LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

25 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆ 25 ಜನ ಹಿರಿಯ ಐಪಿಎಸ್ ಅಧಿಕಾರಿಗಳನ್ನು ನೆನ್ನೆ ರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಕೇಂದ್ರ ವಲಯದ ಐಜಿಪಿ ರವಿಕಾಂತ್ ಗೌಡರವರ ಜಾಗಕ್ಕೆ ಗುಪ್ತಚಾರ ಇಲಾಖೆಯ ಐಜಿಪಿ ಲಾಬುರಾಮ್‍ರವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ರವಿಕಾಂತೇಗೌಡರಿಗೆ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯ ಹೆಡ್ ಕ್ವಾರ್ಟರ್ಸ್ ಒನ್ ವಿಭಾಗಕೆ ವರ್ಗಾಯಿಸಲಾಗಿದೆ.ಉಳಿದಂತೆ ದಾವಣಗೆರೆ ಐಜಿಪಿ ತ್ಯಾಗರಾಜನ್ ರವರನ್ನು ಇಂಟರ್ನಲ್ ಸೆಕ್ಯೂರಿಟಿ ವಿಭಾಗಕ್ಕೆ, ಶಶಿಕುಮಾರ್ ಕ್ರೀಡಾ ಇಲಾಖೆ ಕಮಿಷನರ್ ಅವರನ್ನು ಹುಬ್ಬಳ್ಳಿ ಧಾರವಾಡ ಕಮಿಷನರ್ ಆಗಿ, ರಮೇಶ್ ಮೈಸೂರು ನಗರ ಕಮಿಷನರ್ ರವರನ್ನು ದಾವಣಗೆರೆ ಡಿ ಐ ಜಿ ಪಿ ಯಾಗಿ, ಬೆಂಗಳೂರು ನಗರ ಆಗ್ನೇಯ ವಿಭಾಗದ ಡಿಸಿಪಿ ಬಾಬಾ ರವರನ್ನು ಬೆಂಗಳೂರು ಗ್ರಾಮಾಂತರ ಎಸ್ ಪಿ ಆಗಿ,

ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿರವರನ್ನು ಮಂಡ್ಯ ಎಸ್ಪಿ ಆಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಿ ಐ ಡಿ ಎಸ್ ಪಿ ಸರಾ ಫಾತಿಮಾರನು ಅಗ್ನೇಯ ವಿಭಾಗ ಡಿ ಸಿ ಪಿ ಯಾಗಿ, ಕೋಲಾರ ಎಸ್ಪಿ ನಾರಾಯಣ್‍ರವರನ್ನು ಉತ್ತರಕನ್ನಡ ಎಸ್ಪಿ ಆಗಿ, ಬಿಎಂಟಿಎಫ್ ಎಸ್ ಪಿ ಶೋಭಾರಾಣಿ ರವರನ್ನು ಬಳ್ಳಾರಿ ಜಿಲ್ಲಾ ಎಸ್ ಪಿ ಆಗಿ, ವಿಷ್ಣುವರ್ಧನ ಉತ್ತರ ಕನ್ನಡದಿಂದ ಮೈಸೂರು ಎಸ್ಪಿ ಆಗಿ, ಸುಮನ್ ಡಿ ಪೆನ್ನಿಕರವರನ್ನು ಬಿಎಂಟಿಎಫ್ ಎಸ್ ಪಿ ಆಗಿ, ರಿಶ್ಯಂತ್ ವಯರ್ಲೆಸ್ ಎಸ್ಪಿಆಗಿ, ಚನ್ನಬಸವಣ್ಣ ಲಂಗೋಟಿ ರವರನ್ನು ಡಿಸಿಪಿಯಾಗಿ, ಅರುಣ್ ಗಿರಿ ರವರನ್ನು ಸಿಐಡಿ ಎಸ್‍ಐಟಿ ಎಸ್‍ಪಿ ಯಾಗಿ, ನಾಗೇಶ್ ರವರನ್ನು ಸಿಎಆರ್ ಹೆಡ್ ಕ್ವಾರ್ಟರ್ಸ್ ಡಿಸಿಪಿಯಾಗಿ, ಪದ್ಮಿನಿ ರವರನ್ನು ಬೆಂಗಳೂರು ಡಿಸಿಪಿ ಅಡ್ಮಿನ್ ಆಗಿ, ಯತೀಶ್ ರವರನ್ನು ಡಿ ಕೆ ಎಸ್ ಪಿ ಯಾಗಿ, ಕವಿತಾ ರವರನ್ನು ಚಾಮರಾಜನಗರ ಎಸ್ಪಿ ಆಗಿ, ನಿಖಿಲ್ ರವರನ್ನು ಕೋಲಾರ ಎಸ್ಪಿ ಆಗಿ, ಕೌಶಿಕ್ ರವರನ್ನು ಚಿಕ್ಕಬಳ್ಳಾಪುರ ಎ ಎಸ್ ಪಿ ಮತ್ತು ಮಹಾಲಿಂಗ ನಡಗಾವಿ ರವರನ್ನು ಹುಬ್ಬಳ್ಳಿ ಧಾರವಾಡ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು