LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಬೆಂಗಳೂರು ಜಲ ಮಂಡಳಿಯ ಅತಿರೇಕ...

ಇತ್ತೀಚೆಗೆ ಬೆಂಗಳೂರು ಜಲ ಮಂಡಳಿ ಅಧ್ಯಕ್ಷರು ನೀರಿನ ದುರ್ಬಳಕೆ ತಡೆಯಲು ಒಂದು ಪತ್ರಿಕಾ ಹೇಳಿಕೆಯನ್ನು ನೀಡಿ, ಯಾರು ವಾಹನಗಳನ್ನು ನೀರಿನಲ್ಲಿ ತೊಳೆಯುತ್ತಾರೋ ಅವರಿಗೆ 5000 ದಂಡ ವಿಧಿಸಲಾಗುವುದು ಎಂದು ಘೋಷಿಸಿದ್ದಾರೆ. ಬಹುಶಃ ಅದು ಕಾನೂನು ರೂಪವನ್ನು ಪಡೆದಿರಬಹುದು.....
ಇಲ್ಲಿ ಮುಖ್ಯವಾಗಿ ನಾವು ಚರ್ಚಿಸ ಬೇಕಾಗಿರುವುದು ದಂಡ ಗಳೇ ಎಲ್ಲಕ್ಕೂ ಪರಿಹಾರವಲ್ಲ ಅದೊಂದು ಸುಲಭ ತಂತ್ರಗಾರಿಕೆ ಯಾಗುತ್ತದೆಯಷ್ಟೇ.

ನೀರಿನ ನಿರ್ವಹಣೆಯ ಅಸಮರ್ಪಕತೆ, ನಗರ ಬೆಳವಣಿಗೆಯ ತಡೆಗಟ್ಟುವಿಕೆ, ಎಲ್ಲವನ್ನು ನಿರ್ಲಕ್ಷಿಸಿ ಸಾಮಾನ್ಯ ಜನರಿಗೆ ದಂಡ ಹಾಕುವುದೇ ಒಂದು ಮಹತ್ಕಾರ್ಯ ಎಂದು ನಮ್ಮ ಜನರನ್ನೇ ಶಿಕ್ಷಿಸುವುದು ಅಷ್ಟು ಒಳ್ಳೆಯ ಲಕ್ಷಣವಲ್ಲ....ಶಿಕ್ಷೆಗಿಂತ ಶಿಕ್ಷಣ ಮುಖ್ಯವಾಗಬೇಕು ಎಂಬುದು ನಮ್ಮೆಲ್ಲರ ಆಶಯ ಮತ್ತು ಅದು ಈ ನೆಲಕ್ಕೆ ಹೆಚ್ಚು ಹೊಂದಿಕೆಯಾಗುವ ವಿಷಯ.

ಯಾಕೆಂದರೆ ನಾವು ಒಂದಷ್ಟು ತಪ್ಪು, ಸೋಮಾರಿತನ ಎಲ್ಲ ಇದ್ದರೂ ಕೂಡ ಹೆಚ್ಚು ಸಭ್ಯತೆಯನ್ನು, ಭಯಮನಸ್ಥಿತಿಯನ್ನು ಹೊಂದಿರುವವರು. ಈ ಯುಗಾದಿ - ರಂಜಾನ್ ಹಬ್ಬದ ಸಂದರ್ಭದಲ್ಲಿ ಈ ರೀತಿಯ ಕಾನೂನು ಜನರನ್ನು ಬೆದರಿಸುವಂತಿದೆ. ಅಲ್ಲದೇ 5000 ಒಂದು ದೊಡ್ಡ ಮೊತ್ತ. ಅಲ್ಲದೇ ನೀರನ್ನು ಹೆಚ್ಚು ಖರ್ಚು ಮಾಡಿದ್ದಾರೆ ಎಂದು ನಿರ್ಧರಿಸುವ ಮಾನದಂಡಗಳು ಸಹ ತುಂಬಾ ಕಷ್ಟವಾಗುತ್ತದೆ...

ಎಷ್ಟೋ ಜನರಿಗೆ ಈ ನಿಯಮ ಇನ್ನೂ ತಿಳಿದುಬಂದಿಲ್ಲ. ಜನರು ಸಹ ಅಷ್ಟು ದೊಡ್ಡ ಮೊತ್ತದ ದಂಡವನ್ನು ವಿಧಿಸಿದಾಗ ರೊಚ್ಚಿಗೇಳುವ ಸಾಧ್ಯತೆಯೂ ಇದೆ. ಜಲಮಂಡಳಿಯ ಆತ್ಮೀಯ ಗೆಳೆಯರು ಕರೆ ಮಾಡಿ ಒಂದು ವೇಳೆ ನಾವು ಇಷ್ಟು ದೊಡ್ಡ ಮೊತ್ತವನ್ನು ದಂಡವಾಗಿ ಹಾಕಿದರೆ ಜನ ನಮ್ಮ ಮೇಲೆ ಹಲ್ಲೆ ಮಾಡುವ ಸಾಧ್ಯತೆಗಳಿವೆ. ಈ ಚುನಾವಣಾ ಸಂದರ್ಭದಲ್ಲಿ ಪೊಲೀಸರ ನೆರವುಸಹ ಸರಿಯಾಗಿ ಸಿಗುವುದಿಲ್ಲ. ಆದ್ದರಿಂದ ಇದನ್ನು ಮುಂದೂಡಬೇಕು ಅಥವಾ ಬೇರೆ ರೂಪದಲ್ಲಿ ಜನರಿಗೆ ಎಚ್ಚರಿಸುವ ಕೆಲಸ ಆಗಬೇಕು.

ಇಲ್ಲದಿದ್ದರೆ ಈ ಸರ್ಕಾರಗಳು ಜನರನ್ನು ನಿಯಂತ್ರಿಸಲು ಶಿಕ್ಷೆ - ದಂಡ ಇವುಗಳನ್ನೇ ಅಸ್ತ್ರಗಳನ್ನಾಗಿ ಮಾಡಿಕೊಳ್ಳುತ್ತಾರೆ. ಆದರೆ ಅದೇ ಸಮಯದಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಹೇಳುತ್ತಾ, ಅವರನ್ನು ಶೋಷಿಸುತ್ತಾ, ತಾವು ಮಾತ್ರ ಜನರಿಗೆ ಕೈಮುಗಿದು ನಂತರ ಅವರ ಕಾಲು ಎಳೆಯುತ್ತಾರೆ. ಇದು ಜನರಿಂದಲೇ ಆಯ್ಕೆಯಾಗುವ ಸರ್ಕಾರಗಳ ಧೋರಣೆ.

ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೈಮುಗಿಯುವ ಇವರು ಶಿಕ್ಷಾರ್ಹ ಕಾನೂನು ರೂಪಿಸುವಾಗ ಸ್ವಲ್ಪ ಸಂವೇದನೆ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳದಿದ್ದರೆ ತಪ್ಪಾಗುತ್ತದೆ ಯಲ್ಲವೇ.....ಸ್ವಲ್ಪ ಯೋಚಿಸಿ. ಅದರಿಂದ ನೀರಿನ ಉಳಿತಾಯ ಆಗುವ ಸಾಧ್ಯತೆ ಇರಬಹುದು. ಆದರೆ ಅದನ್ನು ತಡೆಯುವ ವಿಧಾನ ತುಂಬಾ ಕಠಿಣವಾಗುತ್ತದೆ. ನಿಯಮಗಳು ಸಾಧ್ಯವಾದಷ್ಟು ಸರಳವಾಗಿರಲಿ ಎಂಬ ಕಳಕಳಿಯ ಮನವಿ....

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು