LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಭಾರತದಲ್ಲಿ ಟಟ್ರ್ಲ್ ವ್ಯಾಕ್ಸ್ 5ನೇ ವಾರ್ಷಿಕೋತ್ಸವ

ಬೆಂಗಳೂರು: ಪ್ರಶಸ್ತಿ ಪುರಸ್ಕೃತ ಚಿಕಾಗೊ ಮೂಲದ ಕಾರ್ ಕೇರ್ ಕಂಪನಿ ಟಟ್ರ್ಲ್ ವ್ಯಾಕ್ಸ್, ಇಂಕ್. ಭಾರತದಲ್ಲಿ ತನ್ನ ಕಾರ್ಯಾಚರಣೆಗಳ ಐದು ವರ್ಷ ಪೂರ್ಣಗೊಂಡಿರುವುದನ್ನು ಪ್ರಕಟಿಸಿದೆ. ಕಾರು ಉತ್ಸಾಹಿಗಳಿಗೆ ಅವರ ಬದಲಾಗುತ್ತಿರುವ ಅಗತ್ಯಗಳಿಗೆ ಸೂತ್ರಗಳನ್ನು ಒದಗಿಸುತ್ತಿದ್ದು 2019ರ ಈ ದಿನದಂದು ತನ್ನ ಭಾರತದ ಕಾರ್ಯಾಚರಣೆಗೆ ಚಾಲನೆ ನೀಡಿತ್ತು.

ಈ ಸಂದರ್ಭಕ್ಕಾಗಿ ಟಟ್ರ್ಲ್ ವ್ಯಾಕ್ಸ್ ತನ್ನ ಸ್ಮಾರ್ಟ್ ಶೀಲ್ಡ್ ಪೇಂಟ್  ಪ್ರೊಟೆಕ್ಷನ್ ಫಿಲ್ಮ್ ಅನ್ನು ಬಿಡುಗಡೆ ಮಾಡಿದ್ದು ಇದು ಭಾರತದಲ್ಲಿ ತನ್ನ ಕೋ-ಬ್ರಾಂಡೆಡ್ ಕಾರ್ ಕೇರ್ ಸ್ಟುಡಿಯೋಗಳಲ್ಲಿ ವಿಶೇಷವಾಗಿ ಲಭ್ಯವಿದೆ. ಈ ಪಿಪಿಎಫ್ ಕ್ರಾಂತಿಕಾರಕ ಸೆಲ್ಫ್-ಹೀಟಿಂಗ್ ಟಾಪ್ ಕೋಟ್ ನೊಂದಿಗೆ ಬಂದಿದ್ದು ಯುವಿ ಕಿರಣಗಳಿಗೆ ಅಸಾಧಾರಣ ತಾಳಿಕೆ ಮತ್ತು ಒಇಎಂ ಪೇಂಟೆಡ್ ಮೇಲ್ಮೈಗಳ ಉನ್ನತ ರಕ್ಷಣೆ ನೀಡುತ್ತದೆ.

ಇದು ಸರಿಸಾಟಿ ಇರದ ಸ್ಕ್ರಾಚ್ ನಿರೋಧಕತೆ, ಕಲೆಗಳಿಂದ ಮತ್ತು ವಾತಾವರಣದಿಂದ ರಕ್ಷಣೆ ನೀಡುತ್ತಿದ್ದು ಈ ಎಲ್ಲವನ್ನೂ ಹೈ-ಗ್ಲಾಸ್ ಫಿನಿಷ್ ಮತ್ತು ಆಪ್ಟಿಕಲ್ ಕ್ಲಾರಿಟಿಯೊಂದಿಗೆ ನೀಡುತ್ತದೆ. ಈ ಸೇವೆಯು 5 ವರ್ಷಗಳ ವಾರೆಂಟಿ ಮತ್ತು 3 ವರ್ಷಗಳ ವಾರೆಂಟಿಯೊಂದಿಗೆ ಬರುತ್ತದೆ.

ಇದಲ್ಲದೆ ಟಟ್ರ್ಲ್ ವ್ಯಾಕ್ಸ್ ಬೆಂಗಳೂರಿನಲ್ಲಿ ಮೊಟ್ಟಮೊದಲ ಎಕ್ಸ್ ಪೀರಿಯೆನ್ಸ್ ಸೆಂಟರ್ ಅನ್ನೂ ಉದ್ಘಾಟಿಸಿದೆ. ಈ ಕೇಂದ್ರವು 1500 ಚದರ ಅಡಿ ವಿಸ್ತೀರ್ಣ ಹೊಂದಿದ್ದು ಕಾರ್ ಡೀಟೇಲಿಂಗ್ ನಲ್ಲಿ ಆವಿಷ್ಕಾರ ಮತ್ತು ಶ್ರೇಷ್ಠತೆಯನ್ನು ಬಿಂಬಿಸುತ್ತದೆ. ಈ ಕೇಂದ್ರವು ದೇಶದಲ್ಲಿ ಮೊಟ್ಟಮೊದಲನೆಯದಾಗಿದ್ದು ಪ್ರಸ್ತುತದ ಡೀಲರ್ ಗಳಿಗೆ ಸುಲಭವಾಗಿ ಕಲಿಯಬಲ್ಲ ವಾತಾವರಣದಲ್ಲಿ ಸುಧಾರಿತ ಡೀಟೇಲಿಂಗ್ ಕೌಶಲ್ಯಗಳ ಮೂಲಭೂತ ಅಂಶಗಳಿಗೆ ಮುನ್ನುಗ್ಗಲು ಉತ್ತೇಜಿಸುತ್ತದೆ ಮತ್ತು ಟಟ್ರ್ಲ್ ವ್ಯಾಕ್ಸ್ ಪ್ರಯಾಣದ ಆಳವಾದ ಅಲ್ಲದೆ ಅದರ ಉತ್ಪನ್ನಗಳು ಮತ್ತು ಸಿದ್ಧಾಂತ ಅರ್ಥೈಸಿಕೊಳ್ಳುವಿಕೆಗೆ ನೆರವಾಗುತ್ತದೆ.

ಈ ಸಂದರ್ಭ ಕುರಿತು ಟಟ್ರ್ಲ್ ವ್ಯಾಕ್ಸ್ ಕಾರ್ ಕೇರ್ ಇಂಡಿಯಾ ಪ್ರೈ.ಲಿ.ಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಜನ್ ಪುರವಂಗರ, ``ಭಾರತದಲ್ಲಿ ಟಟ್ರ್ಲ್ ವ್ಯಾಕ್ಸ್ ಗೆ ಐದನೇ ವಾರ್ಷಿಕೋತ್ಸವವಾಗಿದ್ದು ಅದು ಭಾರತದ ವೃದ್ಧಿಸುತ್ತಿರುವ ಕಾರ್ ಕೇರ್ ಸಂಸ್ಕೃತಿಯಲ್ಲಿ ನಮ್ಮ ಸಾಮಥ್ರ್ಯ ಮತ್ತು ಬ್ರಾಂಡ್ ವ್ಯಾಪ್ತಿ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ.

ಈ ಕಳೆದ 5 ವರ್ಷಗಳಲ್ಲಿ ಈಪ್ರಯಾಣವನ್ನು ಹಿಂದಿರುಗಿ ನೋಡುವುದು ಹಾಗೂ ವಾಹನ ಉತ್ಸಾಹಿಗಳು ಮತ್ತು ಕಾರು ಮಾಲೀಕರ ಹೃದಯಗಳನ್ನು ಸೆಳೆದ ಅಸಾಧಾರಣ ಕಥೆಗಳನ್ನು ಸ್ಮರಿಸುವುದು ನಿಜಕ್ಕೂ ಸಂತೋಷ ತಂದಿದೆ. ಹಲವು ಚಾನೆಲ್ ಗಳಲ್ಲಿ ಪ್ರಗತಿಯು ಅಸಾಧಾರಣವಾಗಿದೆ ಮತ್ತು ನಾವು ಪ್ರತಿ ವರ್ಷ ಟೈಯರ್ 1 ಮಾತ್ರವಲ್ಲದೆ ಟೈಯರ್ 2 ಹಾಗೂ ಟೈಯರ್ 3 ನಗರಗಳಿಗೂ ಆದ್ಯತೆ ನೀಡಿದ್ದೇವೆ. ಈ ಸಂದರ್ಭದಲ್ಲಿ ನಾವು ನಮ್ಮ ಚಾನೆಲ್ ಪಾಲುದಾರರು, ಗ್ರಾಹಕರು, ಉದ್ಯಮ ಪಾಲುದಾರರು ಮತ್ತು ನಮ್ಮ ಬ್ರಾಂಡ್ ಶ್ರೇಷ್ಠತೆಯಲ್ಲಿ ನಂಬಿಕೆ ಇರಿಸಿದ ಪ್ರತಿ ವ್ಯಕ್ತಿಗೂ ಕೃತಜ್ಞತೆ ಸಲ್ಲಿಸುತ್ತೇವೆ'' ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು