LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

`ಇಂಡಿ' ಒಕ್ಕೂಟಕ್ಕೆ ನಾಯಕರೇ ಇಲ್ಲ: ಆರ್.ಅಶೋಕ

ಬೆಂಗಳೂರು: ಈಚೆಗೆ ನಡೆದ 4 ರಾಜ್ಯಗಳ ಚುನಾವಣಾ ಸೆಮಿಫೈನಲ್‍ನಲ್ಲಿ 3 ರಾಜ್ಯಗಳನ್ನು ನಾವು ದೊಡ್ಡ ಅಂತರದಲ್ಲಿ ಗೆದ್ದಿದ್ದೇವೆ. ಕಾಂಗ್ರೆಸ್ ಸೆಮಿಫೈನಲ್‍ನಲ್ಲಿ ಸೋತು ಸುಣ್ಣವಾಗಿದೆ. ನಾವಂತೂ ಫೈನಲ್‍ಗೆ ತಲುಪಿದ್ದೇವೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ತಿಳಿಸಿದ್ದಾರೆ.

ಹೋಟೆಲ್ ``ಜಿ.ಎಂ. ರಿಜಾಯ್ಸ್'' ನಲ್ಲಿ ಇಂದು ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದ ಉದ್ಘಾಟನೆ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.ವಿಪಕ್ಷಗಳ ಇಂಡಿ ಒಕ್ಕೂಟದ ಜೊತೆಗೆ ಶಸ್ತ್ರಸಜ್ಜಿತರಾಗಿದ್ದ ನಿತೀಶ್ ಕುಮಾರ್ ಅಲ್ಲಿ ಶಸ್ತ್ರತ್ಯಾಗ ಮಾಡಿ ನಮ್ಮ ಜೊತೆ ಬಂದಿದ್ದಾರೆ. `ಇಂಡಿ' ಒಕ್ಕೂಟವು ನಾಯಕತ್ವ ಇಲ್ಲದೆ, ದಿಕ್ಕುಗಾಣದಂತಿದೆ. ಮ್ಯಾಚಿನ ದಿನಾಂಕ ಫಿಕ್ಸ್ ಆಗಿದೆ.

ಆಟಗಾರರೂ ಫಿಕ್ಸ್ ಆಗಿದ್ದಾರೆ. ಸಾರ್ವಜನಿಕರೂ ಫಿಕ್ಸ್ ಆಗಿದ್ದಾರೆ. ನಮ್ಮ ಕ್ಯಾಪ್ಟನ್ ನರೇಂದ್ರ ಮೋದಿಯವರು ಎಂದು ನಿಗದಿಯಾಗಿದೆ. ಅವರ ಕ್ಯಾಪ್ಟನ್ ಇನ್ನೂ ಫಿಕ್ಸ್ ಆಗಿಲ್ಲ ಎಂದು ವಿಶ್ಲೇಷಿಸಿದರು.ಜನರ ಭಾವನೆ, ಜನಮಿಡಿತದೊಂದಿಗೆ ಮೋದಿಯವರು ಗೆಲ್ಲಲಿದ್ದಾರೆ. ನಾಯಕತ್ವ ಘೋಷಣೆ ಆಗುವ ಮೊದಲೇ ಮ್ಯಾಚ್ (ಚುನಾವಣೆ) ನಡೆಯಲಿದ್ದು, ಇಂಡಿ ಒಕ್ಕೂಟ ಸೋತು ಸುಣ್ಣವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲೂ ನಮಗೆ ಒಳ್ಳೆಯ ವಾತಾವರಣ ಇದೆ. 10 ತಿಂಗಳಲ್ಲಿ 10 ತಪ್ಪು, 10 ಭ್ರಷ್ಟಾಚಾರಗಳನ್ನು, ಸಮಾಜದ್ರೋಹಿಯಾದ ಕೆಲಸಗಳನ್ನು ಕಾಂಗ್ರೆಸ್ ಮಾಡಿದೆ ಎಂದರು.ಮಂಡ್ಯದಲ್ಲಿ ಹನುಮಧ್ವಜ ಇಳಿಸಿ ಹಿಂದೂಗಳಿಗೆ ಅನ್ಯಾಯ ಮಾಡಿದ್ದಾರೆ.ಹಿಂದೂ ಕಾರ್ಯಕರ್ತರ ರಾಮಜನ್ಮಭೂಮಿಯ ಕೇಸನ್ನು 24 ವರ್ಷಗಳ ಬಳಿಕ ಕೆದಕಿ ಹಿಂದೂಗಳ ಭಾವನೆಗೆ ಧಕ್ಕೆ ಮಾಡಿದ್ದಾರೆ. ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದು, ಅವರು ಕಾಂಗ್ರೆಸ್ ಕಾರ್ಯಕರ್ತರೆಂದು ಸಾಬೀತಾಗಿದೆ ಎಂದು ತಿಳಿಸಿದರು.

ಚುನಾವಣೆ ಬಂದಾಗ ಪ್ರಚಾರ ಬೇಕೇ ಬೇಕು. ಅದೇರೀತಿ ಸುಳ್ಳು ಸುದ್ದಿಗಳು ಬಂದಾಗ ಅದಕ್ಕೆ ಸ್ಪಷ್ಟನೆ ನೀಡುವುದು ಪಕ್ಷದ ಕರ್ತವ್ಯ. ಇವೆರಡನ್ನು ಒಂದೇ ಜಾಗದಲ್ಲಿ ಮಾಡಲಾಗುವುದು ಎಂದರು. ಬಿಜೆಪಿ ನಿರಂತರವಾಗಿ ಮಾಧ್ಯಮ ಸ್ನೇಹಿಯಾಗಿ ಕೆಲಸ ಮಾಡಿದೆ. ಪ್ರತಿ ಚುನಾವಣಾ ಸಂದರ್ಭದಲ್ಲೂ ಈ ಥರ ಮಾಧ್ಯಮ ಕೇಂದ್ರವನ್ನು ತೆರೆಯಲಾಗುತ್ತಿದೆ. ಇದು ಮಾಧ್ಯಮದವರಿಗೆ ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು