LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ನಾರ್ತ್ ಇಂಡಿಯಾ ಹುಡುಗರ ರೆಸ್ಟೋರೆಂಟ್ ಕನಸಿನ ಸುತ್ತ `ಚಿಲ್ಲಿ ಚಿಕನ್'

ರಿಲೀಸ್ ಆಯ್ತು ನೈಜ ಘಟನೆ ಆಧಾರಿತ ಈ ಚಿತ್ರದ ಟೀಸರ್ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾ 'ಚಿಲ್ಲಿ ಚಿಕನ್'. ಉತ್ತರ ಭಾರತದ ವಿವಿಧ ರಾಜ್ಯಗಳಿಂದ ದುಡಿಯಲು ಬೆಂಗಳೂರಿಗೆ ಬಂದ ಹುಡುಗರ ಕಥೆ ಇದು. ಹೌದು ಹೊಟೇಲ್ ಒಂದರಲ್ಲಿ ಕೆಲಸ ಮಾಡಿಕೊಂಡು ತಾವೇ ಹೊಸದಾಗಿ ಚೈನೀಸ್ ರೆಸ್ಟೋರೆಂಟ್ ಪ್ರಾರಂಭಿಸಲು ಮುಂದಾದಾಗ ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಾರೆ? ಆ ಎಲ್ಲ ತೊಂದರೆಗಳಿಂದ ಪಾರಾಗಿ ಗೆಲ್ಲುತ್ತಾರಾ! ಎಂಬುದು ಸಿನಿಮಾದ ಕಥಾ ಹಂದರ.

ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸಿನಿಮಾಗಳು ಸೌಂಡ್ ಮಾಡುತ್ತಿವೆ. ಅದರಂತೆ ಈ ಚಿತ್ರಕ್ಕಾಗಿ ಬೇರೆ ಬೇರೆ ರಾಜ್ಯಗಳ ಸಿನಿಮಾ ಪ್ರಿಯರು ಒಂದಾಗಿರುವುದು ವಿಶೇಷ. ಚಿತ್ರದ ನಿರ್ದೇಕರು ಕೇರಳ ಮೂಲದವರು. ನಿರ್ಮಾಪಕರು ಗುಜರಾತ್ ಹಾಗೂ ಕಲಾವಿದರು ಮಣಿಪುರ, ಮೇಘಾಲಯ, ಚೆನ್ನೈ ಹೀಗೆ ವಿವಿಧ ರಾಜ್ಯಗಳಿಂದ ಬಂದವರಾಗಿದ್ದಾರೆ.

ಟೀಸರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ದೀಪ್ ಭೀಮಾಜಿಹಾನಿ 'ನಾವು ಈ ಚಿತ್ರವನ್ನು ಕನ್ನಡದಲ್ಲಿ ಮಾತ್ರ ಶುರು ಮಾಡಿದ್ದು ಜೂನ್ ನಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ನಾನು ಹವ್ಯಾಸಿ ನಿರ್ಮಾಪಕನಾಗಿ ಹಿಂದಿಯಲ್ಲಿ ಒಂದಿಷ್ಟು ಶಾರ್ಟ್ ಫಿಲ್ಮ್ ಗಳನ್ನು ನಿರ್ಮಾಣ ಮಾಡಿದ್ದೇನೆ' ಎನ್ನುವರು.

ಅಂದಂಗೆ ಚಿತ್ರವನ್ನು ಪ್ರತೀಕ್ ಪ್ರಜೋಶ್ ನಿರ್ದೇಶನ ಮಾಡಿದ್ದು ಇವರು 'ಪದ್ಮಾವತ್' ಸೇರಿದಂತೆ ಹಿಂದಿ, ಮಲಯಾಳಂ, ಗುಜರಾತಿ ಸೇರಿದಂತೆ ಹಲವು ಭಾಷೆ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಜೊತೆಗೆ ಕೆಲವು ಶಾರ್ಟ್ ಫಿಲ್ಮ್ ಮಾಡಿದ್ದು, ಇದೀಗ ಮೊದಲಬಾರಿ 'ಚಿಲ್ಲಿ ಚಿಕನ್' ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಬಗ್ಗೆ ಮಾಹಿತಿ ನಿಡುವ ನಿರ್ದೇಶಕರು 'ನಾನು ಮೂಲತಃ ಕೇರಳದವನು. ನನ್ನ ತಂದೆ ಕನ್ನಡದವರು. ಇಲ್ಲಿಯ ಜನ ಹಾಗೂ ಪರಿಸರ ನಂಗೆ ತುಂಬಾ ಇಷ್ಟ. ಬೆಂಗಳೂರನಲ್ಲಿ ಶಿಕ್ಷಣ ಪಡೆದಿದ್ದು, ಈಗ ಬೆಂಗಳೂರಿನಲ್ಲಿ ಫ್ಯಾಮಿಲಿ ಸಮೇತ ಸೆಟಲ್ ಆಗಿದ್ದೇನೆ.

ಸಿನಿಮಾ ಬಗ್ಗೆ ಹೇಳುವುದಾದರೆ, ನಾಲ್ಕು ಜನ ಉತ್ತರ ಭಾರತೀಯರು ಸೇರಿ ಬೆಂಗಳೂರಿನಲ್ಲಿ ಚೈನಿಸ್ ರೆಸ್ಟೋರೆಂಟ್ ವೊಂದನ್ನು ಪ್ರಾರಂಭ ಮಾಡಲು ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಅದು ಆಗುತ್ತಾ, ಇಲ್ವಾ ಅನ್ನೋದೆ ಸಿನಿಮಾ. ಇದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಬಹಳ ಇಂಟರೆಸ್ಟ್ ಆಗಿ ಕಥೆ ಸಾಗುತ್ತದೆ. ತಂಡದ ಶ್ರಮ ತುಂಬಾ ಇದ್ದು, ಬೆಂಗಳೂರು ಹಾಗೂ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಕೊರಿಯನ್ ಡ್ರಾಮಾ ಮಾದರಿಯಲ್ಲಿ ಸಿನಿಮಾ ಇದ್ದು, ನಾವು ಕನ್ನಡ ಡ್ರಾಮಾ ಸಿನೆಮಾ ಎನ್ನಬಹುದು' ಎಂದು ಹೇಳಿದರು.

ನಂತರ ನಟ ಶೃಂಗಾ ಮಾತನಾಡಿ 'ನಾನು ಇದರಲ್ಲಿ ಆದರ್ಶ ಎಂಬ ಪಾತ್ರದಲ್ಲಿ ಹೊಟೇಲ್ ಮಾಲಿಕನ ಪಾತ್ರ ಮಾಡಿದ್ದೇನೆ. ಕಥೆ ಕೇಳಿದಾಗ ತುಂಬಾ ಇಷ್ಟ ಆಯ್ತು. ತುಂಬಾ ಸೂಕ್ಷ್ಮವಾದ ಅಂಶಗಳನ್ನು ಅಚ್ಚುಕಟ್ಟಾಗಿ ವ್ಯೂಮರಸ್ ಕಾಮಿಡಿ ಮೂಲಕ ಹೇಳಲಾಗಿದೆ. ಬೇರೆ ರಾಜ್ಯದಿಂದ ಬಂದ ಹುಡುಗರು ಕೆಲಸ ಮಾಡಿಕೊಂಡು ರೆಸ್ಟೋರೆಂಟ್ ಪ್ರಾರಂಭ ಮಾಡುವಾಗ ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಾರೆ, ನಾವು ಬೇರೆಯವರನ್ನು ಹೇಗೆ ನೋಡುತ್ತೇವೆ ಮತ್ತು ಅವರು ನಮ್ಮೊಂದಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ತೋರಿಸಲಾಗಿದೆ' ಎನ್ನುವರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು