LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

`ಚಿಟ್ಟೀ ಆಯೀ ಹೈ' ಸಂಗೀತ ಸಂಜೆಯಲ್ಲಿ ಕಲಾವಿದರ ದಂಡು 


ಗಾಯಕಿ ದಿ. ಲತಾ ಮಂಗೇಶ್ಕರ್  ಸ್ಮರಣಾರ್ಥ’ಚಿಟ್ಟೀ ಆಯೀ ಹೈ’ ಸಂಗೀತ ಸಂಜೆ ಕಾರ್ಯಕ್ರಮ ನೆರವೇರಿತು.  ಹಿಂದಿ, ಕನ್ನಡ ಸೇರಿದಂತೆ ವಿವಿಧ ಭಾಷೆಗಳ  ಚಿತ್ರರಂಗದ  ಗಣ್ಯರು ಹಾಜರಿದ್ದರು. ನಟ, ನಿರ್ಮಾಪಕ, ನಿರ್ದೇಶಕ ಮತ್ತು ವಿತರಕ ಕಮಲ್ ರಾಜ್ ಆಯೋಜನೆಯಲ್ಲಿ ಮೂಡಿಬಂದ  ಕಾರ್ಯಕ್ರಮದಲ್ಲಿ ದಿ. ಲತಾ ಮಂಗೇಶ್ಕರ್ ಅವರ ಸೋದರಿ ಹಿರಿಯ ಗಾಯಕಿ ಉಷಾ ಮಂಗೇಶ್ಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ, ಹಿಂದಿ, ಸೂಫಿ, ಗಝಲ್ ಸೇರಿದಂತೆ ಅನೇಕ ಶೈಲಿಯ ಗೀತೆಗಳಿಗೆ ಗಾಯಕ ಕಮಲ್ ರಾಜ್  ಮತ್ತು ಸಂಗಡಿಗರು ಧ್ವನಿಯಾಗಿದ್ದರು.
 ಗಾಯಕಿ ಉಷಾ ಮಂಗೇಶ್ಕರ್ ಮಾತನಾಡಿ  ‘ನಾನು ಈ ಕಾರ್ಯಕ್ರಮದಲ್ಲಿ ಪಂಕಜ್ ಉದಾಸ್ ಜೀ ಅವರ ಗಾಯನ ಕೇಳುತ್ತಿದ್ದೇನೆಯೋ ಅಥವಾ ಕಮಲ್ ಅವರ ಗಾಯನ ಕೇಳುತ್ತಿದ್ದೇನೆಯೋ ತಿಳಿಯುತ್ತಿಲ್ಲ! ಅಷ್ಟೊಂದು ಸುಮಧುರವಾಗಿ ಗೀತೆಗಳನ್ನು ಪ್ರಸ್ತುತಪಡಿಸಿದ್ದಾರೆ. ಬೆಂಗಳೂರಿನ ಜನತೆ ಲತಾ ಮಂಗೇಶ್ಕರ್ ಅವರ ಮೇಲೆ ಇಟ್ಟುಕೊಂಡಿರುವ ಪ್ರೀತಿಯನ್ನು ನೋಡಿದರೆ, ಹೃದಯ ಭಾವುಕವಾಗುತ್ತದೆ’ ಎಂದರು. ಕಮಲ್ ರಾಜ್ ಮಾತನಾಡಿ,‘ಕೆಲವು ಕನಸುಗಳು ನನಸಾಗಲು ವರ್ಷಗಳ ಪರಿಶ್ರಮ, ತ್ಯಾಗ, ಪ್ರಾರ್ಥನೆ ಮತ್ತು ಅಚಲವಾದ ನಂಬಿಕೆ ಬೇಕಾಗುತ್ತದೆ. ಆದರೆ ಆ ಕನಸು ನನಸಾದಾಗ, ಅದನ್ನು ವರ್ಣಿಸಲು ಮಾತುಗಳೇ ಸಾಲುವುದಿಲ್ಲ. ಉಷಾ ಮಂಗೇಶ್ಕರ್ ಜೀ ಅವರ ಕೈ ಹಿಡಿದು, ಅವರ ಆಶೀರ್ವಾದ ಪಡೆಯುವುದಕ್ಕಿಂತ ದೊಡ್ಡ ಕ್ಷಣ ನನ್ನ ಜೀವನದಲ್ಲಿ ಇನ್ನೇನಿರಬಹುದು.ಲತಾ ಜೀ ಅವರ ನನೆನನಪಿನಲ್ಲಿ ಇಂಥದ್ದೊAದು ಕಾರ್ಯಕ್ರಮ ಮಾಡಿರುವುದು ನಿಜಕ್ಕೂ ತೃಪ್ತಿ ನೀಡಿದೆ’ ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST