LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಭಾರತದಾದ್ಯಂತ ದೀಪೋತ್ಸವ, 

ಭಾರತದಾದ್ಯಂತ ದೀಪೋತ್ಸವ,

ರಾಮ ರಾಮ ರಾಮೇತಿ,

ರಮೇ ರಾಮೇ ಮನೋರಮೇ |

ಸಹಸ್ರನಾಮ ತತ್ತುಲ್ಯಂ,

ರಾಮನಾಮ ವರಾನನೇ..

ಶಿವನು ಪಾರ್ವತಿಗೆ ಈ ಶ್ಲೋಕವನ್ನು ಉಪದೇಶಿಸಿದನೆಂದು, ಮಾನಸಿಕ ಶಾಂತಿ, ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ಈ ಮಂತ್ರ ಪಠಣೆಯಿಂದ ಪಡೆಯಬಹುದೆಂದು ನಂಬಲಾಗಿದೆ. ಈ ವಿಷಯ ಇಂದ್ಯಾಕೆಯೆAದರೆ, ರಾಮನಾಮದ ಉದ್ಘೋಷ ಅಯೋಧ್ಯೆಯಲ್ಲಿ ಮಾತ್ರವಲ್ಲದೇ, ಇಂದು ಪ್ರಪಂಚದಾದ್ಯAತ ಪ್ರತಿಧ್ವನಿಸುತ್ತಿದೆ”. ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆಯಾಗಿ ಇಂದಿಗೆ ಎರಡು ವರ್ಷಗಳಾದವು. ಕೋಟ್ಟುನುಕೋಟಿ ಜನರು ರಾಮನ ದರ್ಶನವನ್ನು ಪಡೆದು ಪುನೀತರಾಗಿದ್ದಾರೆ.
ರಾಮಮಂದಿರ ನಮ್ಮ ಸಂಪ್ರದಾಯಗಳ ಆಧುನಿಕ ಸಂಕೇತವಾಗಿದ್ದು, ಭಾರತೀಯರು ದೃಢ ಸಂಕಲ್ಪ ಮಾಡಿದರೆ, ಏನನ್ನಾದರೂ ಸಾಧಿಸುತ್ತಾರೆ ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆ ನಮ್ಮ ಅಯೋಧ್ಯೆಯ ರಾಮ ಮಂದಿರ. ಐದುನೂರು ವರುಷಗಳ ವನವಾಸದಿಂದ ರಾಮನನ್ನು ಬಂಧಮುಕ್ತಗೊಳಿಸಿ, ರಾಮಜನ್ಮಭೂಮಿಯಲ್ಲೇ ರಾಮಲಲ್ಲಾನನ್ನು ಮರುಸ್ಥಾಪನೆ ಮಾಡಿದ ಈ ದಿನ ಅವಿಸ್ಮರಣೀಯ. ೧೪೫ ಕೋಟಿ ಭಾರತೀಯರು ರಾಮನ ಪುನರಾಗಮನದ ಸ್ಮರಣಾರ್ಥವಾಗಿ ಇಂದು ತಮ್ಮ ತಮ್ಮ ಮನೆಗಳ ಮುಂದೆ ದೀಪವನ್ನು ಬೆಳಗುವುದರ ಮೂಲಕ ರಾಮನಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಈ ಸಂಭ್ರಮದ ಹಿಂದಿನ ಇತಿಹಾಸವನ್ನು ಕೆದಕಿದಾಗ, ರೋಮಾಂಚಕಾರಿ ಪುಟಗಳು ತೆರೆಯುತ್ತವೆ.
ಭಾರತದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀ ರಾಮ ಜನ್ಮಭೂಮಿಯು ಪವಿತ್ರ ಯಾತ್ರಾಸ್ಥಳ. ಇದು ರಾಮನ ಜನ್ಮಸ್ಥಳವಾಗಿದ್ದು, ರಾಮನನ್ನು ವಿಷ್ಣುವಿನ ಏಳನೇ ಅವತಾರವೆಂದು ಪೂಜಿಸಲಾಗುತ್ತದೆ. ಹಿಂದೂಗಳಲ್ಲಿ ದೇವರ ಅವತಾರವೆಂದು ವ್ಯಾಪಕವಾಗಿ ಪೂಜಿಸಲ್ಪಡುವ ಶ್ರೀರಾಮನು ಅಯೋಧ್ಯೆಯಲ್ಲಿ ಜನಿಸಿದ್ದು. ಪ್ರಾಚೀನ ಭಾರತೀಯ ಮಹಾಕಾವ್ಯವಾದ ರಾಮಾಯಣದಲ್ಲಿ ಇದರ ಉಲ್ಲೇಖವಿದೆ. ೧೫೨೮ ರಲ್ಲಿ ಮೊಘಲರು ರಾಮಮಂದಿರವನ್ನು ಕೆಡವಿ, ಅಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಿದ್ದರು.
ರಾಮಜನ್ಮಭೂಮಿಯ ಸ್ಥಳದ ಬಗೆಗೆ ಅನೇಕ ವಿವಾದಗಳು ನಡೆದವು. ೧೮೫೦ ರ ದಶಕದಲ್ಲಿ ಪುನಃ ಹಿಂಸಾತ್ಮಕ ವಿವಾದ ಉಂಟಾಯಿತು. ೧೯೯೨ ರಲ್ಲಿ ಕರಸೇವಕರ ಗುಂಪು ಬಾಬರಿ ಮಸೀದಿಯನ್ನು ಕೆಡವಿತು. ತನ್ನದೇ ಸ್ಥಳವನ್ನು ಮರು ಪಡೆಯಲು ದಶಕಗಳ ಕಾಲ ನ್ಯಾಯಾಲಯವನ್ನು ಅಲೆದಾಡಿದ ರಾಮಲಲ್ಲಾನಿಗೇ ಕೊನೆಗೂ ಜಯ ಲಭಿಸಿತು. ೨೨ ಜನವರಿ ೨೦೨೪ ರಂದು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ಶಾಸ್ತೊçÃಕ್ತವಾಗಿ ನೆರವೇರಿತು.
ದೇವಾಲಯದ ನಿರ್ಮಾಣದ ಹೊಣೆಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿನವರದ್ದಾಗಿದ್ದರೆ, ದೇವಾಲಯದ ವಿನ್ಯಾಸವನ್ನು ಗುಜರಾತಿನ ಸೋಮಪುರ ಕುಟುಂಬ ಹೊತ್ತಿತು. ರಾಮಮಂದಿರದ ಪ್ರಧಾನ ದೇವರ ಮೂರ್ತಿಯ ಶಿಲೆಯನ್ನು ನಮ್ಮ ರಾಜ್ಯದ ಹೆಚ್.ಡಿ ಕೋಟೆ ತಾಲೂಕಿನ ಜಮೀನೊಂದರಿAದ ಆರಿಸಲಾಗಿತ್ತು. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ರಾಮಂದಿರದ ಶಿಲ್ಪವನ್ನು ಕೆತ್ತಿದ ಪ್ರಧಾನ ಶಿಲ್ಪಿ. ರಾಮಲಲ್ಲಾನ ಉಡುಪನ್ನು ದರ್ಜಿಗಳಾದ ಭಗವತ್ ಪ್ರಸಾದ್ ಮತ್ತು ಶಂಕರ್ ಲಾಲ್ ಇವರುಗಳು ಹೊಲೆದಿದ್ದಾರೆ.
ರಾಮಮಂದಿರ ದೇವಾಲಯವು ೭೬ ಮೀಟರ್ ಅಂದರೆ ೨೫೦ ಅಡಿ ಅಗಲ, ೧೨೦ ಮೀಟರ್ (೩೮೦ ಅಡಿ) ಉದ್ದ ಮತ್ತು ೪೯ ಮೀಟರ್ (೧೬೧ ಅಡಿ) ಎತ್ತರವಿದ್ದು, ವಿಶ್ವದ ಮೂರನೇ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. ಇದನ್ನು ಗುರ್ಜರ ನಾಗರ ವಾಸ್ತುಶೈಲಿಯೊಂದಿಗೆ ಚೌಲುಕ್ಯ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ, ದೇವಾಲಯದ ಮುಖ್ಯ ರಚನೆಯನ್ನು ಮೂರು ಅಂತಸ್ತಿನ ಎತ್ತರದ ವೇದಿಕೆಯ ಮೇಲೆ ನಿರ್ಮಿಸಿದ್ದು . ಇದು ಗರ್ಭಗೃಹದ ಮಧ್ಯದಲ್ಲಿದೆ. ಪ್ರವೇಶ ದ್ವಾರದಲ್ಲಿ ಐದು ಮಂಟಪಗಳನ್ನು ಹೊಂದಿದೆ. ಕಟ್ಟಡವು ಒಟ್ಟು ೩೬೬ ಸ್ತಂಭಗಳನ್ನು ಹೊಂದಿದ್ದು, ಶಿವನ ಅವತಾರಗಳು, ದಶಾವತಾರಗಳು, ಚೌಸತ್ ಯೋಗಿನಿಯರು ಮತ್ತು ಸರಸ್ವತಿ ದೇವಿಯ ೧೨ ಅವತಾರಗಳನ್ನು ಒಳಗೊಂಡAತೆ, ಅಂಕಣಗಳಲ್ಲಿ ತಲಾ ೧೬ ವಿಗ್ರಹಗಳಿವೆ. ಗರ್ಭಗುಡಿಯು ಅಷ್ಟಭುಜಾಕೃತಿಯಾಗಿದ್ದು, ದೇವಾಲಯವನ್ನು ೧೦ ಎಕರೆಗಳಲ್ಲಿ ನಿರ್ಮಿಸಲಾಗಿದೆ.
ಮಂದಿರ ನಿರ್ಮಾಣದಲ್ಲಿ ಎಲ್ಲಿಯೂ ಕಬ್ಬಿಣ ಮತ್ತು ಉಕ್ಕು ಬಳಸಿಲ್ಲ. ದೀರ್ಘ ಬಾಳಿಕೆಯ ಉದ್ದೇಶದಿಂದ ಸಂಪೂರ್ಣ ಕಲ್ಲಿನಿಂದಲೇ ಮಂದಿರ ನಿರ್ಮಿಸಲಾಗಿದೆ. ಕಬ್ಬಿಣದ ಬದಲಿಗೆ ತಾಮ್ರ, ವೈಟ್ ಸಿಮೆಂಟ್, ಮರಗಳನ್ನು ಬಳಸಲಾಗಿದೆ. ಮಂದಿರದ ಭೂಮಿಯಡಿಯಲ್ಲಿ ಟೈಂ ಕ್ಯಾಪ್ಸೂಲ್ ಇದೆ. ಇದು ಆಯೋದ್ಯೆ, ಶ್ರೀರಾಮನ ಇತಿಹಾಸವನ್ನು ಹೊಂದಿದೆ. ಟೈಂ ಕ್ಯಾಪ್ಸೂಲ್ ಅನ್ನು ಸುಮಾರು ಎರಡು ಸಾವಿರ ಅಡಿ ಆಳದಲ್ಲಿ ಹೂತಿಡಲಾಗಿದೆ. ಇದರ ಒಳಗೆ ಇರುವ ಸಂದೇಶವು ಸುಮಾರು ೨ ಸಾವಿರ ವರ್ಷಗಳು ಕಳೆದರೂ ಅಳಿಸಿ ಹೋಗದಂತೆ ಆಸಿಡ್ ಫ್ರೀ ಪುಟಗಳಲ್ಲಿ ಬರೆಯಲಾಗಿದೆ. ಶ್ರೀ ರಾಮ ಮಂದಿರದ ಕಟ್ಟಡದ ಮೇಲ್ಮೆöÊಗೆ ರಾಜಸ್ತಾನದ ಬನ್ಸಿ ಪಹಾರ್ಪುರ್ ಸ್ಯಾಂಡ್ ಸ್ಟೋನ್ ಬಳಸಲಾಗಿದೆ. ಇದು ಗುಲಾಬಿ ಮತ್ತು ಕೆಂಪು ಮಿಶ್ರಿತ ಶಿಲೆ ಆಗಿದ್ದು ಬಲಿಷ್ಟವಾಗಿದೆ.
ಹೀಗೆ ನಿರ್ಮಿತವಾದ ರಾಮ ಮಂದಿರಕ್ಕೆ ಈಗ ಎರಡನೇ ವರ್ಷದ ಸಂಭ್ರಮ. ಈ ಸಂತಸವನ್ನು ಭಾರತೀಯರೆಲ್ಲರು ಮನೆ ಮನದಲ್ಲಿ ದೀಪವನ್ನು ಬೆಳಗುವ ಮೂಲಕ ಆಚರಿಸೋಣ. ಭಾರತದಲ್ಲಿ ಸದಾ ಶಾಂತಿ, ನೆಮ್ಮದಿ ನೆಲೆಸಲಿ, ಸಂಪತ್ತು ಸಮೃದ್ಧಿ ದ್ವಿಗುಣಗೊಂಡು, ಭಾರತವು ವಿಶ್ವಗುರುವಾಗಲಿಯೆಂದು ದೀಪ ಬೆಳಗಿ ಪ್ರಾರ್ಥಿಸೋಣವೇ?
********************
-ಪುಷ್ಪಲತಾ ಹೆಗಡೆ, ಬೆಂಗಳೂರು

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು