LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಜೆಮಿನಿ ಸರ್ಕಸ್ ನಲ್ಲಿ ದೇಶ ವಿದೇಶ ಕಲಾವಿದರಿಂದ ಅಮೋಘ ಪ್ರದರ್ಶನ

ಪೀಣ್ಯ ದಾಸರಹಳ್ಳಿ: ಬೆಂಗಳೂರಿನ ಪೀಣ್ಯ ಎರಡನೇ ಹಂತದ ಜಿಕೆಡಬ್ಲ್ಯೂ ಲೇಔಟ್ ಮೈದಾನದಲ್ಲಿ ಇಂದಿನಿಂದ ಜೂನ್ 10ರ ವರೆಗೆ ಪ್ರತಿದಿನ ಮಧ್ಯಾಹ್ನದ ಆಟ 1,4, 7 ಗಂಟೆಗೆ ಮೂರು ಶೋ ಗಳ ಮೂಲಕ ದೇಶ ವಿದೇಶಗಳ ಹೆಸರಾಂತ ಕಲಾವಿದರ ತಂಡದಿಂದ ಕೂಡಿದ ಜೆಮಿನಿ ಸರ್ಕಸ್ ರೋಚಕ ಮತ್ತು ಅದ್ಭುತ ಪ್ರದರ್ಶನ ಏರ್ಪಡಿಸಲಾಗಿದೆ. ಹಾಗೆಯೇ ಶಾಲಾ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಪ್ರದರ್ಶನ ನೀಡಲಿದ್ದಾರೆ.

ಸರ್ಕಸ್ ನ ಪ್ರಮುಖ ಆಕರ್ಷಣೆಯಾದ ಪ್ರಾಣಿಗಳ ಪ್ರದರ್ಶನ ನಿಷೇಧದ ನಂತರ ಸರ್ಕಸ್ ಅನ್ನು ಇನ್ನಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ರಷ್ಯಾ ಸಹಿತ ವಿವಿಧ ದೇಶಗಳ ಕಲಾವಿದರನ್ನು ಬಳಸಿಕೊಂಡು ಸರ್ಕಸ್ ಪ್ರದರ್ಶನ ನೀಡುವ ಮೂಲಕ ಸರ್ಕಸ್ ನ ಜನಾಕರ್ಷಣೆ ಹೆಚ್ಚಿಸುವ ಕಾರ್ಯದಲ್ಲಿ ಜೆಮಿನಿ ಸರ್ಕಸ್ ಮುಂಚೂಣಿಯಲ್ಲಿದೆ.

1951ರಲ್ಲಿ ಎಂ.ವಿ.ಶಂಕರನ್ ಹಾಗೂ ಕೆ. ಸಹಾದೇವನ್ ರವರಿಂದ ಆರಂಭವಾದ ಜೆಮಿನಿ ಸರ್ಕಸ್ ಈವರೆಗೂ ದೇಶ ವಿದೇಶಗಳಲ್ಲಿ ಸಾವಿರಾರು ಪ್ರದರ್ಶನ ನೀಡುವ ಮೂಲಕ ಸರ್ಕಸ್ ಕಲೆಯನ್ನು ಜೀವಂತವಾಗಿ ಉಳಿಸಿದೆ. ಇಂದು ಎಂ.ವಿ.ಶಂಕರನ್ ಅವರ ಮಕ್ಕಳಾದ ಅಜಯ್ ಶಂಕರ್ ಹಾಗೂ ಅಶೋಕ್ ಶಂಕರ್ ಜೆಮಿನಿ ಸರ್ಕಸ್ ಅನ್ನು ಮುಂದುವರಿಸುವ ಮೂಲಕ ತಮ್ಮ ತಂದೆಯ ಹೆಸರಿಗೆ ಕೀರ್ತಿ ತಂದಿದ್ದಾರೆ.

ಬೇಸಿಗೆ ರಜಾ ಸಮಯದಲ್ಲಿ ಬೆಂಗಳೂರು ನಾಗರೀಕರಿಗೆ ಶುದ್ದ ಮನರಂಜನೆ ನೀಡುವ ಉದ್ದೇಶದಿಂದ ಬೆಂಗಳೂರಿನ ಪೀಣ್ಯ ಎರಡನೇ ಹಂತದ ಜಿಕೆಡಬ್ಲ್ಯೂ ಬಡಾವಣೆಯ ಸಮೀಪದ ಮೈದಾನದಲ್ಲಿ ಜೆಮಿನಿ ಸರ್ಕಸ್ ಪ್ರದರ್ಶನ ಆರಂಭವಾಗಿ ಸರ್ಕಸ್ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಬೆಂಗಳೂರಿನ ಪೀಣ್ಯ ಎರಡನೇ ಹಂತದ ಜಿಕೆಡಬ್ಲ್ಯೂ ಬಡಾವಣೆಯ ಸಮೀಪದ ಮೈದಾನದಲ್ಲಿ ಪ್ರದರ್ಶನವಾಗುತ್ತಿರುವ ಜೆಮಿನಿ ಸರ್ಕಸ್ ನಲ್ಲಿ ರಷ್ಯಾ, ತಾಂಜೇನಿಯಾ, ಇಥಿಯೋಪಿಯಾ ಹಾಗೂ ಭಾರತದ ವಿವಿಧ ಭಾಗದ ಹೆಸರಾಂತ ಕಲಾವಿದರ ವೈವಿಧ್ಯಮಯ ರೋಮಾಂಚನಕಾರಿ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ.

ಜೆಮಿನಿ ಸರ್ಕಸ್‍ನಲ್ಲಿ ಭಾರತ, ತಾಂಜೇನಿಯಾ, ಇಥಿಯೋಪಿಯಾ ಸಹಿತ ವಿವಿಧ ದೇಶಗಳ ಕಲಾವಿದರ ಸಹಿತ 300 ಕ್ಕೂ ಅಧಿಕ ಮಂದಿ ಉದ್ಯೋಗಿಗಳಿದ್ದು ಅವರಲ್ಲಿ 40 ಮಂದಿ ಪುರುಷ ಕಲಾವಿದರು ಹಾಗೂ 60 ಮಹಿಳಾ ಕಲಾವಿದರಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಪ್ರಮೋಟರ್ ಪ್ರೇಮನಾಥ್, ಸಂಯೋಜಕರಾದ ಟೈಟಸ್ ವರ್ಗಿಸ್, ಉಸ್ತುವಾರಿ ದಿವಾಕರ್, ಮೇಲ್ವಿಚಾರಕರಾದ ಸೇತು ಮೋಹನ್ ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು