LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಬಾಕ್ಸಿಂಗ್: ಭಾರತಕ್ಕೆ 5 ಚಿನ್ನ, 9 ಬೆಳ್ಳಿ

ಅಸ್ತಾನಾ, ಕಜಕಸ್ತಾನ: ಭಾರತದ ಬಾಕ್ಸರ್‍ಗಳಾದ ಬ್ರಿಜೇಶ್ ತಮ್ಟಾ, ಆರ್ಯನ್ ಹೂಡಾ, ಯಶವರ್ಧನ್ ಸಿಂಗ್, ಲಕ್ಷ್ಮಿ ಮತ್ತು ನಿಶಾ ಅವರು ಎಎಸ್‍ಬಿಸಿ ಏಷ್ಯಾ 22 ವರ್ಷದೊಳಗಿನವರ ಮತ್ತು ಯುವ ಬಾಕ್ಸಿಂಗ್ ಚಾಂಪಿಯನ್‍ಷಿಪ್‍ನ ಯುವ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡರು.

ಸೋಮವಾರ ನಡೆದ ಪುರುಷರ 48 ಕೆ.ಜಿ ವಿಭಾಗದ ಫೈನಲ್‍ನಲ್ಲಿ ಬ್ರಿಜೇಶ್ 5-0 ಅಂತರದಿಂದ ತಜಕಿಸ್ತಾನದ ಮುಮಿನೋವ್ ಮುಯಿನ್‍ಖೋಡ್ಜಾ ಮಣಿಸಿ, ಭಾರತಕ್ಕೆ ಟೂರ್ನಿಯ ಮೊದಲ ಚಿನ್ನವನ್ನು ತಂದುಕೊಟ್ಟರು.51 ಕೆ.ಜಿ ವಿಭಾಗದಲ್ಲಿ ಆರ್ಯನ್ ಅದೇ ರೀತಿಯ ಪ್ರಾಬಲ್ಯ ಪ್ರದರ್ಶಿಸಿದರು. ಅವರು 5-0 ಯಿಂದ ಕಿರ್ಗಿಸ್ತಾನದ ಕಮಿಲೋವ್ ಜಾಫರ್ಬೆಕ್ ವಿರುದ್ಧ ಜಯ ಸಾಧಿಸಿದರು. 63.5 ಕೆ.ಜಿ ವಿಭಾಗದಲ್ಲಿ ಯಶವರ್ಧನ್ ಸಿಂಗ್ 4-1ರಿಂದ ತಜಕಿಸ್ತಾನದ ಗಫುರೊವ್ ರುಸ್ಲಾನ್ ಅವರನ್ನು ಹಿಮ್ಮೆಟ್ಟಿಸಿದರು.

ಮಹಿಳೆಯರ 52 ಕೆ.ಜಿ ವಿಭಾಗದಲ್ಲಿ ಹಾಲಿ ಜೂನಿಯರ್ ವಿಶ್ವ ಚಾಂಪಿಯನ್ ನಿಶಾ 5-0 ಸರ್ವಾನುಮತದ ತೀರ್ಪಿನ ಮೂಲಕ ಕಜಕಿಸ್ತಾನದ ಓಟಿನ್‍ಬೇ ಬಾಗ್ಜಾನ್ ಅವರನ್ನು ಸೋಲಿಸಿದರು. 50 ಕೆ.ಜಿ ವಿಭಾಗದಲ್ಲಿ ಲಕ್ಷ್ಮಿ ಭಾರತಕ್ಕೆ ಐದನೇ ಚಿನ್ನವನ್ನು ತಂದುಕೊಂಟ್ಟರು. ಅವರು ಮಂಗೋಲಿಯಾದ ಎಂಖ್ ನೊಮುಂಡರಿ ವಿರುದ್ಧ ಜಯ ಸಾಧಿಸಿದರು.

ಭಾರತದ 9 ಬಾಕ್ಸರ್‍ಗಳು ಬೆಳ್ಳಿ ಪದಕದೊಂದಿಗೆ ಅಭಿಯಾನವನ್ನು ಕೊನೆಗೊಳಿಸಿದರು. ಸಾಗರ್ ಜಾಖರ್ (60 ಕೆ.ಜಿ), ಪ್ರಿಯಾಂಶು (71 ಕೆ.ಜಿ), ರಾಹುಲ್ ಕುಂದು (75 ಕೆ.ಜಿ), ಆರ್ಯನ್ (92 ಕೆ.ಜಿ), ತಮನ್ನಾ (54 ಕೆ.ಜಿ), ನಿಕಿತಾ ಚಂದ್ (60 ಕೆ.ಜಿ), ಸೃಷ್ಟಿ ಸಾಥೆ (63 ಕೆ.ಜಿ), ರುದ್ರಿಕಾ (75 ಕೆ.ಜಿ) ಮತ್ತು ಖುಷಿ ಪೂನಿಯಾ (81 ಕೆಜಿ) ತಮ್ಮ ವಿಭಾಗಗಳ ಫೈನಲ್‍ನಲ್ಲಿ ಪರಾಭವಗೊಂಡರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು