LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Kolar

ನಾಳೆ ಕೇಂದ್ರ ಪುರಸ್ಕೃತ ಉಲ್ಲಾಸ್ ನವಭಾರತ ಸಾಕ್ಷರತಾ ಕಾರ್ಯಕ್ರಮ

ಕೋಲಾರ: 2025-26ನೆ ಸಾಲಿಗೆ ಕೇಂದ್ರ ಪುರಸ್ಕೃತ ಉಲ್ಲಾಸ್ ನವಭಾರತ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ 10700 ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಗುರಿ ನೀಡಲಾಗಿದ್ದು, 2011ರ ಜನಗಣತಿಯಂತೆ 74.39 ಇದ್ದ ಜಿಲ್ಲೆಯ ಸಾಕ್ಷರತಾ ಪ್ರಮಾಣ ಇದೀಗ ವಿವಿಧ ಸಾಕ್ಷರತಾ ಕಾರ್ಯಕ್ರಮಗಳಿಂದ ಶೇ.84 ಕ್ಕೆ ಹೆಚ್ಚಳವಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವೀಣ್ ಪಿ. ಬಾಗೇವಾಡಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಏ.5ರ ಸಾಕ್ಷರತಾ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ 2025-26ನೆ ಸಾಲಿಗೆ ಕೇಂದ್ರ ಪುರಸ್ಕೃತ ಉಲ್ಲಾಸ್ ನವಭಾರತ ಸಾಕ್ಷರತಾ ಕಾರ್ಯಕ್ರಮದ ಕರಪತ್ರಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
2025ರ ಸಾಕ್ಷರತಾಧ್ಯೇಯವಾಕ್ಯ `ಡಿಜಿಟಲ್ ಯುಗದಲ್ಲಿ ಸಾಕ್ಷರತೆಯನ್ನು ಉತ್ತೇಜಿಸುವುದು' ಆಗಿದ್ದು, ಸಾಕ್ಷರತೆಯ ಪ್ರಮಾಣ ಹೆಚ್ಚಿಸಲು ಕರಪತ್ರ, ಸಭೆ ಸಮಾರಂಭ, ಭಾಷಣ, ವಿಚಾರ ಸಂಕೀರ್ಣ ಪ್ರಚಾರ, ಸಪ್ತಾಹ, ಮಾಸಾಚಾರಣೆ, ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಾಕ್ಷರತೆಯ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಲು ತಿಳಿಸಿದರು.
ಈ ಸಮಯದಲ್ಲಿ 2025-26ನೆ ಸಾಲಿಗೆ ಕೇಂದ್ರ ಪುರಸ್ಕೃತ ಉಲ್ಲಾಸ್ ನವಭಾರತ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ 10700 ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಗುರಿ ನೀಡಲಾಗಿದೆ, ಅನಕ್ಷರಸ್ಥರ ಜೀವನ ವಿಧಾನ ಮತ್ತು ವೃತ್ತಿಯನ್ನು ಆಧಾರವಾಗಿಟ್ಟುಕೊಂಡು ಸಾಕ್ಷರತಾ ಯೋಜನೆಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.
ಆ ಮೂಲಕ ಅವರಿಗೆ ವಿಜ್ಞಾನ ಮತ್ತು ವೃತ್ತಿಕೌಶಲ್ಯಗಳನ್ನು ಉತ್ಕೃಷ್ಟಗೊಳಿಸುವ ವಿಚಾರಗಳನ್ನು ತಿಳಿಸಬೇಕು, ಎಂಬ ಅಭಿಪ್ರಾಯ ಸಭೆಯಲ್ಲಿ ಮೂಡಿ ಬಂತು. ಈ ರೀತಿಯ ಸಾಕ್ಷರತೆಯಿಂದ ಹಿಂದುಳಿದ ಅನಕ್ಷರಸ್ಥ ಸಮುದಾಯದ ಹಾಗೂ ಸಾಮಾಜಿಕ ಸ್ಥಿತಿಯು ಸುಧಾರಣೆಯಾಗುವುದು. ಇದರಿಂದ ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ತೊಡೆದು ಹಾಕಬಹುದೆೆಂಬ ಆಶಾವಾದ ಮೂಡಿದೆ ಎಂದರು.
2011ರ ಜನಗಣತಿಯಂತೆ 74.39 ಜಿಲ್ಲೆಯ ಸಾಕ್ಷರತಾ ಪ್ರಮಾಣವಿದ್ದು 2011ರಿಂದ ಇದು ವರೆವಿಗೂ ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನಗೊಳಿಸಿದ ವಿವಿದ ಸಾಕ್ಷರತಾ ಕಾರ್ಯಕ್ರಮಗಳಿಂದ 84ಕ್ಕೆ ಸಾಕ್ಷರತಾ ಪ್ರಮಾಣ ಹೆಚ್ಚಳವಾಗಿರುತ್ತದೆ. ಜಿಲ್ಲೆಯಲ್ಲಿ ಶೇ.100 ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಕರೆ ನೀಡಿದರು.
ಶಿಕ್ಷಣ ಅಕ್ಷರ ಕಲಿಕೆಯ ಜತೆಗೆ ಬದುಕು ರೂಪಿಸಿಕೊಳ್ಳಲು ದಾರಿ ತೋರುವಂತಿರಬೇಕು ಎಂದ ಅವರು, ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿ ಅನಕ್ಷರಸ್ಥರಾಗಿರಬಾರದು, ಈ ರೀತಿಯಲ್ಲಿ ಕಾರ್ಯಯೋಜನೆ ರೂಪಿಸಿ, ಶೇ.100 ಸಾಕ್ಷರತೆ ಸಾಧನೆಗೆ ಇಲಾಖೆ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.
6 ಸಾವಿರ ಮಂದಿ ಅನಕ್ಷರಸ್ಥರಿಗೆ ಪರೀಕ್ಷೆ: ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕೆ.ಉಮಾ ಅವರು ಸಭೆಗೆ ಮಾಹಿತಿ ನೀಡಿ, 2025-26 ನೇ ಸಾಲಿನಲ್ಲಿ ಜಿಲ್ಲೆಯ ಅತ್ಯಂತ ಕಡಿಮೆ ಸಾಕ್ಷರತೆ ಹೊಂದಿರುವ 32 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು ಲಿಂಕ್ ಡಾಕ್ಯುಮೆಂಟ್ ಅನುದಾನದಡಿಯಲ್ಲಿ 6000 ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಗುರಿಯೊಂದಿಗೆ ಮೂಲ ಸಾಕ್ಷರತಾ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗಿದೆ.
ಏ.5 ರಂದು ನಡೆಯುವ ಮೌಲ್ಯಮಾಪನ ಪರೀಕ್ಷೆಯಲ್ಲಿ 6000 ಕಲಿಕಾರ್ಥಿಗಳು ನವ ಸಾಕ್ಷರಾಗುತ್ತಾರೆ. ಎಂದ ಅವರು, 2025-26ನೇ ಸಾಲಿನ ಜಿಲ್ಲೆಯ ಲಿಂಕ್ ಡಾಕ್ಯೂಮೆಂಟ್ ಅನುದಾನದಡಿಯಲ್ಲಿ ಸಾಕ್ಷರತಾ ಕಾರ್ಯಕ್ರಮಕ್ಕೆ ಜಿಲ್ಲೆಯ 6 ತಾಲ್ಲೂಕುಗಳ ಆಯ್ದ 32 ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 6000 ಅನಕ್ಷರಸ್ಥರಿಗೆ 189 ಪರೀಕ್ಷಾ ಕೇಂದ್ರಗಳುಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳು ಪರೀಕ್ಷೆ ಕೇಂದ್ರದ ಉಸ್ತುವಾರಿ ವಹಿಸಿದ್ದು, ಏ.5ರ ಮೌಲ್ಯಮಾಪನ ಮೇಲ್ವಿಚಾರಣೆಯಲ್ಲಿ 03 ಅವಧಿಗಳಲ್ಲಿಪರೀಕ್ಷೆ ನಡೆಯುತ್ತದೆ ಎಂದರು.
ತಾಲ್ಲೂಕುವಾರು ನೋಂದಣಿ ವಿವರ:
ಬಂಗಾರಪೇಟೆ ತಾಲ್ಲೂಕಿನ 4 ಗ್ರಾ.ಪಂಗಳ 26 ಪರೀಕ್ಷಾ ಕೇಂದ್ರಗಳಲ್ಲಿ 1 ಸಾವಿರ ಕಲಿಕಾರ್ಥಿಗಳು,ಕೆಜಿಎಫ್ ತಾಲ್ಲೂಕಿನಲ್ಲಿ 3 ಗ್ರಾ.ಪಂಗಳ 5 ಪರೀಕ್ಷಾ ಕೇಂದ್ರಗಳಲ್ಲಿ 250 ಕಲಿಕಾರ್ಥಿಗಳು, ಕೋಲಾರ ತಾಲ್ಲೂಕಿನ 13 ಗ್ರಾ.ಪಂಗಳಲ್ಲಿ 74 ಪರೀಕ್ಷಾ ಕೇಂದ್ರಗಳಲ್ಲಿ 1750 ಕಲಿಕಾರ್ಥಿಗಳು, ಮಾಲೂರು ತಾಲ್ಲೂಕಿನ 4 ಗ್ರಾ.ಪಂಗಳಿAದ 35 ಕೇಂದ್ರಗಳಲ್ಲಿ 1ಸಾವಿರ ಮಂದಿ, ಮುಳಬಾಗಿಲು ತಾಲ್ಲೂಕಿನ 6 ಗ್ರಾ.ಪಂಗಳಲ್ಲಿ 46 ಪರೀಕ್ಷಾ ಕೇಂದ್ರಗಳಲ್ಲಿ 1750 ಮಂದಿ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 2 ಗ್ರಾ.ಪಂಗಳಿAದ 3 ಪರೀಕ್ಷಾ ಕೇಂದ್ರಗಳಲ್ಲಿ 250 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಹಿರಿಯ ಉಪನ್ಯಾಸಕ ನಾಗರಾಜ್, ಬಿಆರ್‌ಸಿ ರಶ್ಮಿ, ಜಿಲ್ಲೆಯ ಆರು ತಾಲ್ಲೂಕುಗಳ ಬಿಆರ್‌ಸಿ ಸಮನ್ವಯಾಧಿಕಾರಿಗಳಾದ ರಾಧಮ್ಮ, ಸೋಮೇಶ್, ರಮೇಶ್, ತಾಲ್ಲೂಕುಗಳ ಸಾಕ್ಷರತಾ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು