LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

"ಹೀಲಿ ಚಂಡಮಾರುತಕ್ಕೆ ಬಾಂಗ್ಲಾದೇಶ ತತ್ತರ; ಆಸೀಸ್‌ಗೆ ೧೦ ವಿಕೆಟ್ ಅಂತರದ ಜಯ"

ಆಂಧ್ರದ ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ, ಆಸೀಸ್ ಮಹಿಳಾ ತಂಡ ಬಾಂಗ್ಲಾದೇಶದ ಮಹಿಳಾ ತಂಡವನ್ನು೧೦ ವಿಕೆಟ್‌ಗಳ ಅಂತರದಿಂದ ಸೋಲಿಸಿತು.
ನಾಯಕಿ ಅಲಿಸಾ ಹೀಲಿ ಅವರು ಈ ಪಂದ್ಯಾವಳಿಯಲ್ಲಿ ತಮ್ಮ ಎರಡನೇ ಶತಕವನ್ನು ದಾಖಲಿಸಿದರು.ಟಾಸ್ ಸೋತು ಮೊದಲು  ಬೌಲಿಂಗ್ ಮಾಡಿದ ಆಸ್ಟ್ರೇಲಿಯಾ, ಬಾಂಗ್ಲಾದೇಶವನ್ನು ೯ ವಿಕೆಟ್‌ಗೆ ೧೯೮ ರನ್‌ಗಳಿಗೆ ಸೀಮಿತಗೊಳಿಸಿತು. ೧೯೯ ರನ್‌ಗಳ ಸುಲಭ ಗುರಿಯನ್ನು ಬೆನ್ನತ್ತಿದ್ದ ಆಸೀಸ್
ಮಹಿಳಾ ಪಡೆ, ನಾಯಕಿ ಅಲಿಸಾ ಹೀಲಿ (೭೭ ಎಸೆತಗಳಲ್ಲಿ ೧೧೩ ರನ್-ನಾಟೌಟ್) ಮತ್ತು ಫೋಬೆ ಲಿಚ್‌ಫೀಲ್ಡ್ (೭೨ ಎಸೆತಗಳಲ್ಲಿ ೮೪ ರನ್-ನಾಟೌಟ್)
ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ೨೪.೫ ಓವರ್‌ಗಳಲ್ಲಿ ೨೦೨ ರನ್ ಗಳಿಸಿ ಸುಲಭವಾಗಿ ಗುರಿಯನ್ನು ತಲುಪಿತು.

ಏಳು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಮಹಿಳಾ ತಂಡ, ಎದುರಾಳಿ ಬಾಂಗ್ಲಾದೇಶವನ್ನು ಸುಲಭವಾಗಿ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಅಲಿಸಾ ಹೀಲಿ ತಮ್ಮ ಇನ್ನಿಂಗ್ಸ್ನಲ್ಲಿ ಒಟ್ಟು ೨೦ ಬೌಂಡರಿಗಳನ್ನು ಬಾರಿಸಿದ್ದು, ಫೋಬೆ ಲಿಚ್‌ಫೀಲ್ಡ್ ಒಟ್ಟು ೧೨ ಬೌಂಡರಿ ಮತ್ತು ಸಿಕ್ಸರ್ ಬಾರಿಸಿ ಗಮನ ಸೆಳೆದರು. ಬಾಂಗ್ಲಾ ದೇಶದ ಪ್ರಮುಖ  ಅಸ್ತ್ರವೆಂದು ಪರಿಗಣಿಸಲಾದ ಸ್ಪಿನ್ ದಾಳಿಯು, ಹೀಲಿ ಮತ್ತು ಲಿಚ್‌ಫೀಲ್ಡ್ ಅವರ ಆಕ್ರಮಣಕಾರಿ ಬ್ಯಾಟಿಂಗ್‌ಗೆ ನಿರುತ್ತರವಾಗಿತ್ತು.

ಇಬ್ಬರೂ ಆಟಗಾರರು ಬಾಂಗ್ಲಾದೇಶದ ಬೌಲರ್‌ಗಳ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದ್ದು, ಈ ಪಂದ್ಯದ ವಿಶೇಷವಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್
ಆಯ್ದುಕೊಂಡ ಬಾಂಗ್ಲಾದೇಶ ತಂಡಕ್ಕೆ, ರುಬಿಯಾ ಹೈದರ್ ಮತ್ತು ಶೋಬಾನಾ ಮೋಸ್ಟಾರಿ ಅವರ ಉತ್ತಮ ಆರಂಭ ದೊರೆಯಿತು. ಮೊಸ್ಟಾರಿ ಅವರು ೮೦
ಎಸೆತಗಳಲ್ಲಿ ೬೬ ರನ್ ಬಾರಿಸಿ ನಾಟೌಟ್ ಆಗಿ ಉಳಿದರು. ಮೊಸ್ಟಾರಿ ಅವರ ೬೬ ರನ್‌ಗಳು ಮಹಿಳಾ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶದ
ಬ್ಯಾಟ್ಸ್ಮನ್ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

ಹೈದರ್ ಮತ್ತು ಮೋಸ್ಟಾರಿ ಅವರ ಅಮೋಘ ಬ್ಯಾಟಿಂಗ್ ಹೊರತಾಗಿಯೂ, ಬಾಂಗ್ಲಾದೇಶ ತಂಡಕ್ಕೆ ಇನ್ನಿಂಗ್ಸ್ ಅಗತ್ಯವಾದ ವೇಗ ಸಿಗಲಿಲ್ಲ. ಹೈದರ್ ಮತ್ತು ಫರ್ಗಾನಾ ಹೋಕ್  ಆರಂಭಿಕ ಜೊತೆಯಾಟದಲ್ಲಿ ಒಂಬತ್ತು ಓವರ್‌ಗಳಲ್ಲಿ ೩೨ ರನ್‌ಗಳನ್ನು ಗಳಿಸಿದ್ದ ಬಾಂಗ್ಲಾದೇಶ, ನಂತರ ರನ್‌ಗಳಿಸಲು ಹರಸಾಹಸಪಡಬೇಕಾಯಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು