LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ನೇಪಾಳದಲ್ಲಿ ಸಂಭವಿಸಿದ ದುರ್ಘಟನೆ 154 ಮಂದಿ ಸಾವು

ಕಠ್ಮಂಡು: ಕಳೆದ ಮಧ್ಯರಾತ್ರಿ ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿ 154ಕ್ಕೂ ಹೆಚ್ಚು ಜನ ಮೃತಪಟ್ಟು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಾತ್ರಿ ಸಂಭವಿಸಿದ ಭೂಕಂಪ ರಿಕ್ಟರ್ ಮಾಪನದಲ್ಲಿ 6.4 ತೀವ್ರತೆಯಿಂದ ಕೂಡಿದ್ದು, ಭೂಕಂಪದ ಕೇಂದ್ರ ಬಿಂದು ಲಾಮಿಡಾಂಡಾದಲ್ಲಿದೆ ಎಂದು ವರದಿಯಾಗಿದೆ.

ಈವರೆಗೂ ಇದರಲ್ಲಿ 154 ಜನ ಮೃತಪಟ್ಟು, 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಈ ಭೂಕಂಪದ ಮೂಲಕ ಹಿಮಾಲಯದ ಈ ಪ್ರಾಂತ್ಯದಲ್ಲಿ ಭೂಮಿ ಕಂಪಿಸುವುದು ಸಾಮಾನ್ಯ ಎಂಬಂತಾಗಿದೆ.ರಿಕ್ಟರ್ ಮಾಪನದಲ್ಲಿ ಗರಿಷ್ಠ 8.2ರವರೆಗೂ ಇಲ್ಲಿ ಭೂಮಿ ಕಂಪಿಸಿದ ಉದಾಹರಣೆಗಳಿವೆ. 2015ರಲ್ಲಿ ಸಂಭವಿಸಿದ್ದ 7.8 ತೀವ್ರತೆಯ ಭೂಕಂಪಕ್ಕೆ ಸುಮಾರು 9 ಸಾವಿರ ಜನ ಮೃತಪಟ್ಟಿದ್ದರು. ಲಕ್ಷಕ್ಕೂ ಅಧಿಕ ಜನರ ಮನೆಗಳು ಹಾನಿಗೀಡಾಗಿದ್ದು ಇತ್ತೀಚಿನ ಉದಾಹರಣೆ.

ಮೋದಿ ಸಂತಾಪ
ನವದೆಹಲಿ: ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿ ಮೃತಪಟ್ಟವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿರುವ ಅವರು, ಸಂಕಷ್ಟದಲ್ಲಿರುವ ನೇಫಾಳದ ಜತೆ ತಾವು ಇದ್ದೇವೆ ಎಂದು ಹೇಳಿರುವ ಪ್ರಧಾನಿ ಅವರು ನೇಪಾಳಕ್ಕೆ ಅಗತ್ಯವಿರುವ ನೆರವು ನೀಡಲು ಸಿದ್ಧ ಎಂದು ಹೇಳಿದ್ದಾರೆ.

ಭೂಗರ್ಭದ ಟೆಕ್ಟೋನಿಕ್ ಪ್ಲೇಟ್‍ಗಳು ಸಂಧಿಸುವ ಸ್ಥಳದಲ್ಲೇ ನೇಪಾಳ ಇರುವುದರಿಂದ ಇಲ್ಲಿ ಆಗಾಗ ಭೂಕಂಪ ಸಂಭವಿಸುವುದು ಸಹಜ. ಇದರೊಂದಿಗೆ ಈ ಪ್ರದೇಶದ ಭೌಗೋಳಿಕ ರಚನೆಯೂ ಆಗಾಗ ಇಲ್ಲಿ ಭೂಕಂಪನ ಸಂಭವಿಸಲು ಕಾರಣವಾಗಿದೆ ಎಂದು ಲಖನೌ ವಿಶ್ವವಿದ್ಯಾಲಯದ ಭೂಗೋಳ ವಿಭಾಗದ ಪ್ರಾಧ್ಯಾಪಕ ಧೃವ್ ಸೆನ್ ಸಿಂಗ್ ವಿವರಿಸಿದ್ದಾರೆ.

ನೇಪಾಳ ಪ್ರಧಾನಿ ಪುಷ್ಪಕಮಲ್ ದಹಾಲ್ ಅವರು ಭೂಕಂಪ ಸಂಭವಿಸಿದ ಜಾಜ್‍ಕೋಟ್ ಜಿಲ್ಲೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ನೇಪಾಳದಲ್ಲಿ ಭೂಕಂಪವಾಗುತ್ತಿದ್ದಂತೆ ದೆಹಲಿ ಮತ್ತು ಉತ್ತರಪ್ರದೇಶದ ಕೆಲ ಭಾಗದಲ್ಲೂ ಸಹ ಭೂಮಿ ನಡುಗಿದ ಅನುಭವವಾಗಿದೆ ಎಂದು ಹೇಳಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು