LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಹುಟ್ಟುಹಬ್ಬ ಆಚರಿಸದಿರಲು ನಿರ್ಧಾರ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ದರ್ಶನ್

ಬೆಂಗಳೂರು: ಫೆಬ್ರವರಿ 16ರಂದು ನಟ ದರ್ಶನ್ ಜನ್ಮದಿನ. ಈ ವರ್ಷ ಅವರು ಬರ್ತ್‍ಡೇನ ಆಚರಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. `ನನಗೆ ಬೆನ್ನು ನೋವು ಇದೆ. ತುಂಬಾ ಹೊತ್ತು ನಿಲ್ಲೋಕೆ ಆಗಲ್ಲ. ಈ ಕಾರಣಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಇದೊಂದು ವರ್ಷ ಕ್ಷಮಿಸಿಬಿಡಿ. ನಿಮಗೆ ಧನ್ಯವಾದ ಹೇಳಬೇಕು ಎನ್ನುವ ಆಸೆ ನನಗೂ ಇದೆ' ಎಂದು ಅವರು ಕೋರಿದ್ದಾರೆ.

ನಟ ದರ್ಶನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದಾಗಿ ಅವರಿಗೆ ಓಡಾಡಲೂ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಅವರ ಮುಂದಿನ ಸಿನಿಮಾಗಳ ಬಗ್ಗೆ ಸಾಕಷ್ಟು ಊಹಾಪೋಹ ಹುಟ್ಟಿಕೊಂಡಿದೆ. ದರ್ಶನ್ ಅಡ್ವಾನ್ಸ್ ತಿರುಗಿಸಿದ್ದಾರೆ ಎಂದೆಲ್ಲ ಹೇಳಲಾಗಿತ್ತು. ಈ ಕುರಿತು ಅವರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಅದರಲ್ಲಿ ಅವರು ಹಲವು ವಿಚಾರಗಳಿಗೆ ಸ್ಪಷ್ಟನೆ ನೀಡಿದ್ದಾರೆ.

`ದಯಮಾಡಿ ಯಾವುದೇ ಊಹಾಪೋಹಗಳಿಗೆ ಕಿವಿಕೊಡಬೇಡಿ. ಸೂರಪ್ಪ ಬಾಬು ಅವರಿಗೆ ನಾನು ಹಣವನ್ನು ಮರಳಿ ಕೊಟ್ಟಿದ್ದೇನೆ. ಇಂಡಸ್ಟ್ರಿಯಲ್ಲಿನ ಆಪ್ತರು ನನ್ನ ಬಳಿ ಅವರನ್ನು ಕರೆದುಕೊಂಡು ಬಂದಿದ್ದರು. ಈಗ ಸಮಯವೆಲ್ಲ ವ್ಯರ್ಥವಾಗಿದೆ. ಅವರ ಅಡ್ವಾನ್ಸ್ ಹಣ ಇಟ್ಟುಕೊಂಡರೆ ಅವರ ಕಮಿಟ್‍ಮೆಂಟ್ ಮತ್ತಷ್ಟು ಹೆಚ್ಚುತ್ತದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಸಬ್ಜೆಕ್ಟ್ ಸಿಕ್ಕರೆ ಸಿನಿಮಾ ಮಾಡೋಣ ಎಂದು ಹೇಳಿದ್ದೇನೆ' ಎಂದಿದ್ದಾರೆ ದರ್ಶನ್.

`ನಾನು ಪ್ರೇಮ್ ಸಿನಿಮಾ ಮಾಡಿಯೇ ಮಾಡುತ್ತೇವೆ. ನನ್ನ ಗೆಳತಿ ರಕ್ಷಿತಾಳ ಆಸೆ. ಹೀಗಾಗಿ ಮಾಡೇ ಮಾಡ್ತೀವಿ. ಕೆವಿಎನ್  ಪ್ರೊಡಕ್ಷನ್ ಒಂದಷ್ಟು ಸಿನಿಮಾ ಮಾಡ್ತಾ ಇದಾರೆ. ಹೀಗಾಗಿ, ಸಿನಿಮಾ ಮಾಡದೇ ಇರುವವರ ಜೊತೆ ಮೊದಲು ಚಿತ್ರ ಮಾಡುತ್ತೇನೆ. ಪ್ರೀತಿ,  ಪ್ರೋತ್ಸಾಹ ಹೀಗೆಯೇ ಇರಲಿ' ಎಂದು ದರ್ಶನ್ ಹೇಳಿದ್ದಾರೆ. ಈ ಮೂಲಕ ಇವರ ಸಿನಿಮಾ ವಿಳಂಬಕ್ಕೆ ಕಾರಣ ತಿಳಿಸಿದ್ದಾರೆ.ದರ್ಶನ್ ಅವರು ಜೈಲಿನಲ್ಲಿ ಇದ್ದಾಗ ಅಭಿಮಾನಿಗಳು ಸಾಕಷ್ಟು ಬೆಂಬಲ ನೀಡಿದ್ದರು. ಈ ವಿಚಾರಕ್ಕೆ ಅವರಿಗೆ ಸಾಕಷ್ಟು ಖುಷಿ ಇದೆ. `ಧನ್ವೀರ್, ರಚಿತಾ ರಾಮ್, ರಕ್ಷಿತಾಗೆ ಹಾಗೂ ನನ್ನ ಸೆಲೆಬ್ರಿಟಿಗಳಿ ಥ್ಯಾಂಕ್ಸ್. ನಾನು ಬೇರೆ ಭಾಷೆಗೆ ಹೋಗ್ತೀನಿ ಎನ್ನುವುದೆಲ್ಲ ಸುಳ್ಳು. ಇಲ್ಲಿ ಕೊಟ್ಟ ಪ್ರೀತಿ ನನಗೆ ಸಾಕು' ಎಂದು ದರ್ಶನ್ ಹೇಳಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು