LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಬುಲ್ಲಿ ಟೈಟಲ್ ಲಾಂಚ್! ಭುವನ್ ನಾಯಕ

"ಬಿಗ್ ಬಾಸ್" ಖ್ಯಾತಿಯ ನಟ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರ "ಬುಲ್ಲಿ" ಸಿನಿಮಾದ ಚಿತ್ರೀಕರಣದ ಮೊದಲನೆಯ ಶೆಡ್ಯೂಲ್ ಮುಕ್ತಾಯ ಗೊಂಡಿದೆ. ಈ ಕಾಮೆಡಿ ಚಿತ್ರದಲ್ಲಿ ಬಹುಭಾಷಾ ತಾರೆ ಹಿರಿಯ ನಟಿ ಊರ್ವಶಿ ಅಭಿನಯಿಸುತ್ತಿದ್ದಾರೆ. ಊರ್ವಶಿ ಅವರ ಮಗಳು ತೇಜ ಊರ್ವಶಿ ನಾಯರ್ ಈ ಚಿತ್ರದ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾಳೆ.ಸಮೃದ್ಧ್ ಸ್ಟುಡಿಯೋಸ್ ಹಾಗು ಭುವನಂ ಎಂಟರ್ಟೆನ್ಮೆಂಟ್ ಲಾಂಛನದಲ್ಲಿ ನಿರ್ಮಿಸಲಾಗುತ್ತಿರುವ ಈ ಚಿತ್ರವನ್ನು ಅನೂಪ್ ಆಂಟೋನಿ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಶ್ರೀ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಹತ್ತು ವರ್ಷದ ನಂತರ ನಾನು ಕನ್ನಡ ಚಿತ್ರ ರಂಗಕ್ಕೆ ಮರಳಿದ್ದೇನೆ. ಹಲವಾರು ಕನ್ನಡ ಸಿನಿಮಾಗಳ ಆಫರ್ ಬಂದರೂ ನನಗೆ ಯಾವುದು ಹಿಡಿಸಿರಲಿಲ್ಲ. ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಬಿಜಿ ಇದ್ದೆ. ಭುವನ್ ಮತ್ತು ಹರ್ಷಿಕಾಪೂಣಚ್ಚ ಚೆನೈಗೆ ಬಂದು ಸಿನಿಮಾದ ಬಗ್ಗೆ ಹಾಗೂ ಅವರ ಐಡಿಯ ಬಗ್ಗೆ ತಿಳಿಸಿದರು.ತುಂಬಾ ಖುಷಿ ಆಯಿತು. ಈಗ ಸಿನಿಮಾ ಮುಗಿಸಿದ ಮೇಲೆ ನಾನೇನಾದರೂ ಈ ಸಿನಿಮಾ ಮಾಡದೇ ಇದ್ದಿದ್ದರೆ ಒಳ್ಳೆಯ ಸಿನಿ ಮಾವನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ.ತುಂಬಾ ಅಚ್ಚುಕಟ್ಟಾಗಿ ಕಾಮೆಡಿ ಸಿನಿಮಾವನ್ನು ಈ ತಂಡ ಮಾಡುತ್ತಿದೆ. ಭುವನ್ ಜೊತೆ ನಟನೆ ಮಾಡಿ ತುಂಬಾ ಖುಷಿ ಆಯಿತು. ಅವರು ಮುಂದಿನ ದಿನಗಳಲ್ಲಿ ಒಬ್ಬ ಅಧ್ಬುತ ನಾಯಕ ನಟನಾಗಿ ನಿಮ್ಮ ಮುಂದೆ ಬರುತ್ತಾರೆ. ನಂಬರ್ 1 ಆಗುವ ಎಲ್ಲಾ ಲಕ್ಷಣಗಳು ಅವರ ಪ್ರತಿಭೆ ಯಲ್ಲಿದೆ. ನನಗೂ ಕನ್ನಡ ಚಿತ್ರರಂಗಕ್ಕೂ ಅವಿನಾಭಾವ ಸಂಬಂಧ. "ರಾಮ ಶ್ಯಾಮ ಭಾಮ" ಚಿತ್ರದ ನಂತರ ನಾನು ನಟಿಸುತ್ತಿರುವ ಕನ್ನಡ ಚಿತ್ರವಿ ದು. ಕನ್ನಡ ಚಿತ್ರದಿಂದಲೇ ನನ್ನ ಮಗಳ ಸಿನಿ ಮಾಯಾನ ಅರಂಭವಾಗುತ್ತಿರುವುದು ಬಹಳ ಖುಷಿಯಾಗಿದೆ ಅಂದರು ಹಿರಿಯ ನಟಿ ಊರ್ವಶಿ.700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪಂಚಭಾಷಾ ನಟಿ ಊರ್ವಶಿ ಜೊತೆಗೆ ನಟಿಸುವುದು ನನ್ನ ಬಹು ದಿನಗಳ ಆಸೆ. ಅದನ್ನು ನಾನು ಹರ್ಷಿಕಾ ಅವರತ್ತಿರವೂ ಹೇಳಿದ್ದೆ. ಈಗ ಆ ಆಸೆ ಈಡೇರಿದೆ. ಊರ್ವಶಿ ಅವರಿಂದ ತುಂಬಾ ಕಲಿತಿದ್ದೇನೆ. ಇನ್ನೂ, ಈ ಚಿತ್ರದ ಕಥೆ ಅನೂಪ್ ಅವರು ಹೇಳಿದಾಗ ಬಹಳ ಇಷ್ಟವಾಯಿತು. ನಮ್ಮ ಕಷ್ಟದ ಸಮಯದಲ್ಲಿ ಸದಾ ನಮ್ಮ ಜೊತೆಗಿರುವ ಅರವಿಂದ್ ವೆಂಕಟೇಶ್ ರೆಡ್ಡಿ ಅವರ ಮೂಲಕ ನಿರ್ಮಾಪಕ ನವೀನ್ ಅವರ ಪರಿಚಯವಾಯಿತು. ಅವರು ಈ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾದರು. ಆಕರ್ಶ್ ಹಾಗೂ ಹರ್ಷಿಕಾ ಪೂಣಚ್ಛ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಗುರು ಪ್ರಸಾದ್ ನರ್ನಾಡ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇದೊಂದು ಡಾರ್ಕ್ ಕಾಮಿಡಿ ಜಾನರ್ ನ ಚಿತ್ರ. ಇದರಲ್ಲಿ ಯಾವುದೇ ಸಂದೇಶ ನೀಡಲು ಹೊರಟಿಲ್ಲ. ಚಿತ್ರದಲ್ಲಿ ಮನೋರಂಜನೆಯ ಪ್ರಧಾನ. ಎಲ್ಲಿಯ ವರೆಗು ಯಾವುದೇ ಸಿನಿಮಾದಲ್ಲಿ ಬಾರದ ತಾಯಿ - ಮಗನ ಒಂದು ಅಪರೂಪದ ಬಾಂಧವ್ಯವನ್ನು ಸಾರುವ ಕಥೆಯೂ ಹೌದು. ನಾನು ಈ ಚಿತ್ರದಲ್ಲಿ ಮಧ್ಯಮ ಕುಟುಂಬದ ಜೆನ್ ಝೀ ಉಇಓ Z ಹುಡುಗ. ಯಾವುದಕ್ಕೂ ತಲೆ ಕೆಡಸಿಕೊಳ್ಳದೆ, ಯಾವುದೇ ಗುರಿಯಿಲ್ಲದೆ ತನ್ನಷ್ಟಕ್ಕೆ ತಾನು ಜೀವನ ನಡೆಸುವ ಹುಡುಗ ಕೂಡ. ನನ್ನ ಪಾತ್ರದ ಹೆಸರು ಬಲರಾಮ. ಸ್ನೇಹಿತರೆಲ್ಲಾ "ಬುಲ್ಲಿ" ಎಂದು ಕರೆಯುತ್ತಿರುತ್ತಾರೆ. ಹಾಗಾಗಿ ಚಿತ್ರಕ್ಕೆ "ಬುಲ್ಲಿ" ಎಂದು ಹೆಸರಿಟ್ಟಿದ್ದೇವೆ. ಚಿತ್ರದ ಚಿತ್ರೀಕರಣ ಇನ್ನೂ ಮುಕ್ತಾಯವಾಗಿಲ್ಲ. ಒಂದು ಹಂತದ ಚಿತ್ರೀಕರಣ ಮಾತ್ರ ಮುಕ್ತಾಯವಾಗಿದೆ. ಮೊದಲ ಹಂತದ ಚಿತ್ರೀಕರಣದಲ್ಲಿ ಊರ್ವಶಿ ಅವರ ಅಭಿನಯದ ಭಾಗದ ಚಿತ್ರೀಕರಣ ಪೂರ್ಣವಾಗಿದೆ ಎಂದರು ನಾಯಕ ಭುವನ್ ಪೊನ್ನಣ್ಣ. ಈ ಚಿತ್ರದಲ್ಲಿ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿದ್ದಾರೆ. "ರಾಮ ಶ್ಯಾಮ ಭಾಮ" ಚಿತ್ರದ ನಂತರ ಹಿರಿಯ ನಟಿ ಊರ್ವಶಿ ಅವರು ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ. ಅಚ್ಯುತ ಕುಮಾರ್, ಓಂಪ್ರಕಾಶ್ ರಾವ್, ಪ್ರಕಾಶ್ ತುಮಿನಾಡು, ಹುಲಿ ಕಾರ್ತಿಕ್, ಆರ್ಯ ಸಂತೋಷ್ ಮುಂತಾದವರು ತಾರಾ ಬಳಗದ ಲ್ಲಿದ್ದಾರೆ. ಇದೊಂದು ಡಾರ್ಕ್ ಕಾಮಿಡಿ ಜಾನರ್ ಚಿತ್ರ. ತಾಯಿ - ಮಗನ ವಿಶೇಷ ಬಾಂಧವ್ಯದ ಕಥೆಯ ಚಿತ್ರವೂ ಹೌದು ಎಂದು ನಿರ್ದೇಶಕ ಅನೂಪ್ ಆಂಟೋನಿ ತಿಳಿಸಿದರು.ವೃತ್ತಿಯಿಂದ ನಾನು ನಿರ್ದೇಶಕ. ಆದರೆ ನಟನಾಗೂ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಭುವನ್ ಹಾಗು ಹರ್ಷಿಕಾ ಪೂಣಚ್ಛ ಅವರು ಈ ಚಿತ್ರದಲ್ಲಿ ನಾನೇ ನಟಿಸಬೇಕೆಂದರು. ನಾನು ಊರ್ವಶಿ ಅವರ ದೊಡ್ಡ ಅಭಿಮಾನಿ. ಅವರ ಜೊತೆಗೆ ನಟಿಸಿರುವುದು ಖುಷಿಯಾಗಿದೆ , ನನ್ನ ನಟನ ಜೀವದಲ್ಲಿ ನನಗೆ ನಟನಾಗಿ ತುಂಬಾ ತೃಪ್ತಿ ಕೊಟ್ಟ ಸಿನಿಮಾ ಇದು . ತುಂಬಾ ಎಂಜಾಯ್ ಮಾಡಿಕೊಂಡು ನಟಿಸಿದ್ದೇನೆ, ವೀಕ್ಷಕರಿಗೆ ತುಂಬಾನೆ ಇಷ್ಟವಾಗುತ್ತೆ ಎಂದರು ಓಂಪ್ರಕಾಶ್ ರಾವ್.ಅರವಿಂದ್ ವೆಂಕಟೇಶ್ ರೆಡ್ಡಿ ಅವರು ಈ ಚಿತ್ರ ಪ್ರಾರಂಭವಾಗಲು ಪ್ರಮುಖ ಕಾರಣ. ಕಥೆ ಚೆನ್ನಾಗಿದೆ. ಇಡೀ ತಂಡದ ಸಹಕಾರದಿಂದ ಒಂದೊಳ್ಳೆ ಚಿತ್ರ ನಿಮ್ಮ ಮುಂದೆ ಬರಲಿದೆ ಎಂದು ನಿರ್ಮಾಪಕ ನವೀನ್ ತಿಳಿಸಿದರು .ಚಿತ್ರತಂಡದವರನ್ನು ಪರಿಚಯಿಸಿ ಮಾತನಾಡಿದ ಕಾರ್ಯಕಾರಿ ನಿರ್ಮಾಪಕಿ ಹರ್ಷಿಕಾ ಪೂಣಚ್ಛ, ನಟಿ ಊರ್ವಶಿ ಅವರು ಬಹಳ ವರ್ಷಗಳ ನಂತರ ನಮ್ಮ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿಯಾದರೆ, ಅವರ ಪುತ್ರಿ ತೇಜ ಅವರಿಗೆ ಬೇರೆ ಬೇರೆ ಭಾಷೆಗಳಿಂದ ಅವಕಾಶ ಬಂದರೂ ಈ(ಕನ್ನಡ) ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಲು ಒಪ್ಪಿಕೊಂಡದ್ದು ಬಹಳ ಖುಷಿಯಾಗಿದೆ ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು