LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ದ್ವಿತೀಯ ಪಿಯುಸಿ ಟಾಪರ್‍ಗೆ ಸನ್ಮಾನ

ಬೆಂಗಳೂರು: ನಗರದ ಆಕಾಶ್ ಶಿಕ್ಷಣ ಸೇವಾ ಸಂಸ್ಥೆಯ ವಿದ್ಯಾರ್ಥಿ ಪ್ರೀತಮ್ ರಾವಳಪ್ಪ ಪನ್ಸುಡಕರ್ ಅವರು ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.99.83 ಅಂಕಗಳನ್ನು ಪಡೆದಿದ್ದಾನೆ.ಐದು ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದು, ಅಂದರೆ 600 ರಲ್ಲಿ 599 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾನೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ ಹಾಗೂ ಸಂಸ್ಕೃತ ವಿಷಯಗಳಲ್ಲಿ ನೂರಕ್ಕೆ ನೂರು ಹಾಗೂ ಇಂಗ್ಲೀಷಿನಲ್ಲಿ 99 ಅಂಕ ಪಡೆದಿದ್ದಾನೆ.

ಪ್ರೀತಮ್ ಅವರ ಈ ಅತ್ಯಮೋಘ ಸಾಧನೆಗೆ ಆಕಾಶ್ ಶಿಕ್ಷಣ ಸಂಸ್ಥೆಯ ಸ್ಥಳೀಯ ನಿರ್ದೇಶಕ ಧೀರಜ್ ಮಿಶ್ರಾ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಪ್ರೀತಮ್ ಬಗ್ಗೆ ಹೆಮ್ಮೆ ಏನಿಸುತ್ತಿದೆ. ಇದು ಆತನ ಪರಿಶ್ರಮಕ್ಕೆ ಸಂದ ಗೆಲುವು. ಈತನ ಶ್ರಮಕ್ಕೆ ಪಾಲಕರ ಪ್ರೋತ್ಸಾಹ ತುಂಬಾ ಇದೆ. ಪ್ರೀತಮ್ ಹಾಗೂ ಇತರ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೂ ಅಭಿನಂದನೆ ಕೋರುತ್ತೇನೆ. ನಿಮ್ಮ ಭವಿಷ್ಯಕ್ಕೂ ಶುಭ ಕೋರುತ್ತೇನೆ ಎಂದರು.

ಪ್ರೌಢ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಐಐಟಿ-ಜೆಇಇ ಕೋಚಿಂಗ್ ಪಡೆಯುವಲ್ಲಿ ಆಕಾಶ್ ಸದಾ ಮುಂದಿದೆ. ಇತ್ತೀಚೆಗೆ ಅಭಿವೃದ್ದಿ ಆಧಾರಿತ ಗಣಕಯಂತ್ರ ತರಬೇತಿ ನೀಡುವತ್ತ ಆಕಾಶ ಸಂಸ್ಥೆ ಚಿತ್ತ ಹರಿಸಿದೆ. ಈ ಮೂಲಕ ಐ-ಟ್ಯೂಟರ್ ವೇದಿಕೆಯು ರೆಕಾರ್ಡ್ ಮಾಡಿದ ವಿಡಿಯೋ ಉಪನ್ಯಾಸ ಒದಗಿಸುತ್ತಿದ್ದು, ಇದು ವಿದ್ಯಾರ್ಥಿಗಳಿಗೆ ಸ್ವಯಂ ಆಗಿ ಕಲಿಕೆಯತ್ತ ಆಸಕ್ತಿ ವಹಿಸಲು ಸಹಾಯ ಮಾಡಿದೆ. ಮೋಕ್ ಟೆಸ್ಟ್ ಕೂಡ ನೈಜ ಪರೀಕ್ಷೆಯನ್ನು ಪರಿಣಾಮಕಾರಿಯಾಗಿ ಆತ್ಮವಿಶ್ವಾಸದಿಂದ ಎದುರಿಸಲು ಸಹಕಾರ ನೀಡುತ್ತಿದೆ.

ನೀಟ್(ಮೆಡಿಕಲ್), ಜೆಇಇ(ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ) ಹಾಗೂ ಎನ್‍ಟಿಎಸ್‍ಇ ಮತ್ತು ಒಲಿಂಪಿಯಾಡ್ ಮುಂತಾದ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಪೂರಕ ಹಾಗೂ ಸತತ ತರಬೇತಿ ಪಡೆಯಲು ಆಕಾಶ್ ಶಿಕ್ಷಣ ಸೇವಾ ಸಂಸ್ಥೆಯು ದೇಶದಲ್ಲೇ ಮುಂಚೂಣಿಯಲ್ಲಿದೆ. ಕಳೆದ 35 ವರ್ಷಗಳಿಂದ ನಾಲ್ಕು ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು, ಆಕಾಶ್ ಶಿಕ್ಷಣ ಸೇವಾ ಸಂಸ್ಥೆಯ ಸುಮಾರು 315 ಕೇಂದ್ರಗಳಲ್ಲಿ ಅಗತ್ಯ ಶಿಕ್ಷಣ ಹಾಗೂ ತರಬೇತಿ ಪಡೆಯುತ್ತಿದ್ದಾರೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಮಾರುಕಟ್ಟೆಯನ್ನು ಹೊಂದಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು