LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಮದ್ವೆಗೆ 60 ಲಕ್ಷ ಖರ್ಚು ಮಾಡಿ ತಪ್ಪು ಮಾಡಿದೆ: ಚಂದನ್ ಶೆಟ್ಟಿ ...

ಒಮ್ಮೊಮ್ಮೆ ಎಲ್ಲರ ಕಣ್ಣಿಗೆ ಕಾಮಿಡಿ ಪೀಸುಗಳಂತೆ ಕಾಣುತ್ತಿದ್ದವರು. ನೋಡ ನೋಡುತ್ತಿದ್ದಂತೇ ಹೇಳಿಮಾಡಿಸಿದಂತಾ ಬದುಕನ್ನು ರೂಪಿಸಿಕೊಂಡು, ಲೇವಡಿ ಮಾಡೋರ ಮುಂದೆ ಗೆದ್ದು ಬೀಗುತ್ತಾರೆ. ಇನ್ನೂ ಕೆಲವೊಮ್ಮೆ ತುಂಬಾನೇ ಇಷ್ಟ ಪಟ್ಟು ಮದುವೆಯಾದವರು, ಒಬ್ಬರನ್ನು ಬಿಟ್ಟು ಒಬ್ಬರು ಉಸಿರಾಡಲೂ ಸಾಧ್ಯವಿಲ್ಲ ಅಂದುಕೊಂಡವರು, ವಿರೋಧಗಳನ್ನು ಧಿಕ್ಕರಿಸಿ ಮದುವೆಯಾದವರು, ಜೊತೆಗೂಡಿದ ಕೆಲವೇ ದಿನಗಳಲ್ಲಿ ದೂರವಾಗುತ್ತಾರೆ. ಇದಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅತ್ಯುತ್ತಮ ಉದಾಹರಣೆ.

ಮನ:ಪೂರ್ವಕವಾಗಿ ಮದುವೆಯಾಗಿ ಮನ:ಪೂರ್ವಕವಾಗಿಯೇ ದೂರವಾದ ಇಬ್ಬರು ಈಗ ತಮ್ಮ ತಮ್ಮ ಬದುಕಿನ ಸಂತೆಯಲ್ಲಿ ನೆಮ್ಮದಿ ಹುಡುಕುತ್ತಿದ್ದಾರೆ. ವಿಚ್ಚೇದನದ ನಂತರ ನಿವೇದಿತಾ ಗೌಡ ರೀಲ್ಸು ಪಾಲ್ಸು ಎಂದು ಮತ್ತೆ ಬ್ಯುಸಿಯಾದರೆ, ಚಂದನ್ ಶೆಟ್ಟಿ ಸಂಗೀತ-ಸಾಹಿತ್ಯ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಇದರ ನಡುವೆ ಸಮಯ ಬಿಡುವು ಮಾಡಿಕೊಂಡು ತಮ್ಮ ವ್ಯೆಯಕ್ತಿಕ ಬದುಕಿನ ಏರಿಳಿತದ ಬಗ್ಗೆ ಮಾತನಾಡಿದ್ದಾರೆ. ಪಶ್ಚಾತಾಪದ ಮಾತುಗಳನ್ನೂ ಆಡಿದ್ದಾರೆ.
ಹೌದು, ರ್ಯಾಪಿಡ್ ರಶ್ಮಿ ಎದುರು ಕುಳಿತು ತಮ್ಮ ಬದುಕಿನ ಪುಟಗಳನ್ನು ಮೆಲುಕು ಹಾಕಿರುವ ಚಂದನ್ ಶೆಟ್ಟಿ, ಒಂದು ಹಾಡು ಕೇವಲ ಒಬ್ಬನಿಂದ ಮಾತ್ರ ಗೆಲ್ಲಲ್ಲ. ಅದರ ಹಿಂದೆ ಹಲವರ ಶ್ರಮ ಇರುತ್ತೆ ಎಂದಿದ್ದಾರೆ.

ಅಹಂಕಾರ ನನಗೆ ಇಲ್ಲ ಎಂದು ಹೇಳಿದ್ದಾರೆ. ಇನ್ನೂ.. ಚಂದನ್ ಶೆಟ್ಟಿ ಬದುಕು ಬದಲಾಗಿದ್ದು 2015ರ ಆಚೀಚೆ. ಆಗ ಸಂಗೀತ ಪ್ರಿಯರ ಬಾಯಲ್ಲಿ ಇವರ ಹಾಡು ನಲಿಯುತ್ತಿತ್ತು. ಇವರ ಹೆಸರಿಗೆ ಚಿನ್ನದ ಬೆಲೆ ಬಂದಿತ್ತು. ಸಹಜವಾಗಿ ಹಣದ ಮಳೆ ಕೂಡ ಆಗ್ತಿತ್ತು. ಜೀವನ ಶೈಲಿ ಬದಲಾದಂತೆ ಖರ್ಚು-ವೆಚ್ಚ ಕೂಡ ಹೆಚ್ಚಾಗಿತ್ತು. ಇದಕ್ಕೆ ಒಂದು ಉದಾಹರಣೆ ಎಂಬಂತೆ ಗೆಜೆಟ್‍ಗಳನ್ನು ವಿಪರೀತ ಖರೀದಿ ಮಾಡಲು ಚಂದನ್ ಶೆಟ್ಟಿ ಶುರು ಮಾಡಿದ್ದರು. ನಿವೇದಿತಾ ಗೌಡ ಜೊತೆ ಮದ್ವೆ ಕೂಡ ಆದರು. ಇವರ ಮದ್ವೆಯಲ್ಲಿ ಅದ್ಧೂರಿತನ ಎಷ್ಟರ ಮಟ್ಟಿಗೆ ಹಾಸು ಹೊಕ್ಕಿತ್ತು ಅಂದರೆ ಮದುವೆಗೆ ಐವತ್ತರಿಂದ ಅರವತ್ತು ಲಕ್ಷ ರೂಪಾಯಿ ಖರ್ಚು ಆಗಿತ್ತು. ಖುದ್ದು ಚಂದನ್ ಶೆಟ್ಟಿ ಸಂದರ್ಶನದಲ್ಲಿ ಮದ್ವೆಯ ಖರ್ಚು-ವೆಚ್ಚದ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು