LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಏಪ್ರಿಲ್ 12ಕ್ಕೆ ಅಪ್ಪಾ ಐಲವ್‍ಯೂ ಬಿಡುಗಡೆ

ನೆನಪಿರಲಿ ಪ್ರೇಮ್ ಬೆಳ್ಳಿ ತೆರೆ ಮೇಲೆ ಬಂದು ಬಹಳ ದಿನ ಆಯಿತು. ಆದರೆ ಈಗ ಅಪ್ಪ ಐ ಲವ್ ಯು ಚಿತ್ರದ ಮೂಲಕ ಲವ್ಲಿ ಸ್ಟಾರ್ ಪ್ರೇಮ್ ಬರ್ತಿದ್ದಾರೆ. ಟಗರು ಚಿತ್ರ ಖ್ಯಾತಿಯ ನಟಿ ಮಾನ್ವಿತಾ ಹರೀಶ್ ಪ್ರೇಮ್‍ಗೆ ಜೋಡಿ ಆಗಿದ್ದಾರೆ. ಮೊದಲ ಬಾರಿಗೆ ಈ ಜೋಡಿ ಬೆಳ್ಳಿತೆರೆಗೆ ಬರುತ್ತಿದೆ. ಇದೀಗ ಇವರ ಈ ಚಿತ್ರ ರಿಲೀಸ್‍ಗೆ ರೆಡಿ ಆಗಿದೆ. ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದ್ದು ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಅಪ್ಪಾ ಐ ಲವ್ ಯೂ ಸಿನಿಮಾದ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ನಟ ಪ್ರೇಮ್ ಮಾತನಾಡಿ, ಸಾಮಾನ್ಯವಾಗಿ ಎಲ್ಲಾ ತಂದೆಯರು ಎಲ್ಲರಿಗೂ ಹೀರೋ. ಎಷ್ಟೇ ಬಲಹೀನ ಅಗಿದ್ದರೂ ಸಹ ರಸ್ತೆಯಲ್ಲಿ ಜಗಳ ಮಾಡಿ ಹೊಡೆದರು. ಮಕ್ಕಳ ಬಾಯಲ್ಲಿ ಬರುವ ಮಾತು ಎಂದರೆ ಅಪ್ಪನಿಗೆ ಹೇಳ್ತೀನಿ ಅಂತಾ. ಅಪ್ಪನಿಗೆ ಹೋಗಿ ಹೇಳುತ್ತಾರೆ. ನನ್ನ ತಂದೆ ನನಗೆ ಹೀರೋ.

ನಾನು ಪ್ಲೇಬ್ಯಾಕ್ ಸಿಂಗರ್ ಆಗಲು ಇಷ್ಟಪಟ್ಟಿದೆ. ಯಾರಾದರೂ ಏನ್ ಆಗ್ತೀಯಾ ಎಂದು ಕೇಳಿದರೆ ನಾನು ಸಿಂಗರ್ ಆಗ್ತೀನಿ ಎನ್ನುತ್ತಿದ್ದೆ. ನಾನು ಚಿಕ್ಕವನು ಇದ್ದಾಗ ಎಲ್ಲಾ ರೀತಿ ಹುಡುಗರ ಸಹವಾಸ ಮಾಡುತ್ತಿದ್ದೆ. ಆದರೆ ನಮ್ಮ ಅಪ್ಪ ಎಂದು ಡೌಟ್ ಪಡಲೇಇಲ್ಲ. ನನ್ನ ಮಗ ಏನು ಅಂತ ಗೊತ್ತು ಎಂದಿದ್ದರು. ಹೀಗಾಗಿ ನಾನು ಕೆಟ್ಟ ದಾರಿ ತುಳಿಯಲಿಲ್ಲ. ನನಗೆ ಕ್ಲೈಮ್ಯಾಕ್ಸ್ ಬಹಳ ಕನೆಕ್ಟ್ ಆಯ್ತು. ನನಗೆ ಸಿಕ್ಕಿರುವ ಪಾತ್ರ ಬಹಳ ಅದ್ಭುತ ಪಾತ್ರ. ನನಗೋಸ್ಕರ ಹುಡುಕಿ ಬಂದ ಪಾತ್ರ. ಹೀಗಾಗಿ ಸಿನಿಮಾ ಒಪ್ಪಿಕೊಂಡೆ ಎಂದರು.

ನಿರ್ದೇಶಕ ಅಥರ್ವ್ ಆರ್ಯ ಮಾತನಾಡಿ, ನಾವು ಹೆಡ್ ಲೈನ್ ಹಾಕಿರುವ ಹಾಗೆ ಇದು ಕಾಲ್ಪನಿಕ ಕಥೆಯಲ್ಲ. ಅಪ್ಪ ಎಂಬ ದೇವರ ಸತ್ಯ ಕಥೆ. ಕಾಲ್ಪನಿಕ ಕಥೆ ಮಾಡುವುದು ಸುಲಭ. ಆದರೆ ನಮ್ಮ ನಿಮ್ಮ ನಡುವೆ ನಡೆಯುವ, ಸಮಾಜದಲ್ಲಿ ವಾಸ್ತವವಾಗಿ ನಡೆಯುವ ಕಥೆಗಳನ್ನು ಎಷ್ಟೋ ಬಾರಿ ಮೆರೆತುಬಿಟ್ಟಿರುತ್ತೇವೆ. ಆದರೆ ನಾವು ಅದನ್ನು ಅನುಭವಿಸುತ್ತಿರುತ್ತೇವೆ. ಅದು ಜೀವನದ ಭಾಗವಾಗಿರುತ್ತದೆ. ಅಂತಹ ಕಥೆಗಳನ್ನು ತೆರೆಮೇಲೆ ತರಬೇಕು ಎಂದು ಅಪ್ಪಾ ಐ ಲವ್ ಯೂ ಕಥೆಯನ್ನು ಆಯ್ಕೆ ಮಾಡಿಕೊಂಡೆವು. ಕಥೆ ಹುಟ್ಟಲು ನಾಣಿ ಸರ್ ಮೂಲ ಕಾರಣ. ಸಿನಿಮಾವಾಗಲೂ ಅವರೇ ಕಾರಣ.

ಅಪ್ಪ ಸಂಸಾರಕ್ಕೆ ಸಮಾಜಕ್ಕೆ ಎಷ್ಟು ಮುಖ್ಯ ಎಂಬುದು ನಾವು ಅಪ್ಪ ಆದಾಗ ಗೊತ್ತಾಗುತ್ತದೆ. ಅಪ್ಪನ ಮಹತ್ವ ಸಾರುವ ಚಿತ್ರ ಇಡೀ ತಂಡದ ಬೆಂಬಲದಿಂದ ಈ ಸಿನಿಮಾವಾಗಿದೆ. ಅಪ್ಪಾ ಐ ಲವ್ ಯೂ ಚಿತ್ರದ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದರು.ತಬಲಾ ನಾಣಿ ಮಾತನಾಡಿ, ಕಿನ್ನಾಳ್ ರಾಜ್, ಈ ಸಿನಿಮಾಗೆ ಅದ್ಭುತ ಹಾಡು ಕೊಟ್ಟಿದ್ದಾರೆ.

ಕಿನ್ನಾಳ್ ರಾಜ್ ಕೆಜಿಎಫ್ ಸಾಂಗ್ ಒಂದು ರೀತಿಯಾಯ್ತು. ನಮ್ಮ ಚಿತ್ರದಲ್ಲಿ ಅವರು ಬರೆದಿರುವ ಹಾಡನ್ನು ಹಾಡುವಾಗ ವಿಜಯ್ ಪ್ರಕಾಶ್ ಕಣ್ಣೀರಾ
ದರು. ಅಂತಹ ಸಾಹಿತ್ಯ. ಅದಕ್ಕೆ ತಕ್ಕನಾದ ಟ್ಯೂನ್ ಆಕಾಶ್ ಕೊಟ್ಟಿದ್ದಾರೆ. ವಿಜಯ್ ಚೆಂಡೂರು ಒಳ್ಳೆ ಪಾತ್ರ ಮಾಡಿದ್ದಾರೆ ಎಂದರು.
ಆಕಾಶ್ ಪರ್ವ ಸಂಗೀತ ಒದಗಿಸಿದ್ದಾರೆ . ಕೆಜಿಎಫ್ ಕಿನ್ನಾಳ್ ರಾಜ್, ಕವಿರಾಜ್, ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ನಾಗಾರ್ಜುನ್ ಆರ್.ಡಿ. ಛಾಯಾಗ್ರಹಣ ಮಾಡಿದ್ದಾರೆ. K.R.S ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು