LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

`ತರಕಾರಿ ಸೊಪ್ಪುಗಳಲ್ಲಿ ಹೆಚ್ಚುತ್ತಿರುವ ಸೀಸ ಪ್ರಮಾಣ ತಡೆಗಟ್ಟಲು ಬಹು ಇಲಾಖೆಗಳನ್ನೊಳಗೊಂಡ ಸಮಿತಿ ರಚನೆ’

ಬೆಂಗಳೂರಿಗೆ ಸರಬರಾಜಾಗುತ್ತಿರುವ ತರಕಾರಿ, ಸೊಪ್ಪುಗಳಲ್ಲಿ ೨೦ ಪಟ್ಟು ಸೀಸ ಮತ್ತು ವಿಷಕಾರಿ ರಾಸಾಯನಿಕ ಅಂಶಗಳು ಕಂಡುಬರುತ್ತಿರುವುದರಿಂದ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ ಮತ್ತು ಮಾಲಿನ್ಯ ಮಂಡಳಿಯನ್ನು ಒಳಗೊಂಡAತೆ ಸಮಿತಿಯನ್ನು ರಚಿಸಿ, ಇದನ್ನು ತಡೆಗಟ್ಟಲು ಅತಿ ಶೀಘ್ರದಲ್ಲಿ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುವುದು ಎಂದು ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ತಿಳಿಸಿದರು.
ಇಂದು ವಿಧಾಸಭೆಯಲ್ಲಿ ಡಾ. ಸಿ. ಎನ್. ಅಶ್ವಥ್ ನಾರಾಯಣ ಅವರು ಗಮನ ಸೆಳೆವ ಸೂಚನೆಯಡಿ ಬೆಂಗಳೂರು ಸುತ್ತಮುತ್ತ ಬೆಳೆಯಲಾಗುತ್ತಿರುವ ತರಕಾರಿ ಮತ್ತು ಸೊಪ್ಪುಗಳಲ್ಲಿ ಅಧಿಕ ಪ್ರಮಾಣದಲ್ಲಿ ಸೀಸ ಸೇರಿದಂತೆ ಇತರೆ ಲೋಹಗಳು ಪತ್ತೆಯಾಗುತ್ತಿರುವುದಕ್ಕೆ ಎಸ್ ಟಿ ಪಿ ಗಳಿಂದ ಸರಿಯಾಗಿ ಶುದ್ಧೀಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸಲಾಗುತ್ತಿದೆ. ಈ ನೀರನ್ನು ರೈತರು ತರಕಾರಿ ಬೆಳೆಯಲು ಬಳಸುತ್ತಿರುವುದೇ ಇದಕ್ಕೆ ಕಾರಣ. ಹಾಗೆಯೇ ಹಾಲು ಉತ್ಪನ್ನಗಳಲ್ಲಿ ಕಲಬೆರಕೆ, ಮೊಟ್ಟೆಗಳಲ್ಲಿ ಹಾನಿಕಾರಕ ಅಂಶಗಳಿರುವುದು ಬೆಳಕಿಗೆ ಬಂದಿದೆ. ಇದರಿಂದ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇಬ್ಬರಲ್ಲಿ ಒಬ್ಬರಿಗೆ ಫ್ಯಾಟಿ ಲಿವರ್ ಸಮಸ್ಯೆ ಕಂಡುಬರುತ್ತಿದೆ. ಹೊಟ್ಟೆಗೆ ಸಂಬAಧಿಸಿದAತೆ ಕಾಯಿಲೆಗಳು ಹೆಚ್ಚುತ್ತಿರುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಗಮನ ಹರಿಸಬೇಕು ಎಂದರು.
ಆರೋಗ್ಯ ಸಚಿವರ ಪರವಾಗಿ ಪ್ರಿಯಾಂಕಾ ಖರ್ಗೆ ಅವರು ಉತ್ತರ ನೀಡಲು ಮುಂದಾದರು. ಈ ಸಮಸ್ಯೆಗೆ ಪರಿಸರ ಮಾಲಿನ್ಯವೂ ಕಾರಣವಾಗುವುದರಿಂದ ಸದನದಲ್ಲಿದ್ದ ಇರುವ ಅರಣ್ಯ ಸಚಿವರು ಈ ಬಗ್ಗೆ ಹೇಳಬೇಕು ಎಂದು ಅಶ್ವಥ್ ನಾರಾಯಣ ಅವರು ಕೇಳಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ ಅವರು, ನೀವು ಹೇಳುತ್ತಿರುವುದು ನಿಜ. ಇದನ್ನು ತಡೆಗಟ್ಟುವ ಸಲುವಾಗಿ ವಿವಿಧ ಇಲಾಖೆಗಳನ್ನು ಒಳಗೊಂಡಂತೆ ಸಮಿತಿ ರಚನೆ ಮಾಡಿ ಎಂದು ತಾವು ಒಳ್ಳೆಯ ಸಲಹೆ ನೀಡಿದ್ದೀರಿ. ಅದರಂತೆ ಆರೋಗ್ಯ ಇಲಾಖೆ ನೇತೃತ್ವದಲ್ಲಿ ವಿವಿಧ ಇಲಾಖೆಗಳನ್ನು ಒಳಗೊಂಡ ಸಮಿತಿಯನ್ನು ಮುಂದಿನ ವಾರದಲ್ಲೇ ರಚಿಸಲಾಗುವುದೆಂದರು.
ಬೆAಗಳೂರು ಮತ್ತು ಸುತ್ತ ಮುತ್ತ ಜಲ ಮತ್ತು ವಾಯು ಮಾಲಿನ್ಯವಾಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ. ಕಾಲಮಿತಿಯಲ್ಲಿ ಮಲಿನ ನೀರನ್ನು ಶುದ್ಧೀಕರಣ ಮಾಡಲು ಶುದ್ಧೀಕರಣ ಘಟಕಗಳ ಕೊರತೆ ಇದೆ. ಬೆಂಗಳೂರಿನಲ್ಲಿ ಮಲ ಮತ್ತು ಘನತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ದೀರ್ಘಕಾಲದ ಯೋಜನೆಯನ್ನು ಮಾಡಬೇಕು ಎಂದರು.
ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಮಾತನಾಡಿ, ಹಾಲಿನಲ್ಲಿ ಕೂಡ ಸೀಸ ಕಂಡುಬAದಿದೆ. ಮೊಟ್ಟೆಯಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿದೆ. ತಿಳಿದವರು ತರಕಾರಿಯನ್ನು ಉಪ್ಪು ನೀರಿನಲ್ಲಿ ಚನ್ನಾಗಿ ತೊಳೆದು ಉಪಯೋಗಿಸುತ್ತಾರೆ. ಅದರೆ ಬೀದಿ ಬದಿ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವವರು ತರಕಾರಿಗಳನ್ನು ತೊಳೆಯದೇ ಬಳಸುತ್ತಾರೆ. ಇದನ್ನು ಜನರು ತಿನ್ನುವುದರಿಂದ ಆರೋಗ್ಯದಲ್ಲಿ ತೊಂದರೆ ಆಗುತ್ತದೆ. ಬೆಂಗಳೂರಿನ ಒಂದುವರೆ ಕೋಟಿ ಜನರ ಆರೋಗ್ಯ ಕಾಪಾಡುವ ಜವಾಬ್ದಾರಿ ಜನಪ್ರತಿನಿಧಿಗಳದಾಗಿದೆ. ಹಾಗಾಗಿ ನಾವೆಲ್ಲರೂ ಒಟ್ಟಾಗಿ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದರು.
ಪ್ರಿಯಾಂಕ ಖರ್ಗೆ ಅವರು ಮಾತನಾಡಿ ಸರ್ಕಾರ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಸಧ್ಯದಲ್ಲೇ ಈ ವಿಚಾರವಾಗಿ ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ಉಪಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಎಲ್ಲಾ ಜನಪ್ರತಿನಿಧಿಗಳನ್ನೊಳಗೊಂಡAತೆ ಸಭೆಯನ್ನು ಕರೆಯಲಾಗುವುದೆಂದರು.
ಸೊಪ್ಪು

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು