LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಬಾಹುಬಲಿ ಒಂದು ಅದ್ಬುತ ಅನುಭವ - ರಾಜಮೌಳಿ

ಬಾಹುಬಲಿ ಹೊಸ ಅಧ್ಯಾಯದೊಂದಿಗೆ ಅನಿಮೇಟೆಡ್ ಫಾರ್ಮೆಟ್‍ದಲ್ಲಿ ಹೇಳಲು ಯೋಜನೆ ಸಿದ್ದಗೊಂಡಿದೆ ಎಂಬುದು ಸುದ್ದಿಯಾಗಿತ್ತು.ಎ ಗ್ರಾಫಿಕ್ ಇಂಡಿಯಾ ಮತ್ತು ಆರ್ಕ ಮೀಡಿಯಾ ವರ್ಕ್ಸ್ ಪ್ರ ಡಕ್ಷನ್ ಅಡಿಯಲ್ಲಿ ಎಸ್.ಎಸ್.ರಾಜಮೌಳಿ-ಶರದ್‍ದೇವರಾಜನ್ ಕ್ರಿಯೆಟೀವ್ ಮುಖ್ಯಸ್ಥರಾಗಿರುತ್ತಾರೆ.

ಜೀವನ್.ಜೆ.ಕಾಂಗ್-ನವೀನ್ ಜಾನ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಇವರೆಲ್ಲರೂ ನಿರ್ಮಾಣದಲ್ಲಿ ಪಾಲುದಾರರಾಗಿರುತ್ತಾರೆ.ಮೊನ್ನೆ ಹೈದರಬಾದ್‍ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ರಾಜಮೌಳಿ ಮಾತನಾಡಿ, ಬಾಹುಬಲಿ ಫ್ರಾಂಚಸಿಯನ್ನು ಸೃಷ್ಟಿಸಿದ ನಗರ ಹೈದರಬಾದ್. ಅದಕ್ಕಾಗಿ ನನ್ನ ಹೃದಯದಲ್ಲಿ ಈ ಸ್ಥಳವು ವಿಶೇಷ ಸ್ಥಾನವನ್ನು ಹೊಂದಿದೆ. ಇವರೆಲ್ಲರ ಸಹಯೋಗದೊಂದಿಗೆ ಇರುವುದು ಊಹಿಸಲಾಗದ ಅನುಭವ.

ಭಾರತದಲ್ಲಿ ಹಳೆಯ ಕಾಲದ ಅನಿಮೇಷನ್ ಚಿತ್ರ ನಿರ್ಮಾಣಕ್ಕೆ ಅವರ ಉತ್ಸಾಹ ಸಮರ್ಪಣೆಗಳೇ ಸ್ಪೂರ್ತಿಯಾಗಿದೆ. ನಾವು ಬಹುಬಲಿ ಜಗತ್ತನ್ನು ವಿಸ್ತರಿಸುವ ಕಥೆಯನ್ನು ರಚಿಸಿದ್ದೇವೆ. ಮಾಹಿಷ್ಮತಿಯ ಯೋಧರು ತಮ್ಮ ತಾಯ್ನಾಡನ್ನು ಉಳಿಸಲು ಒಂದಾದಾಗ ಸಾಮ್ರಾಜ್ಯಗಳ ನಡುವೆ ಮಹಾ ಘರ್ಷಣೆ ಉಂಟಾಗುವುದನ್ನು ಇದರಲ್ಲಿ ವೀಕ್ಷಿಸಬಹುದು ಎಂದರು.

ಈ ಸಂದರ್ಭದಲ್ಲಿ ಬರಹಗಾರ ಮತ್ತು ನಿರ್ಮಾಪಕ ಶರದ್‍ದೇವರಾಜನ್, ಡಿಸ್ನಿ ಹಾಟ್‍ಸ್ಟಾರ್, ಹೆಚ್‍ಎಸ್‍ಎಂ ಎಂಟರ್‍ಟೈನ್‍ಮೆಂಟ್ ಮುಖ್ಯಸ್ಥ ಗೌರವ್ ಬ್ಯಾನರ್ಜಿ, ನಟ ಹಾಗೂ ಅನಿಮೇಟೆಡ್‍ಗೆ ಧ್ವನಿ ನೀಡಿರುವ ಶರದ್‍ಕೇಳ್ಕರ್ ಉಪಸ್ತಿತರಿದ್ದು, ಒಂದಷ್ಟು ಅನುಭವಗಳನ್ನು ಹಂಚಿಕೊಂಡರು. ಅನಿಮೇಟೆಡ್‍ದಲ್ಲಿ ಸಾಹಸ, ರಾಜಕೀಯ ಅಚ್ಚರಿಗಳು, ನಾಟಕ, ಮೋಸ, ಯುದ್ದ, ಹೀರೋಗಿರಿ, ವಿಶ್ವಾಸ, ಧೈರ್ಯ ಎಲ್ಲ ಅಂಶಗಳು ಸೇರಿಕೊಂಡಿದೆ. ಇಂತಹ ಪವರ್ ಪ್ಯಾಕ್ಡ್ ಆಕ್ಷನ್ ಸೀರೀಸ್ ಕನ್ನಡ ಸೇರಿದಂತೆ, ಎಲ್ಲಾ ಭಾಷೆಗಳಲ್ಲಿ ಮೇ 17ರಿಂದ ಡಿಸ್ನಿ+ಹಾಟ್‍ಸ್ಟಾರ್‍ದಲ್ಲಿ ಸ್ಟ್ರೀಮ್ ಆಗಲು ಸಜ್ಜಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು