆಚ್‍ಎಸ್ ಉನ್ನತ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ಡಾ.ಕೆ.ಎಸ್.ಸಮೀರ ಸಿಂಹ ಪಾಲ್ಗೊಳ್ಳುವರು .

ಪ್ರತಿಷ್ಠಾನ ಟ್ರಸ್ಟೀಗಳಾದ ಎಸ್.ವಿ.ಸುಬ್ರಹ್ಮಣ್ಯ , ಅನಂತ ವೇದಗರ್ಭಂ ಹಾಗು ವೆಂಕಟೇಶ ಆರ್. ವೇದಾಂತಿ ಉಪಸ್ಥಿತರಿರುವರು ಎಂದು ಸಂಸ್ಥಾಪಕ ಗೌ.ಕಾರ್ಯದರ್ಶಿ ಮುರಳಿ ಎಸ್.ಕಾಕೋಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿವರಗಳಿಗೆ 98450 75250
ಈ ಕಾರ್ಯಕ್ರಮಕ್ಕೆ ಪೂರ್ವಭಾವಿ ಪ್ರಚಾರ ಹಾಗೂ ಕಾರ್ಯಕ್ರಮದಂದು ವರದಿ ಮಾಡಲು ಛಾಯಾಚಿತ್ರಕಾರರು ಹಾಗೂ ವರದಿಗಾರರನ್ನು ಕಳುಹಿಸಿಕೊಡಲು ಸವಿನಯ ಮನವಿ.

ಪ್ರಶಸ್ತಿ ಪುರಸ್ಕೃತ ಕಿರು ಪರಿಚಯ: ಡಾ. ನಾ. ಸೋಮೇಶ್ವರ/ ದೂರದರ್ಶದ ದಾಖಲೆಯ ಥಟ್ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮದ ಮೂಲಕ ವಿಶ್ವ ಮಾನ್ಯತೆ ಗಳಿಸಿ ಜನಪ್ರಿಯರಾದ ಶ್ರೀಯುತರು ವೃತ್ತಿಯಿಂದ ವೈದ್ಯರು ಔದ್ಯೋಗಿಕ ವೈದ್ಯಕೀಯ ಇವರ ತಜ್ಞತೆಯ ಕ್ಷೇತ್ರ.37 ವರ್ಷ ವೃತ್ತಿ ನಿರತರಾಗಿ ಅನೇಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಪ್ರವೃತ್ತಿಯಿಂದ ಲೇಖಕರಾಗಿ 60ಕ್ಕೂ ಅಧಿಕ ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮೃದ್ಧ ಕೊಡುಗೆ ನೀಡಿರುವ ಇವರು ಉತ್ತಮ ವಾಗ್ಮಿಗಳು.

ಅಧ್ಯಯನ -ಅಧ್ಯಾಪನ ಇವರ ಉಸಿರು : ಕಲಿ - ಕಲಿಸು ಇದು ಅವರ ಜೀವಮಾನದ ಧ್ಯೇಯ. ಕನ್ನಡದಲ್ಲಿ ಆರೋಗ್ಯ ಸಾಹಿತ್ಯ ಸಂವಹವನಕ್ಕಾಗಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕ್ವಿಜ್ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ ಪ್ರಸ್ತುತ ಆಧ್ಯಾತ್ಮಿಕ ಅಸ್ತಿಭಾರದ ಮೇಲೆ ಸಮಾಜದ ಅಕ್ಷರ ಆರೋಗ್ಯಕರ ಸಮೃದ್ಧಿಗಾಗಿ ಕಟಿಬದ್ಧವಾಗಿರುವ ಲಾಭರಹಿತ ಸಂಸ್ಥೆ ಪಾಂಚಜನ್ಯ ಪ್ರತಿಷ್ಠಾನ ಆರೋಗ್ಯ ಕ್ಷೇತ್ರದ ಅನನ್ಯ ಸಾಧನೆಗೆ ಕೊಡಮಾಡುವ 2024 ನೇ ಸಾಲಿನ ಪಾಂಚಜನ್ಯ ಪುರಸ್ಕಾರಕ್ಕೆ ಭಾಜನರು.

ಪಾಂಚಜನ್ಯ ಪ್ರತಿಷ್ಠಾನದ ಕಿರು ಪರಿಚಯ: "ಸೇವಾಯಜ್ಞದಲ್ಲಿ..." ಸಮಾನ ಮನೋಧರ್ಮದ ಗೆಳೆಯರು ಒಂದಾಗಿ ಗ್ರಾಮೀಣ ಪ್ರದೇಶದಲ್ಲಿ ಅಕ್ಷರ ,ಆರೋಗ್ಯ ಮತ್ತು ಅಧ್ಯಾತ್ಮವೆಂಬ ಮಂತ್ರಗಳ ಬುನಾದಿಯ ಮೇಲೆ ಭವ್ಯ ಸಮಾಜ ನಿರ್ಮಾಣದ ದೀಕ್ಷೆ ತೊಟ್ಟು, ಹಲವಾರು ಜನಮುಖಿ ಕರ?ಯಗಳನ್ನು ನಡೆಸುತ್ತ ಸಾರ್ಥಕ ಒಂದು ದಶಕದಿಂದ ನಿಸ್ವಾರ್ಥ ಚಿಂತನೆ ವಿಶಾಲದೃಷ್ಟಿಯಿಂದ ಸದ್ದಿಲ್ಲದೆ ಸೇವಾಕ್ರಾಂತಿ ಮಾಡುತ್ತ ಬಂದಿದೆ. ಪಾಂಚಜನ್ಯ ಮೊಳಗುವುದಕ್ಕಾಗಿ ಅಲ್ಲ, ದೀನರ ಬಾಳು ಬೆಳಗುವುದಕ್ಕಾಗಿ ಉದಯವಾಗಿದೆ.

ಪ್ರತಿ ವರ್ಷ ವಾರ್ಷಿಕೋತ್ಸವ ಸಂದರ್ಭದಲ್ಲಿ ಅಕ್ಷರ ,ಆರೋಗ್ಯ ಮತ್ತು ಅಧ್ಯಾತ್ಮ ಕ್ಷೇತ್ರದಲ್ಲಿ ಅವಿರತ ಸೇವಾ- ಸಾಧನೆಯನ್ನು ಮಾಡುತ್ತಿರುವ ಸಾಧಕೋತ್ತಮರಿಗೆ ಪ್ರತಿಷ್ಠಿತ ಪಾಂಚಜನ್ಯ ಪುರಸ್ಕಾರ ಗೌರವಾರ್ಪಣೆ ಮಾಡಲಾಗುವುದು.ಸಹಾನುಭೂತಿಯ ಸಂವೇದನೆಯೊಂದಿಗೆ ಗಮನಿಸುವಾಗ ಬದಲಾವಣೆ ಹೇಗೆ ಸಾಧ್ಯ ಎಂದು ತಿಳಿಯದೇ ಅಸಹಾಯಕತೆಯೂ(ಯೇ) ಮನೆಮಾಡಿ ಜನರಲ್ಲಿ ಉದಾಸೀನ ಮೂಡುವುದು ಸಹಜ ,ಹಾಗಿರುವಾಗ ಬದಲಾವಣೆಯ ದಾರಿಯನ್ನು ತೋರಿಸಿ , ಪೋಷಿಸಿದಾಗ ಅಸಹಾಯಕತೆಯೂ ದೂರವಾಗುತ್ತದೆ. ಜೊತೆಗೆ ಕಣ್ಣಿಗೆ ಕಾಣುವ ಬದಲಾವಣೆಯೂ ಸಾಧ್ಯ ಎಂದು ಪಾಂಚಜನ್ಯ ಪ್ರತಿಷ್ಠಾನ ನಂಬಿಕೊಂಡು ಬಂದಿದೆ . ನಿಮಗೂ ಪಾಂಚಜನ್ಯ ಪ್ರತಿಷ್ಠಾನದೊಂದಿಗೆ ಜೋಡಿಸಿಕೊಳ್ಳಬೇಕೆನಿಸಿದರೆ ಕರೆಮಾಡಿ 98450 75250 ಹಾಗೂ ಸಮಾಜದಲ್ಲಿನ ಬದಲಾವಣೆಗೆ ಪಾತ್ರರಾಗಿರಿ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು