LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಹೆಚ್‍ಪಿವಿ ಲಸಿಕಾ ಆಂದೋಲನ: ‘ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಿಸಿ ಮತ್ತು ಭವಿಷ್ಯ ಸಬಲಗೊಳಿಸಿ’

ಬೆಂಗಳೂರು: ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡ ಆರಂಭದಲ್ಲೇ ಸುಧಾಮೂರ್ತಿ ಅವರು ಕಲಾಪದಲ್ಲಿ ಪಾಲ್ಗೊಂಡು ಮಹಿಳೆಯರನ್ನು ಗರ್ಭಕಂಠ ಕ್ಯಾನ್ಸರ್‍ನಿಂದ ಪಾರು ಮಾಡುವ ನಿಟ್ಟಿನಲ್ಲಿ ಲಸಿಕಾ ಆಂದೋಲನ ಹಮ್ಮಿಕೊಳ್ಳಬೇಕಾದ ಅಗತ್ಯದ ಬಗ್ಗೆ ಪ್ರಸ್ತಾಪಿಸಿ ಗಮನ ಸೆಳೆದಿದ್ದರು. ಇದರ ಮಹತ್ವ ಮನಗಂಡು ಮಹಿಳೆಯರ ಆರೋಗ್ಯ ಸಬಲೀಕರಣದ ನಿಟ್ಟಿನಲ್ಲಿ ವಿವಿಧ ಸಂಸ್ಥೆಗಳು ಕೈಜೋಡಿಸಿ ಪ್ರಮುಖ ಉಪಕ್ರಮವೊಂದಕ್ಕೆ ಮುಂದಾಗಿವೆ.

ಇದಕ್ಕಾಗಿ ದಿವಾಕರ್ಸ್ ಸರ್ವೀಸ್ ಟ್ರಸ್ಟ್, ಹೆಚ್.ಡಿ.ಆರ್. ಹೆಲ್ತ್ ಕೇರ್ ಫೌಂಡೇಷನ್, ಆರ್ಟಿಸ್ಟ್ ಫಾರ್ ಹರ್, ಅರಸೀಕಟ್ಟೆ ಅಮ್ಮ ದೇವಸ್ಥಾನ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಸಂಘ (ಕೆ.ಎಸ್.ಒ.ಜಿ.ಎ) ಇವು ಜಂಟಿಯಾಗಿ ಎಚ್.ಪಿ.ವಿ. ಲಸಿಕಾ ಆಂದೋಲನ ಹಮ್ಮಿಕೊಂಡಿವೆ. ‘ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಿಸಿ ಮತ್ತು ಭವಿಷ್ಯ ಸಬಲಗೊಳಿಸಿ’ ಧ್ಯೇಯವಾಕ್ಯದಡಿ ಅರಕಲಗೂಡು ತಾಲ್ಲೂಕು ಕೊಣನೂರು ಹೋಬಳಿ ಅರಸೀಕಟ್ಟೆ ಗ್ರಾಮದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಏರ್ಪಡಿಸಿದ್ದವು.

ಕರ್ನಾಟಕ ಹಾಗೂ ಹೊರ ರಾಜ್ಯಗಳಿಗೂ ಹೆಚ್.ಪಿ.ವಿ. ಲಸಿಕಾ ಆಂದೋಲನವಿಸ್ತರಿಸಬೇಕೆಂಬ ಉದ್ದೇಶ ಹೊಂದಿರುವ ‘ಫಿಗೊ’ದ (ಅಂತಾರಾಷ್ಟ್ರೀಯ ಪ್ರಸೂತಿಮತ್ತು ಸ್ತ್ರೀರೋಗ ತಜ್ಞರ ಒಕ್ಕೂಟ) ವೆಲ್ ವಿಮೆನ್ ಹೆಲ್ತ್ ಕೇರ್ ವಿಭಾಗದ ನಿರ್ದೇಶಕರಾದ ಡಾ.ಹೇಮಾ ದಿವಾಕರ್ ಅವರು ಲಸಿಕಾ ಆಂದೋಲನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ತ್ವರಿತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಹೆಚ್.ಡಿ.ಆರ್. ಹೆಲ್ತ್ ಕೇರ್ ಫೌಂಡೇಷನ್ ನ ಡಾ.ಜಿ.ವಿ.ದಿವಾಕರ್, ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ.ಭಾರತಿ ರಾಜ್ ಶೇಖರ್ ಮತ್ತು ರಾಜ್ಯ ಹದಿಹರೆಯದವರ ಆರೋಗ್ಯ ಸಮಿತಿ ಅಧ್ಯಕ್ಷೆ ಡಾ. ಸೌಮ್ಯ ಮಣಿ, ಅರಕೂಲಗೂಡು ಮಾಜಿ ಶಾಸಕ ಹಾಗೂ ಅರಸೀಕಟ್ಟೆ ಅಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎ.ಟಿ.ರಾಮಸ್ವಾಮಿ, ಅಧ್ಯಕ್ಷೆ ಡಾ.ಗಿರಿಜಾ ಬಿ.ಎಸ್, ಸಂಯೋಜಕಿ ಡಾ.ಸಾವಿತ್ರಿ ಎ. ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು