LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

`ಕರಾವಳಿ ಪ್ರದೇಶ ನಿರ್ವಹಣೆ' ಕುರಿತು 1 ನೇ ತ್ರೈಮಾಸಿಕ ಸಭೆ

ಬೆಂಗಳೂರು: ನಗರದ ವಿಕಾಸ ಸೌಧದ ಮೂರನೇ ಮಹಡಿಯಲ್ಲಿ ಕರ್ನಾಟಕ ರಾಜ್ಯದೊಂದಿಗೆ "ಕರಾವಳಿ ಪ್ರದೇಶ ನಿರ್ವಹಣೆ" ಕುರಿತು 1 ನೇ ತ್ರೈಮಾಸಿಕ ಸಭೆ ನಡೆಯಿತು.ಸಭೆಯಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಅವರು, ಕರ್ನಾಟಕದ ಕರಾವಳಿ ನಿರ್ವಹಣೆ ಹಿನ್ನೆಲೆ ಕುರಿತು ಮಾಹಿತಿ ನೀಡಿದರು.

ಮತ್ತೊರ್ವ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ ರಾಯಪುರ ಅವರು, ಕರಾವಳಿ ಪ್ರದೇಶಗಳ ನಿರ್ವಹಣೆಯ ಸ್ಥಿತಿ, ಸಮಸ್ಯೆಗಳು ಮತ್ತು ಯೋಜನೆಗಳ ಬಗ್ಗೆ ಪಿಪಿಟಿ ಮೂಲಕ ಮಾಹಿತಿ ನೀಡಿದರು. ನವದೆಹಲಿಯ ಕೇಂದ್ರ ಜಲ ಆಯೋಗ, ಕರಾವಳಿ ನಿರ್ವಹಣಾ ನಿರ್ದೇಶನಾಲಯ ನಿರ್ದೇಶಕರಾದ ದೀಪಕ್ ಕುಮಾರ ಅವರು, ಕರಾವಳಿ ಪ್ರದೇಶ ನಿರ್ವಹಣೆಯಲ್ಲಿ ಭಾರತ ಸರ್ಕಾರದ ಉಪಕ್ರಮಗಳು ಕುರಿತು ಸವಿವರವಾಗಿ ಮಾಹಿತಿ ನೀಡಿದರು.

ಸಿಜಿಡಬ್ಲ್ಯೂಬಿ ಪ್ರಾದೇಶಿಕ ನಿರ್ದೇಶಕರಾದ ಎನ್. ಜ್ಯೋತಿ ಕುಮಾರ್ ಅವರು, ಕರಾವಳಿ ಕರ್ನಾಟಕದ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
ಪುಣೆಯ ವಿಜ್ಞಾನಿ -ಕೇಂದ್ರೀಯ ನೀರು ಮತ್ತು ವಿದ್ಯುತ್ ಸಂಶೋಧನಾ ಕೇಂದ್ರ (ಸಿಡಬ್ಲ್ಯೂಪಿಆರ್ ಎಸ್),ದ ಎ.ವಿ ಮಹಾಲಿಂಗಯ್ಯ ಅವರು, ಕೇಂದ್ರ ನೀರು ಮತ್ತು ವಿದ್ಯುತ್ ಸಂಶೋಧನಾ ಬಗ್ಗೆ ಮಾಹಿತಿ ನೀಡಿದರು.

ಚೆನ್ನೈ ವಿಜ್ಞಾನಿ-ಇನೇಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (ಎನ್‍ಐಒಟಿ) ಶ್ಯಾಮಲಾ ಅವರು ಎನ್ ಐಓಟಿ ಬಗ್ಗೆ ಮತ್ತು ಗೋವಾದ ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆ (ಎನ್‍ಐಒ) ಮುಖ್ಯ ವಿಜ್ಞಾನ ಡಾ.ಎ.ಎಸ್. ಸನಿಲ್ ಕುಮಾರ್ ವಿ. ಅವರು ಎನ್ ಐಓ ಬಗ್ಗೆ ಮಾಹಿತಿ ನೀಡಿದರು.
ಇನ್ನು ಇದೇ ವೇಳೆ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಕೃಷ್ಣಮೂರ್ತಿ ಬಿ ಕುಲಕರ್ಣಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಜೆ.ಇ.ಯತೀಶ್ ಚಂದ್ರನ್, ಎಂಎಸ್‍ಓ, ಸಿಡಬ್ಲ್ಯೂಸಿನ ಚೀಫ್ ಇಂಜಿನಿಯರ್ ವಿರೇಂದ್ರ ಶರ್ಮಾ, ಬಂದರು ನಿರ್ದೇಶಕರು ಮತ್ತು ಸದಸ್ಯರು, ಕರ್ನಾಟಕ ಜಲಸಾರಿಗೆ ಮಂಡಳಿಯ ಕ್ಯಾಪ್ಟನ್ ಸಿ. ಸ್ವಾಮಿ, ಕರ್ನಾಟಕ ಜಲಸಾರಿಗೆ ಮಂಡಳಿ ಚೀಫ್ ಇಂಜಿನಿಯರ್ ಪ್ರಮಿತ್, ಎಂಎಸ್ ಓ, ಸಿಡಬ್ಯೂಸಿ ನಿರ್ದೇಶಕರಾದ ಡಾ.ಜೆ. ಹರ್ಷ ಸೇರಿದಂತೆ ಹಲವರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು