LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಹೊಸ ರೂಪದ ಲಾಠಿ ಪ್ರಹಾರಕ್ಕೆ ಆಯುಕ್ತರ ಮೆಚ್ಚುಗೆ

ಬೆಂಗಳೂರು: ಗಲಾಟೆ ಸಂದರ್ಭದಲ್ಲಿ ಪೊಲೀಸರು ನಡೆಸುತ್ತಿದ್ದ ಲಾಠಿ ಪ್ರಹಾರಕೆ ಹೊಸ ರೂಪಾಂತರದಲ್ಲಿ ಪೊಲೀಸ್ ಲಾಠಿ ಪ್ರಹಾರ ಮಾಡುವ ವಿಧಾನವನ್ನು ಇಂದು ಬೆಳಿಗ್ಗೆ ನಡೆಸಿಕೊಟ್ಟರು.

ಮೈಸೂರ್ ರಸ್ತೆಯಲ್ಲಿರುವ ಸಿಎಆರ್ ಕೇಂದ್ರಸ್ಥಾನದಲ್ಲಿ ಇಂದು ಬೆಳಿಗ್ಗೆ ನಡೆದ ಪೊಲೀಸ್ ಆಯುಕ್ತರ ಮಾಸಿಕ ಪರೇಡ್ ನಲ್ಲಿ ಪಿ ಎ ಆರ್ ಕೇಂದ್ರ ವಿಭಾಗದ ಪೊಲೀಸರು ನಡೆಸಿಕೊಟ್ಟ ಹೊಸ ರೂಪಾಂತರದ ಲಾಠಿ ಪ್ರಹಾರವನ್ನು ಕವಾಯಿತಿನ ಮೂಲಕ ತೋರಿಸಿಕೊಟ್ಟ ಅಧಿಕಾರಿಮತ್ತು ಸಿಬ್ಬಂದಿಗಳಿಗೆ ನಗರ ಪೊಲೀಸ್ ಆಯುಕ್ತ ದಯಾನಂದ್ ರವರ ಮೆಚ್ಚುಗೆ ವ್ಯಕ್ತಪಡಿಸಿದರು.

ಸುಮಾರು 300 ಜನ ಮಹಿಳಾ ಸಿಬ್ಬಂದಿಗಳು ಸೇರಿದಂತೆ ನಡೆಸಿಕೊಟ್ಟ ಈ ಹೊಸ ಲಾಠಿ ಡ್ರಿಲ್‍ಗೆ ಸಂತೋಷ ವ್ಯಕ್ತಪಡಿಸಿದ ಆಯುಕ್ತರು ರೂ. 1 ಲಕ್ಷ ರೂ ಬಹುಮಾನವನ್ನು ಘೋಷಣೆ ಮಾಡಿದರು.ತದನಂತರ ಸುಮಾರು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ವಿವಿಧ ಪ್ರಕರಣಗಳಲ್ಲಿ 30 ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ತಲ ಹತ್ತು ಸಾವಿರ ರೂಗಳನ್ನು ಘೋಷಣೆ ಮಾಡಿದರು. ಹಾಗೂ ಇತರೆ ಪ್ರಕರಣಗಳಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸಿದ ಪೊಲೀಸರಿಗೆ ಪ್ರಶಂಸನಾ ಪತ್ರಗಳನ್ನು ಸಹ ವಿತರಿಸಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲಿಸ್ ಆಯುಕ್ತರುಗಳಾದ ಸತೀಶ್ ಕುಮಾರ್, ರಮಣ್ ಗುಪ್ತ ಮತ್ತು ಸಂಚಾರಿ ಜಂಟಿ ಪೆÇಲೀಸ್ ಆಯುಕ್ತ ಅನುಚ್ಛೇದ ಹಾಗೂ ಡಿಸಿಪಿಗಳು ಮತ್ತು ಎಸಿಪಿ ವರ್ಗದವರು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು