LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಹೊಸ ವರುಷ 2025 ಆರಂಭದಲ್ಲಿ ಕಾಟನ್ ಪೇಟೆ ಪೆÇಲೀಸ್ ಠಾಣೆ ವತಿಯಿಂದ ನಿರಾಶ್ರಿತರಿಗೆ ಬೆಡ್ ಶೀಟ್‍ಗಳ ಉಡುಗೊರೆ

ನೂತನ ಆಂಗ್ಲ ಸಂವತ್ಸರ ಆರಂಭದ ದಿನವಾದ ಬುಧವಾರದಂದು ನಗರದ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಸೇವಾ ನಿರತ ಸಿಬ್ಬಂದಿ ಮಾದರಿ ಆಗುವಂತಹ ಕಾರ್ಯ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಇಲಾಖೆಯ ಬಗ್ಗೆ ಮತ್ತಷ್ಟು ವಿಶ್ವಾಸವನ್ನು ಹೆಚ್ಚಿಸುವ ಕಾರ್ಯ ಮಾಡಿರುವುದು ಶ್ಲಾಘನೀಯ.

ನಗರದ ಮೆಜೆಸ್ಟಿಕ್ ನ ಗೂಡ್‍ಶೆಡ್ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ ಸ್ವಯಂ ಸೇವಾ ಸಂಸ್ಥೆ ಭಾರತ ಸಮುದಾಯ ಅಭಿವೃದ್ಧಿ ಸೇವಾ ಸಂಸ್ಥೆಯ (ಐಸಿಡಿಎಸ್‍ಎಸ್) ಸಹಯೋಗದೊಂದಿಗೆ 24/7 ವಸತಿ ಕೇಂದ್ರವನ್ನು ನಿರ್ವಹಿಸಲಾಗುತ್ತಿದ್ದು, ಇಲ್ಲಿ ನಾನಾ ಕಾರಣದಿಂದ ತಮ್ಮ ಕುಟುಂಬದವರಿಂದ ಬೇರ್ಪಟ್ಟು, ದಿಕ್ಕು ದೆಸೆ ಇಲ್ಲವಾಗಿ ಬಸ್ ನಿಲ್ದಾಣಗಳು, ರೈಲು ನಿಲ್ದಾಣ, ಪುಟ್ ಪಾತ್ಗಳಲ್ಲಿ ಅನಿಶ್ಚಿತತೆಯಿಂದ ಪರಿತಪಿಸುವ ನೊಂದ ಜೀವಗಳನ್ನು ಐಸಿಡಿಎಸ್‍ಎಸ್ ನ ಸ್ವಯಂ ಸೇವಕರು ಗುರುತಿಸಿ, ಈ ಕೇಂದ್ರಕ್ಕೆ ಕರೆತಂದು ತಾತ್ಕಾಲಿಕ ಆಶ್ರಯ ಕಲ್ಪಿಸಿಕೊಡುವುದರೊಂದಿಗೆ, ಅವರಿಗೆ ಆಹಾರ ಔಷದೋಪಚಾರ ಒದಗಿಸುವ ಕೇಂದ್ರವಾಗಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಈ ಕೇಂದ್ರ.

ಈ ರಾತ್ರಿ ಆಶ್ರಯ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿರುವ ವಸತಿರಹಿತರಿಗೆ, ನೂತನ ಸಂವತ್ಸರ 2025 ರ ಆರಂಭದ ದಿನ ಕಾಟನ್ ಪೇಟೆಯ ಪೊಲೀಸ್ ಠಾಣೆಯ ಅಧಿಕಾರಿಗಳಾದ ಸುಮಂಗಳ ಪಿಎಸ್‍ಐ, ಸಂತೋಷ್ ಗೌಡ ಪಿಎಸ್‍ಐ, ನಾಗೇಶ್ ಪಿಎಸ್‍ಐ, ಅಪರಾಧ ವಿಭಾಗದ ಪಿಎಸ್‍ಐ ಕಾಳೇಗೌಡರವರುಗಳು ವಸತಿ ಕೇಂದ್ರದಲ್ಲಿ ಆಶ್ರಯ ಪಡೆದವರಿಗೆ ಕೆಲವು ಹಿತ ನುಡಿಗಳನ್ನು ಹೇಳಿ, ಅವರಲ್ಲಿ ಜೀವನೋತ್ಸಾಹ ಮೂಡಿಸುವ ಪ್ರಯತ್ನ ಮಾಡುವುದರೊಂದಿಗೆ, ಸಮಾಜ ಮುಖಿಯಾಗಿ ಮತ್ತೆ ಹೊಸ ಜೀವನ ಪ್ರಾರಂಭಿಸಬಹುದು ಎಂಬ ವಿಶ್ವಾಸ ಮೂಡಿಸಿ, ಎಲ್ಲರಿಗೂ ಶುಭ ಹಾರೈಸಿದರು.

ಈ ವೇಳೆ ಸುಮಾರು 100 ಬೆಡ್‍ಶೀಟ್‍ಗಳು, ಟೂತ್ ಪೇಸ್ಟ್-ಬ್ರಷ್ ಗಳು ಮತ್ತು ಸ್ನಾನದ ಸಾಬೂನುಗಳನ್ನು ಭಾರತ ಸಮುದಾಯ ಅಭಿವೃದ್ಧಿ ಸೇವಾ ಸಂಸ್ಥೆಯ ನಿರ್ದೇಶಕರಾದ ಡಾ. ರಾಮಚಂದ್ರಪ್ಪ ಎಚ್.ಟಿ. ರವರ ಉಪಸ್ಥಿತಿಯಲ್ಲಿ ಕೇಂದ್ರದಲ್ಲಿ ಆಶ್ರಯ ಪಡೆದಿರುವವರಿಗೆ ತಮ್ಮ ಕೊಡುಗೆಯಾಗಿ ವಿತರಿಸಿದರು. ಈ ಸಂದರ್ಭದಲ್ಲಿ ಆಶ್ರಯ ಕೇಂದ್ರದ ವ್ಯವಸ್ಥಾಪಕರಾದ ಲಕ್ಷ್ಮಿ, ಶಿವಪ್ಪ ಹಾಗೂ ಇನ್ನಿತರರು ಹಾಜರಿದ್ದರು. ಪೊಲೀಸ್ ಇಲಾಖೆಯೂ ಸಹ ಸಾಮಾಜಿಕ ಕಾಳಜಿ ವಹಿಸಿ, ನೊಂದವರಿಗೆ ಸ್ಪಂದಿಸುತ್ತಿರುವುದು ಸ್ವಾಗತಾರ್ಹ ಹಾಗೂ ಶ್ಲಾಘನೀಯ ವಿಚಾರವಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು