LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chitradurga

ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳು ದಲಿತರ ರಕ್ಷಣೆಗೆ ನಿಂತಿವೆ: ದ್ವಾರಕನಾಥ್

ಚಿತ್ರದುರ್ಗ: ಬುದ್ಧನ ಮಾನವೀಯತೆ ಬಸವ ಹಾಗೂ ಅಂಬೇಡ್ಕರ್ ರವರ ಸಮಾನತೆ ಯಿಂದಾಗಿ ದಲಿತರು ಇಲ್ಲಿದ್ದೇವೆ. ಇವರ ವಿಚಾರಧಾರೆಗಳು ದಲಿತರ ರಕ್ಷಣೆಗೆ ನಿಂತಿವೆ. ಎಂದು ಸಿ.ಎಸ್.ದ್ವಾರಕನಾಥ್ ಹೇಳಿದರು.ನಗರದ ವರ ವಲಯದಲ್ಲಿ ಇರುವ ಭೋವಿ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ ಎಸ್ ಜೆ ಎಸ್ ಜ್ಞಾನ ಸಂಭ್ರಮ ಸಮಾರಂಭದಲ್ಲಿ ಭಾಗವಹಿಸಿ.

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು. ಮೊಟ್ಟಮೊದಲ ಬಾರಿಗೆ ಸಹೋದರತೆ, ಸಮಾನತೆ, ಸಹಬಾಳ್ವೆಯನ್ನು ದಾಖಲೆಗಳನ್ನ ಮ್ಯಾಗ್ನಟಿಕ್ ನಿಂದ ನೋಡುತ್ತೇವೆ. ಅದಕ್ಕಿಂತ ಮುಂಚೆ ಬಸವಾದಿ ಶರಣರು ನಮ್ಮಲ್ಲಿ ಪ್ರತಿಪಾದಿಸಿದ್ದಾರೆ.
ಅದನ್ನು ಯಾರೂ ಮರೆಯಲಿ ಕ್ಕಾಗುವುದಿಲ್ಲ ಈ ರೀತಿ ಸಾಮಾಜಿಕ ನ್ಯಾಯದ ಬಗ್ಗೆ ಮೊಟ್ಟಮೊದಲು ಧ್ವನಿಯೆತ್ತಿದ ಬಸವಾದಿ ಶರಣರ ಹಾದಿಯಲ್ಲಿ ಸಿಹಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನಡೆಯುತ್ತಿದ್ದಾರೆ. ಹಾಗಾಗಿ ಬಹಳ ಸಂತೋಷ ಎಂದು ತಿಳಿಸಿದರು.

ಸ್ವಾತಂತ್ರ ಬಂದ ನಂತರ ಸಿಕ್ಕಿದ್ದು ಸಂವಿಧಾನ ನಮ್ಮ ಸಂವಿಧಾನಕ್ಕೂ ಬಸವಣ್ಣನವರು ವಚನಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ನಾನು ಅನೇಕ ಸಲ ಹೇಳುತ್ತಿರುತ್ತೇನೆ. ಸಂವಿಧಾನದ ಪ್ರತಿ ಅನುಚ್ಛೇದಕ್ಕೂ ಬಸವೇಶ್ವರ ಅನೇಕ ವಚನಗಳನ್ನು ಅಡಿ ಟಿಪ್ಪಣಿಗಳಾಗಿ ಕೊಡಬಹುದು ನಾವೆಲ್ಲ ಇಂದು ಕುಳಿತಿದ್ದೇವೆ ಎಂದರೆ ಸಂವಿಧಾನ ಕೊಟ್ಟ ರಕ್ಷಣೆ.ನೀವು ಓದುತ್ತಿದ್ದೀರಿ ಎಂದರೆ ಸಂವಿಧಾನದ ಕೊಡುಗೆ.ನೀವು ಒಳ್ಳೆಯ ಪ್ರಜೆಗಳಾಗಿ ಮೌಲ್ಯಗಳು ಅಳವಡಿಸಿಕೊಳ್ಳಬೇಕು. ಬುದ್ಧ ಬಸವ ಅಂಬೇಡ್ಕರ್ ಮೌಲ್ಯಗಳನ್ನು ನಿಮ್ಮಲ್ಲಿ ಅಳವಡಿಸಿ ಕೊಂಡಾಗ. ದೇಶದ ಉತ್ತಮ ಪ್ರಜೆಗಳಾಗುತ್ತಿರಿ ಎಂದು ಹೇಳಿದರು.

ಬಸವಾದಿ ಶರಣರ ಪರಂಪರೆಯಲ್ಲಿ ಅನ್ನದಾಸೋಹ ಅಕ್ಷರ ದಾಸೋಹ ನಡೆದುಕೊಂಡು ಬಂದಿದೆ.ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ನಾನು ಕೋಲಾರ ಜಿಲ್ಲೆಯಿಂದ ಬಂದವನು ಅಲ್ಲಿ ಮಠ ಪರಂಪರೆ ಕಡಿಮೆ. ಎಲ್ಲೋ ಓದಿದ್ದೇವೆ. ಇಲ್ಲಿಗೆ ಬಂದ ಮೇಲೆ ಅರ್ಥಪೂರ್ಣವಾಗಿದ್ದು.

ಬಸವಾದಿ ಶರಣರು ಹೇಗೆ ಇದ್ದರೂ,ಎಂತಹ ಕಷ್ಟ ಪಟ್ಟರು, ಸಾಮಾಜಿಕ ನ್ಯಾಯ ಉಳಿಸಿಕೊಳ್ಳಲಿಕ್ಕೆ ಓದಿ ತಿಳಿಯಲು ಆರಂಭ ಮಾಡಿದೆ ಎಂದರೆ ಬುದ್ಧ ಬಸವ ಅಂಬೇಡ್ಕರ್ ಅದರಲ್ಲೂ ಅಂಬೇಡ್ಕರ್ ರವರು ಕೊಟ್ಟ ಸಂವಿಧಾನ ಎಂದು ಹೇಳುತ್ತೇನೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.

ವೇದಿಕೆಯಲ್ಲಿ ಭೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮು, ಭೋವಿ ಗುರುಪೀಠದ ಸಿ.ಇ.ಓ ಗೌನಳ್ಳಿ ಗೋವಿಂದಪ್ಪ, ಎಸ್ ಜೆ ಎಸ್ ಸಂಸ್ಥೆಯ ಕಾರ್ಯದರ್ಶಿ ಡಿ.ಸಿ.ಮೋಹನ್, ನಿರ್ದೇಶಕರಾದ ನೇರಲಗುಂಟೆ ರಾಮಪ್ಪ,ಕಾಲಘಟ್ಟ ಹನುಮಂತಪ್ಪ,ಕೆ.ರುದ್ರಪ್ಪ, ತಿಪ್ಪೇಸ್ವಾಮಿ,ಕೃಷ್ಣಮೂರ್ತಿ ಆಂಜನೇಯ,ಜಿಲ್ಲಾ ಬೋವಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು