LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ: ಹೆಚ್.ಎ.ಕುಮಾರ್ ಅಭಿಪ್ರಾಯ

ಪೀಣ್ಯ ದಾಸರಹಳ್ಳಿ: 'ನಿಮ್ಮಮನೆಯ ಬೀದಿ, ರಸ್ತೆ ಇನ್ನಿತರೆ ಸ್ಥಳಗಳಲ್ಲಿ, ಎಲ್ಲೆಂದರಲ್ಲಿ ಕಸ ಎಸೆಯದೆ ಸ್ವಚ್ಚತೆಯನ್ನು ಸಾರುತ್ತಾ ಬರುವ ವಾಹನಗಳಿಗೆ ಕಸ ನೀಡಿ ಸ್ವಚ್ಚ ಪರಿಸರ ನಿರ್ಮಾಣಕ್ಕೆ ಸಹಕರಿಸಿ'ಎಂದು ಪುರಸಭೆ ಮುಖ್ಯಾಧಿಕಾರಿ ಹೆಚ್. ಎ.ಕುಮಾರ್ ಸಾರ್ವಜನಿಕರಿಗೆ ಕರೆ ನೀಡಿದರು.ಸ್ವಚ್ಚಭಾರತ್ ಮಿಷನ್ (ನಗರ) ನಗರಾಭಿವೃದ್ದಿ ಇಲಾಖೆ,ಪೌರಾಡಾಳಿತ ನಿರ್ದೇಶನಾಲಯ,ಚಿಕ್ಕಬಾಣಾವರ ಪುರಸಭೆ ವತಿಯಿಂದ 15 ದಿನಗಳ ಕಾಲ ಹಮ್ಮಿಕೊಂಡಿರುವ ಸ್ವಚ್ಚತಾ ಅಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿದರು.

ಸ್ವಭಾವ ಸ್ವಚ್ಚತೆ,ಸಂಸ್ಕಾರ ಸ್ವಚ್ಚತೆ ಎಂಬ ಸಂದೇಶದಡಿ ಜನರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಮೊದಲನೆ ದಿನ ಪೌರಕಾರ್ಮಿಕರೆಲ್ಲರೂ ಸೇರಿ ಸ್ವಚ್ಚ ಮಾಡುವ ಕಾರ್ಯ ಮಾಡಿದ್ದೆವೆ. ಶಾಲೆಗಳಲ್ಲಿ ಎರಡು ದಿನಗಳ ಕಾಲ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಹಾಗೆಯೇ ಹೆಚ್ಚು ಕಸ ಇರುವ ಕಡೆ ಬ್ಲಾಕ್ ಪಾಯಿಂಟ್ ಅಂತ ಗುರುತಿಸಿ ಅಲ್ಲಿನ ಜಾಗವನ್ನು ಸೌಂಧರ್ಯಕರಣಗೊಳಿಸುವ ನಿಟ್ಟಿನಲ್ಲಿ ಇಂದು ಗಿಡನೆಟ್ಟು , ಜನ ಕುಳಿತುಕೊಳ್ಳಲು ಬೆಂಚ್ ಆಳವಡಿಸಿ ಬಣ್ಣ ಬಣ್ಣದ ಅಲಂಕಾರಿಕ ವಸ್ತುಗಳನ್ನು ಆಳವಡಿಸಿ ಮತ್ತೆ ಅಲ್ಲಿ ಕಸ ಹಾಕದಂತೆ ಮುಂಜಾಗ್ರತೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.

ಸ್ವಚ್ಚತಾ ಅಭಿಯಾನದಲ್ಲಿ 15 ದಿನಗಳ ಕಾಲ ವಿವಿಧ ರೀತಿಯಲ್ಲಿ ಮನೆ ಮನೆ ಕಸ ಸಂಗ್ರಹಣೆ, ಮನೆಗಳಿಗೆ ಕರಪತ್ರ ಹಂಚಿ ಕಸವನ್ನು ಕಸದ ಗಾಡಿಗಳಿಗೆ ನೀಡಿ ಎಂದು ಗಮನಕ್ಕೆ ತರುವುದು,ಬ್ಲಾಕ್ ಪಾಯಿಂಟ್ ಗಳನ್ನು ಗುರುತಿಸಿ ಸೌಂಧರ್ಯಕರಣಮಾಡುವುದು,ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದವೆ' ಎಂದರು.

ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿಯ ರಾಜ್ಯಾಧ್ಯಕ್ಷ ಬಿ.ಎಂ. ಚಿಕ್ಕಣ್ಣ ಮಾತನಾಡಿ 'ಗಣಪತಿನಗರದಿಂದ ತಮ್ಮೇನಹಳ್ಳಿಗೆ ಸಂಚರಿಸುವ ಮುಖ್ಯರಸ್ತೆಯಲ್ಲಿ ಬೈಕ್ ಹಾಗೂ ಕಾರಿನಲ್ಲಿ ಸಂಚರಿಸುವವರು ಇಲ್ಲಿ ಕಸ ಹೆಸರು ಹೋಗುತ್ತಾರೆ.ಈ ರಸ್ತೆಯಲ್ಲಿ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಇದ್ದು ಕಸ ಕೊಳೆತು ಸಾಂಕ್ರಮಿಕ ರೋಗ ಹರಡಿ ಮಕ್ಕಳಿಗೆ ಖಾಯಲೆ ಉಂಟಾಗುವ ಭೀತಿ ಎದುರಾಗುತ್ತದೆ.

ಖಾಲಿ ಜಾಗ ಕಂಡಲ್ಲಿ ಹಾಗೂ ಎಲ್ಲೆಂದರಲ್ಲಿ ಕಸ ಬಿಸಾಡುವ ಮುನ್ನ ಸಾಮಾನ್ಯ ಪರಿಜ್ಞಾನವಿರಲಿ ಮನೆ ಬಳಿ ಬರುವ ಕಸದ ಗಾಡಿಗೆ ಕಸ ನೀಡಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸುಂದರವಾಗಿ ಸ್ವಚ್ಚವಾಗಿ ಇಡೋಣ' ಎಂದರು.ಈ ವೇಳೆ ಎಂಜಿನಿಯರ್ ಸುಮತಿ, ಪರಿಸರ ಹರೀಶ್, ರೆವಿನ್ಯೂ ಅಧಿಕಾರಿ ಪ್ರದೀಪ್, ನಾಗೇಂದ್ರಗೌಡ, ಮೂರ್ತಿ,ಪ್ರಶಾಂತ್ ಮುಂತಾದವರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು