LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಅನಾಥ ಮಕ್ಕಳ ಜೀವನದಲ್ಲಿ ಖುಷಿ ಸ್ಥಾಪಿಸುವ ಗುರಿ: ಭಾರ್ಗವ

ಬೆಂಗಳೂರು: ವಿಬ್‍ಗಯಾರ್ ಗ್ರೂಪ್ ಆಫ್ ಸ್ಕೂಲ್ಸ್‍ನ ಆದರ್ಶಪ್ರಾಯ ವಿದ್ಯಾರ್ಥಿ ಭಾರ್ಗವ ಮಲ್ಲುವಝುಲ ಬೆಂಗಳೂರಿನ ಅನಾಥ ಮಕ್ಕಳ ಜೀವನದಲ್ಲಿ ಖುಷಿ ಮತ್ತು ಭರವಸೆಯನ್ನು ತುಂಬಲು ಒಂದು ಮಹತ್ವದ ಪಯಣವನ್ನು ಆರಂಭಿಸಿದ್ದಾರೆ. ಅವರು ಅನಾಥ ಮಕ್ಕಳ ರಕ್ಷಣೆಗಾಗಿ 2023 ಆಗಸ್ಟ್‍ನಲ್ಲಿ ದಿ ಆರೋಗಿ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ.

ಭಾರ್ಗವ ಪ್ರಸ್ತುತ ಬೆಂಗಳೂರಿನ ಹೊರಮಾವಿನಲ್ಲಿರುವ ವಿಬ್‍ಗಯಾರ್ ಹೈಯಲ್ಲಿ 11ನೇ ತರಗತಿಯಲ್ಲಿ ಓದುತ್ತಿದ್ದು, ಅನಾಥ ಮಕ್ಕಳ ಜನ್ಮದಿನವನ್ನು ಆಚರಣೆ ಮಾಡುವುದು ಮತ್ತು ಅವರಿಗೆ ಬೇಕಾಗಿರುವ ಬೆಚ್ಚನೆಯ ಮತ್ತು ಖುಷಿಯ ಭಾವವನ್ನು ಮೂಡಿಸುವ ಗುರಿಯನ್ನು ಹಾಕಿಕೊಂಡು ಆರೋಗಿ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ.

ಆರೋಗಿ ಫೌಂಡೇಶನ್ ಯಶಸ್ವಿಯಾಗಿ 35 ಜನ್ಮದಿನಗಳನ್ನು ಆಚರಿಸಿದೆ. ಬೆಂಗಳೂರಿನಲ್ಲಿ ಕಳೆದ 6 ತಿಂಗಳುಗಳಲ್ಲಿ ವಿವಿಧ ಅನಾಥಾಶ್ರಮಗಳಲ್ಲಿನ 150 ಕ್ಕೂ ಹೆಚ್ಚು ಮಕ್ಕಳ ಮುಖದಲ್ಲಿ ನಗುವನ್ನು ಹೊಮ್ಮಿಸಿದೆ.ಭಾರ್ಗವ್ ಅವರ ಪ್ರಯತ್ನಕ್ಕೆ ವಿಬ್‍ಗಯಾರ್ ಗ್ರೂಪ್ ಆಫ್ ಸ್ಕೂಲ್ಸ್‍ನ ಉಪಾಧ್ಯಕ್ಷ ಕವಿತಾ ಕೆರವಲ್ಲ ಮೆಚ್ಚುಗೆ ಸೂಚಿಸಿದ್ದು, ವಿಬ್‍ಗಯಾರ್ ಗ್ರೂಪ್ ಆಫ್ ಸ್ಕೂಲ್ಸ್‍ನಲ್ಲಿ ನಾವು ನಮ್ಮ ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ ಮತ್ತು ತಾದಾತ್ಮ್ಯದ ಭಾವವನ್ನು ಮೂಡಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ಭಾರ್ಗವ್ ಮಲ್ಲುವಝು, ವಿಬ್‍ಗಯಾರ್ ಗ್ರೂಪ್ ಆಫ್ ಸ್ಕೂಲ್ಸ್ ತಾದಾತ್ಮ್ಯ ಮತ್ತು ಸಮುದಾಯ ಸೇವೆಯ ಪ್ರಾಮುಖ್ಯತೆಯನ್ನು ನನಗೆ ಹೇಳಿಕೊಟ್ಟಿದೆ. ಸಮುದಾಯಕ್ಕೆ ಮರಳಿ ಕೊಡುಗೆ ನೀಡಲು ಮತ್ತು ಅವಕಾಶವಂಚಿತರ ಜೀವನದಲ್ಲಿ ಅರ್ಥವತ್ತಾದ ಬದಲಾವಣೆಯನ್ನು ಮಾಡಲು ಆರೋಗಿ ಫೌಂಡೇಶನ್ ಒಂದು ಅವಕಾಶವಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು