LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

"೪೫" ಚಿತ್ರದ "AFRO ಟಪಾಂಗ" ಪ್ರಮೋಷನ್ ಸಾಂಗ್ ಬಿಡುಗಡೆ

ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಎಂ. ರಮೇಶ್ ರೆಡ್ಡಿ ನಿರ್ಮಿಸುತ್ತಿರುವ "೪೫" ಚಿತ್ರದ "AFRO ಟಪಾಂಗ" ಅದ್ದೂರಿ ಪ್ರಮೋಷನ್ ಸಾಂಗ್ ಬಿಡುಗಡೆಯಾಗಿದೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಪ್ರಮೋಷನ್ ಸಾಂಗ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಹಾಡಿನಲ್ಲಿ ಉಗಾಂಡ ದೇಶದ ಹೆಸರಾಂತ ಜಿಟೊ ಕಿಡ್ಸ್ ಜೊತೆಗೆ ಚಿತ್ರದ ನಾಯಕರಾದ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಕನ್ನಡ ರಾಜ್ಯೋತ್ಸವದ ದಿನ ಈ ಹಾಡಿನ ಬಿಡುಗಡೆ ನೆರವೇರಿತು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಮ್ಮ ಚಿತ್ರದ "AFRO ಟಪಾಂಗ": ಪ್ರಮೋಷನ್ ಸಾಂಗ್ ಅದ್ದೂರಿಯಾಗಿ ಮೂಡಿಬಂದಿದೆ. ಇದೇ ಮೊದಲ ಬಾರಿಗೆ ಈ ಹಾಡಿಗೆ ನೃತ್ಯ ಮಾಡಲು ಉಗಾಂಡದಿAದ ಜಿಟೊ ಕಿಡ್ಸ್
ಎಂಬ ಹೆಸರಾಂತ ನೃತ್ಯಗಾರರು ಭಾರತಕ್ಕೆ ಬಂದಿದ್ದಾರೆ. ಅವರು ಅಭಿನಯಿಸಿರುವ ಮೊದಲಭಾರತದ ಚಿತ್ರ ಕೂಡ "೪೫" ಆಗಿದೆ. ಯಾವುದೇ ಕೊರತೆ ಬಾರದ ಹಾಗೆ ಈ ಹಾಡನ್ನು  ಅದ್ದೂರಿಯಾಗಿ ನಿರ್ಮಾಣ ಮಾಡಿದ್ದೇವೆ. ತೆರೆಯ ಮೇಲೆ ನೋಡಿದಾಗ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದರ ಕ್ರೆಡಿಟ್ ನಿರ್ದೇಶಕರಿಗೆ ಸೇರಬೇಕು. ಇನ್ನೂ, ನಮ್ಮ ಚಿತ್ರ ಡಿಸೆಂಬರ್ ೨೫ ರಂದು ತೆರೆಗೆ ಬರುತ್ತಿದೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ರಮೇಶ್ ರೆಡ್ಡಿ. ನಾನು ನಿರ್ದೇಶಕನಾಗಲು ಶಿವರಾಜಕುಮಾರ್ ಅವರೆ ಕಾರಣ ಎಂದು ಮಾತನಾಡಿದ ನಿರ್ದೇಶಕ ಅರ್ಜುನ್ ಜನ್ಯ, ನಮ್ಮ "೪೫" ಚಿತ್ರದಲ್ಲಿ ಹಾಡಿಲ್ಲ. ಆದರೆ, ಪ್ರಮೋಷನಲ್ ಸಾಂಗ್ ಮಾಡಬೇಕೆAಬ ಆಸೆ ಇತ್ತು. ಮಾಮೂಲಿ ತರಹ ಮಾಡುವುದು ಬೇಡ ಅಂದುಕೊAಡೆವು.

ಆಗ ನನಗೆ ಉಗಾಂಡದ ಜಿಟೊ ಕಿಡ್ಸ್ ಈ ಪ್ರಮೋಷನ್ ಸಾಂಗ್ ನಲ್ಲಿ ಅಭಿನಯಿಸಿದರೆ ಚೆಂದ ಎನಿಸಿತು. ಕಷ್ಟಪಟ್ಟು ಅವರನ್ನು ಸಂಪರ್ಕ ಮಾಡಿದ್ದೆವು. ಇವರ ಜೊತೆಗೆ ನಮ್ಮ ಚಿತ್ರದ ಮೂರು ಜನ ನಾಯಕರು ಅಭಿನಯಿಸಿದ್ದಾರೆ. ಎಂ.ಸಿ.ಬಿಜ್ಜು ಈ ಹಾಡನ್ನು ಬರೆದು ಹಾಡಿದ್ದಾರೆ. ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡು ಇಷ್ಟು ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಹಾಗೂ ವಿಶೇಷವಾಗಿ ನಿರ್ಮಾಪಕರಿಗೆ ಧನ್ಯವಾದ ಎಂದರು. "೪೫" ಚಿತ್ರ ಬರೀ ಕರ್ನಾಟಕ ಮಾತ್ರ ಅಲ್ಲ. ಭಾರತದಾದ್ಯಂತ ಯಶಸ್ವಿಯಾಗಲಿ. ಏಕೆಂದರೆ ಅAತಹ ಕಂಟೆAಟ್ ವುಳ್ಳ ಸಿನಿಮಾ ಇದು. ಅರ್ಜುನ್ ಜನ್ಯ ಈ ಚಿತ್ರದ ಕಥೆ ಹೇಳಿದಾಗ ನೀವೆ  ನಿರ್ದೇಶನ ಮಾಡಿ ಎಂದು ಹೇಳಿದ್ದೆ. ಈಗ ಈ ಹಾಡು ನೋಡಿದಾಗ ಅವರ ನಿರ್ದೇಶನದ ಬಗ್ಗೆ ತಿಳಿಯುತ್ತಿದೆ. ನಾನು, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಮೂರು ಜನ ಈ ಚಿತ್ರದ ನಾಯಕರು. ಅಭಿನಯದಲ್ಲಿ ಸಮಾನವಾದ ಅವಕಾಶವಿದೆ ಎಂದು ಶಿವರಾಜಕುಮಾರ್ ತಿಳಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು