LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಅಕ್ಷಯ ತೃತೀಯ ಸಂಭ್ರಮ: ವಿಂದ್ಯ ಕಲೆಕ್ಷನ್ ಬಿಡುಗಡೆ

ಬೆಂಗಳೂರು: ಭಾರತದ ಪ್ರಮುಖ ಜ್ಯುವೆಲ್ಲರಿ ಬ್ರ್ಯಾಂಡ್ ರಿಲಾಯನ್ಸ್ ಜ್ಯುವೆಲ್ಸ್ ವಿಶಿಷ್ಟ ಮತ್ತು ವಿಭಿನ್ನ ಕಲೆಕ್ಷನ್ ಮೂಲಕ ಹಬ್ಬಗಳನ್ನು ಆಚರಿಸುವ ಸಂಪ್ರದಾಯವನ್ನು ಈ ವರ್ಷವೂ ಮುಂದುವರಿಸಿದ್ದು, ಈ ಬಾರಿಯ ಅಕ್ಷಯ ತೃತೀಯಕ್ಕೆ ವಿಂಧ್ಯ ಕಲೆಕ್ಷನ್ ಅನ್ನು ಪರಿಚಯಿಸುತ್ತಿದೆ.

`ಭಾರತದ ಆಭರಣಗಳು’ ಸರಣಿಯಲ್ಲಿ ಒಂಬತ್ತನೇ ಸರಣಿ ಇದಾಗಿದ್ದು, ಮಧ್ಯಪ್ರದೇಶದ ಪಾರಂಪರಿಕ ವಿಂಧ್ರ ಪ್ರಾಂತ್ಯದಿಂದ ಪ್ರೇರಿತವಾಗಿದೆ. ಫ್ಯಾಷನ್ ಐಕಾನ್ ಮತ್ತು ಬಾಲಿವುಡ್ ನಟಿ ದಿಶಾ ಪಾಟನಿ ಈ ಎಕ್ಸ್‍ಕ್ಲ್ಯೂಸಿವ್ ಹಬ್ಬದ ಕಲೆಕ್ಷನ್ ಅನ್ನು ವಾರಾಣಸಿಯ ರಿಲಾಯನ್ಸ್ ಜ್ಯೂವೆಲ್ಸ್‍ನ ಸ್ಟೋರ್‍ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದರು.

ಹಿಂದು ಸಂಸ್ಕೃತಿಯಲ್ಲಿನ ಶ್ರೀಮಂತಿಕೆ ಮತ್ತು ಸಂಪದ್ಭರಿತತೆಯನ್ನು ಪ್ರತಿಫಲಿಸುವ ಅಕ್ಷಯ ತೃತೀಯವು ಆಭರಣ ಖರೀದಿಗೆ ಅತ್ಯಂತ ಮಂಗಳಕರ ಸಮಯ ಎಂದು ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ ರಿಲಾಯನ್ಸ್ ಜ್ಯುವೆಲ್ಸ್ ವಿಂಧ್ಯ ಕಲೆಕ್ಷನ್ ಅನ್ನು ಅನಾವರಣಗೊಳಿಸುತ್ತಿದ್ದು, ಅದ್ಭುತವಾದ ಆಭರಣವನ್ನು ಒದಗಿಸುವ ಮೂಲಕ ಮಧ್ಯಪ್ರದೇಶದ ಸಂಪ್ರದಾಯ ಮತ್ತು ಪಾರಂಪರಿಕ ಶೈಲಿಗೆ ಗೌರವ ಸಮರ್ಪಣೆ ಸಲ್ಲಿಸುತ್ತಿದೆ.

ರಿಲಾಯನ್ಸ್ ಜ್ಯೂವೆಲ್ಸ್‍ನ ಸಿಇಒ ಸುನೀಲ್ ನಾಯಕ್, ಅಕ್ಷಯ ತೃತೀಯವು ಆಭರಣ ಖರೀದಿಗೆ ಸೂಕ್ತ ಸಮಯವಾಗಿದೆ. ಈ ಸಮಯವು ಸಂಪತ್ತು ಮತ್ತು ಸಮೃದ್ಧಿಯ ಸೂಚಕವಾಗಿದ್ದು, ನಮ್ಮ ಗ್ರಾಹಕರಿಗೆ ವಿಶಿಷ್ಟ ಅವಕಾಶವನ್ನು ನಾವು ಈ ವಿಂಧ್ಯ ಕಲೆಕ್ಷನ್ ಮೂಲಕ ಒದಗಿಸುತ್ತಿದ್ದೇವೆ. ಈ ಸುಂದರ ಕಲೆಕ್ಷನ್ ಕೇವಲ ಸಂಪತ್ತು ಮತ್ತು ಸೌಂದರ್ಯವನ್ನು ಸೂಚಿಸುವುದಷ್ಟೇ , ಅಕ್ಷಯ ತೃತೀಯ ಹಾಗೂ ನಮ್ಮ ಬ್ರ್ಯಾಂಡ್ ರಿಲಾಯನ್ಸ್ ಜ್ಯೂವೆಲ್ಸ್‍ನ ಚೈತನ್ಯವನ್ನೂ ಸಂಭ್ರಮಿಸುತ್ತದೆ ಎಂದು ಅವರು ಹೇಳಿದ್ದಾರೆ.

ನಟಿ ದಿಶಾ ಪಾಟನಿ ಅವರು ಮಾತನಾಡಿ, ಈ ಕಲೆಕ್ಷನ್‍ನಲ್ಲಿನ ಪ್ರತಿ ಆಭರಣವೂ ಮಾಸ್ಟರ್ ಪೀಸ್ ಆಗಿದ್ದು, ಮಧ್ಯಪ್ರದೇಶದ ಅಮೋಘ ಸಾಂಸ್ಕೃತಿಕ ಪರಂಪರೆ ಮತ್ತು ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತದೆ. ನನಗಂತೂ ವಜ್ರದ ನೆಕ್ಲೇಸ್ ವಿನ್ಯಾಸವು ತುಂಬಾ ಇಷ್ಟವಾಗಿದೆ ಎಂದಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು