LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಬೆಸ್ಟ್ ಗಾರ್ಮೆಂಟ್ ಕನ್ಸ್ಟ್ರಕ್ಷನ್ ಅವಾರ್ಡ್ 2023- ಪ್ರಶಸ್ತಿ ನೀಡಿದ ರಾಜ್ಯಪಾಲರ

ಬೆಂಗಳೂರು: ಉಷಾ ಇಂಟರ್ನ್ಯಾಶನಲ್, ಭಾರತದ ಪ್ರಮುಖ ಹೊಲಿಗೆ ಯಂತ್ರ ಕಂಪನಿಯು ದೇಶದ ಪ್ರಮುಖ ಫ್ಯಾಷನ್ ಸಂಸ್ಥೆ ನಿಪ್ಟ್ - NIFT ಸೇರಿದಂತೆ ದೇಶದ ಪ್ರಮುಖ ಉದಯೋನ್ಮುಖ ಪ್ಯಾಷನ್ ಡಿಸೈನರ್ ಗಳನ್ನು ಗೌರವಿಸುತ್ತಿದೆ.

ಬೆಂಗಳೂರು, ಭುವನೇಶ್ವರ್, ಭೋಪಾಲ್, ಚೆನ್ನೈ, ಗಾಂಧೀನಗರ, ಹೈದ್ರಾಬಾದ್, ಜೋಧ್ ಪುರ್, ಖಾಗ್ರಾ, ಕನ್ನೂರು, ಕೊಲ್ಕತ್ತಾ, ಮುಂಬಯಿ, ನವದೆಹಲಿ, ಪಂಚಕುಲ, ಪಾಟ್ನಾ, ರಾಯ್ ಬರೇಲಿ ಮತ್ತು ಶಿಲ್ಲಾಂಗ್ ಪ್ಯಾಷನ್ಡಿಸೈನರ್‍ಗಳ ಸೃಜನಶೀಲತೆಯನ್ನು ಇದು ಪ್ರೋತ್ಸಾಹಿಸುತ್ತಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉಷಾ ನಿಪ್ಟ್ ಅತ್ಯುತ್ತಮ ಗಾರ್ಮೆಂಟ್ ಕನ್ಸ್ಟ್ರಕ್ಷನ್ ಪ್ರಶಸ್ತಿ -2023 ಅನ್ನು ಬೆಂಗಳೂರಿನ ತತ್ಸತ್ ಗುಪ್ತಾ ಅವರಿಗೆ ಪ್ರದಾನ ಮಾಡಿದರು.

ಸಂಸದ ತೇಜಸ್ವಿ ಸೂರ್ಯ ಮತ್ತಿತರರು ಉಪಸ್ಥಿತರಿದ್ದರು. ಈ ಪ್ರಶಸ್ತಿ ಜನೊಮೆ ಅಲ್ಲೂರೆ ಡಿ.ಎಲ್.ಎಕ್ಸ್ ಹೊಲಿಗೆ ಯಂತ್ರ, ಪ್ರಮಾಣ ಪತ್ರ, 10 ಸಾವಿರ ರೂ. ನಗದು ಬಹುಮಾನವನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು ಉಷಾ ಸಂಸ್ಥೆ 2000 ದಿಂದಲೂ ಪ್ರಾಯೋಜಿಸುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಫ್ಯಾಷನ್ ಹೊಸ ವಿನ್ಯಾಸಗಳ ಸೃಷ್ಟಿಗೆ ಸ್ಫೂರ್ತಿ ನೀಡುವ ಅಭಿವ್ಯಕ್ತಿಯಾಗಿದೆ ಮತ್ತು ಸಂಪ್ರದಾಯಗಳ ಪರಿಸರದಲ್ಲಿ ಕಲೆಗಳ ಸಂಗಮವಾಗಿದೆ. ನಮ್ಮ ಬಟ್ಟೆಗಳು ನಮ್ಮ ಸಂಸ್ಕೃತಿ, ನಮ್ಮ ವ್ಯಕ್ತಿತ್ವದ ಗುರುತು. ಅದರ ಸುಂದರ ನೋಟ ನಮ್ಮ ಸಂಪ್ರದಾಯ, ಸಂಸ್ಕೃತಿಗೆ ಮನ್ನಣೆ ನೀಡಬೇಕೆಂಬುದೇ ನಮ್ಮೆಲ್ಲರ ಪ್ರಯತ್ನವಾಗಬೇಕು.

1986 ರಲ್ಲಿ ಸ್ಥಾಪನೆಯಾದ ಎನ್ ಐಎಫ್ ಟಿ ಪ್ರಸ್ತುತ ದೇಶದಲ್ಲಿ ಫ್ಯಾಷನ್ ಶಿಕ್ಷಣ, ವಿನ್ಯಾಸ, ತಂತ್ರಜ್ಞಾನ ಮತ್ತು ನಿರ್ವಹಣೆಯ ಪ್ರಮುಖ ಸಂಸ್ಥೆಯಾಗಿದ್ದು, ದೇಶಾದ್ಯಂತ ಸಾವಿರಾರು ಬ್ರ್ಯಾಂಡ್ ನಾಯಕರು, ಉದ್ಯಮಿಗಳು ಮತ್ತು ವಿನ್ಯಾಸಕರಿಗೆ ಶ್ರೇಷ್ಠತೆಯನ್ನು ಒದಗಿಸುತ್ತದೆ ಎಂದು ಶ್ಲಾಘಿಸಿದರು.

ವಿದ್ಯಾರ್ಥಿಗಳ ಅಸಾಧಾರಣ ಕ್ರಿಯಾಶೀಲತೆ ಮತ್ತು ಕೌಶಲ್ಯವನ್ನು ಗುರುತಿಸಿ ಪ್ಯಾಷನ್ ಕೈಗಾರಿಕಾ ವಲಯದಲ್ಲಿ ಪ್ರತಿಭೆಗಳನ್ನು ಶೋಧನೆಗೆ ನಿಪ್ಟ್ ನೆರವಾಗುತ್ತಿದ್ದು, ನಿಪ್ಟ್ ನೊಂದಿಗೆ ನಮ್ಮ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಉμÁ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು