LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

ಪರಾಕ್ರಮ ದಿವಸ

ನೀನು ಎಲ್ಲಿ ಹುಟ್ಟಿದ್ದೀಯ
ಎನ್ನುವುದು ಮುಖ್ಯವಲ್ಲ,
ನೀನು ಎಲ್ಲಿ ಮುಟ್ಟಿದ್ದೀಯ
ಎನ್ನುವುದು ಬಹುಮುಖ್ಯ ಎನ್ನುವ ವ್ಯಾಖ್ಯಾನದಂತೆ, ಹುಟ್ಟು ಮತ್ತು ಸಾವು ಸಹಜವಾದರೂ, ಸಮಾಜ ನೂರಾರು ವರ್ಷಗಳಾದರೂ ಸ್ಮರಿಸುವಂತಹ ಸಾಧನೆ ಮಾಡಬೇಕು. ಅಂತಹ ಪರಾಕ್ರಮಗೈದವರು ಅಜರಾಮರರಾಗಿ ಉಳಿದು ಬಿಡುತ್ತಾರೆ. ನಮ್ಮ ಜನ್ಮಭೂಮಿ ಭಾರತ ಮಾತೆಯ ಮಡಿಲಲ್ಲಿ ಅನೇಕ ಪರಾಕ್ರಮಿಗಳು ಜನಿಸಿ, ಅಗಾಧ ಸಾಧನೆಯನ್ನು ಮಾಡಿದರು. ಅವರಲ್ಲಿ ಸುಭಾಷ್ ಚಂದ್ರ ಬೋಸ್ ರವರು ಅಗ್ರಗಣ್ಯರೆಂದರೆ ತಪ್ಪಾಗಲಾರದು. ಹೆಮ್ಮೆಯಿಂದ ಅವರ ಜನ್ಮದಿವನ್ನು ಪರಾಕ್ರಮ ದಿವಸವೆಂದು ಆಚರಿಸುತ್ತೇವೆ.
"ನೇತಾಜಿ" ಎಂದು ಕರೆಯಲ್ಪಡುವ ಭಾರತದ ಮಹಾನ್ ಸ್ವಾತಂತ್ರ÷್ಯ ಹೋರಾಟಗಾರ, ಆಂಗ್ಲರ ಆಳ್ವಿಕೆಯ ವಿರುದ್ಧ ಹೋರಾಡಲು ಭಾರತೀಯ ರಾಷ್ಟಿçÃಯ ಸೇನೆಯನ್ನು ರಚಿಸಿ, "ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ÷್ಯ ಕೊಡುತ್ತೇನೆ" ಎಂಬುದಾಗಿ ಘೋಷಣೆಗೈದ ವೀರ ನಮ್ಮ ಸುಭಾಷ್ ಚಂದ್ರ ಬೋಸರು. ಲಕ್ಷಾಂತರ ಜನರು ಸ್ವಾತಂತ್ರ÷್ಯ ಸಂಗ್ರಾಮದಲ್ಲಿ ತೊಡಗಲು ಪ್ರೇರಣೆಯಾದ ಬೋಸರು ಜನವರಿ ೨೩, ೧೮೯೭ ರಂದು ಕಟಕ್‌ನ ಸಿರಿವಂತರ ಕುಟುಂಬದಲ್ಲಿ ಜನಿಸಿದ್ದರು, ಕಲ್ಕತ್ತಾದಲ್ಲಿ ತತ್ವಶಾಸ್ತçದಲ್ಲಿ ಪದವಿ ಪಡೆದರು. ಭಾರತೀಯ ನಾಗರಿಕ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ಬ್ರಿಟಿಷ್ ಸರ್ಕಾರಕ್ಕೆ ಸೇವೆ ಸಲ್ಲಿಸಲು ನಿರಾಕರಿಸಿ, ಕಾಂಗ್ರೆಸ್ ಸೇರಿದರು. ನಂತರ ಫಾರ್ವರ್ಡ್ ಬ್ಲಾಕ್ ಸ್ಥಾಪಿಸಿ, ಅಜಾದ್ ಹಿಂದ್ ಫೌಜ್ ಮೂಲಕ ಭಾರತದ ಸ್ವಾತಂತ್ರ÷್ಯಕ್ಕಾಗಿ ಅವಿರತ ಹೋರಾಡಿದ ಕೆಚ್ಚೆದೆಯ ಕ್ರಾಂತಿಕಾರಿ, ಮಹಾನ್ ದೇಶಭಕ್ತ ನಮ್ಮ ನೇತಾಜಿ.
ಅಸಾಧಾರಣವಾದ ಧೈರ್ಯ, ಶೌರ್ಯ, ನಾಯಕತ್ವ ಮತ್ತು "ಜೈ ಹಿಂದ್" ಘೋಷಣೆಯೊಂದಿಗೆ ದೇಶದ ಯುವ ಜನರನ್ನು ಎಚ್ಚರಿಸಿದ ಬೋಸರನ್ನು ನೇತಾಜಿ ಎಂದೇ ಗೌರವಿಸುತ್ತೇವೆ.
ಆರ್ಥಿಕ ಸಬಲೀಕರಣ,: ಬಡತನ ನಿರ್ಮೂಲನೆ, ನಿರುದ್ಯೋಗ ನಿವಾರಣೆಗೆ ಕೈಗಾರಿಕೀಕರಣ ಮತ್ತು ಸ್ವಾವಲಂಬಿ ಭಾರತದ ಕನಸನ್ನು ಬೋಸರು ಕಂಡಿದ್ದರು, ಸ್ವರಾಜ್ ಪತ್ರಿಕೆ, 'ಜೈ ಹಿಂದ್ ಘೋಷಣೆ ಹಾಗು ನೀವು ರಕ್ತ ಕೊಡಿ, ನಾನು ಸ್ವಾತಂತ್ರ÷್ಯ ಕೊಡಿಸುತ್ತೇನೆ' ಎನ್ನುವ ಘೋಷಣೆಗಳನ್ನು ಸೃಷ್ಟಿಸಿದ್ದರು.
ತಾಯ್ನಾಡಿಗಾಗಿ, ಭಾರತೀಯರ ಸ್ವಾತಂತ್ರ÷್ಯಕ್ಕಾಗಿ, ಶೌರ್ಯದಿಂದ ಹೋರಾಡಿದ ಕೆಚ್ಚೆದೆಯ ವೀರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂಗವಾಗಿ ಪ್ರತಿ ವರ್ಷ ಜನವರಿ ೨೩ ರಂದು ಶೌರ್ಯ ದಿನ ಅಥವಾ ಪರಾಕ್ರಮ ದಿವಸವನ್ನು ಆಚರಿಸಲಾಗುತ್ತಿದೆ. ೨೦೨೧ ರಲ್ಲಿ, ನೇತಾಜಿ ಅವರ ೧೨೫ನೇ ಜನ್ಮದಿನದಂದು ಭಾರತ ಸರ್ಕಾರವು ಜನವರಿ ೨೩ನೇ ದಿನವನ್ನು 'ಪರಾಕ್ರಮ ದಿವಸ್' ಎಂದು ಘೋಷಿಸಿತು. ಪರಾಕ್ರಮ ದಿನಾಚರಣೆಯ ಉದ್ದೇಶವೇನೆಂದರೆ ನೇತಾಜಿಯವರ ಧೈರ್ಯ, ಶೌರ್ಯ, ದೇಶಭಕ್ತಿ, ನಿಸ್ವಾರ್ಥ ಸೇವೆ, ದೇಶಾಭಿಮಾನವನ್ನು ಸ್ಮರಿಸುತ್ತ ಅವರ ಆದರ್ಶ ಮತ್ತು ವೀರತ್ವವನ್ನು ಗೌರವಿಸಿ, ಇಂದಿನ ಯುವ ಪೀಳಿಗೆಗೆ ಪ್ರೇರಣೆ ಮತ್ತು ಸ್ಪೂರ್ತಿ ನೀಡುವುದಾಗಿದೆ.
ದೇಶಾದ್ಯಂತ ಶಾಲಾ, ಕಾಲೇಜುಗಳಲ್ಲಿ ಚರ್ಚೆಗಳು, ಭಾಷಣಗಳು, ಛದ್ಮವೇಷ ಮತ್ತು ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ೨೦೨೧ ರಲ್ಲಿ ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್‌ನಲ್ಲಿ ಮೊದಲ ಕಾರ್ಯಕ್ರಮ ನಡೆಯಿತು. ೨೦೨೨ ರಲ್ಲಿ ಇಂಡಿಯಾ ಗೇಟ್‌ನಲ್ಲಿ ನೇತಾಜಿಯವರ ಹೋಲೋಗ್ರಾಂ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ೨೦೨೩ ರಲ್ಲಿ ಅಂಡಮಾನ್ ಮತ್ತು ನಿಕೋಬಾರ್‌ಗಳಲ್ಲಿ ೨೧ ದ್ವೀಪಗಳಿಗೆ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕöÈತರ ಹೆಸರಿಡಲಾಯಿತು. ೨೦೨೪ ರಲ್ಲಿ ಸ್ವಾತಂತ್ರ÷್ಯ ಸಂಗ್ರಾಮದ ಇತಿಹಾಸ, ಬೋಸರ ಜೀವನ ಚರಿತ್ರೆ, ಅವರ ಹೋರಾಟ ಇದರ ಬಗ್ಗೆ ಚರ್ಚೆ ಮತ್ತು ಸೆಮಿನಾರ್ಗಳನ್ನು ವಿಶ್ವವಿದ್ಯಾಲಯಗಳಲ್ಲಿ ಆಚರಿಸಲಾಯಿತು. ೨೦೨೫ರಲ್ಲಿ ಭಾರತದ ಸ್ವಾವಲಂಬನೆ, ಸ್ವಾಯತ್ತತೆಯ ಕುರಿತು ಯುವ ಪೀಳಿಗೆಯನ್ನು ಆಕರ್ಷಿಸುವ ಮತ್ತು ಯುವಜನತೆಯನ್ನು ರಾಷ್ಟಾçಭಿಮಾನದತ್ತ ಸೆಳೆಯುವ, ಸೈನ್ಯದಲ್ಲಿ ಸೇವೆ ಸಲ್ಲಿಸುವ, ದೇಶಾಭಿವೃದ್ದಿ ಕಾರ್ಯಗಳಲ್ಲಿ ತೊಡಗುವತ್ತ ಹೆಚ್ಚಿನ ಗಮನ ನೀಡಲಾಯಿತು.
ಅಚಲ ದೇಶಭಕ್ತಿ, ಕ್ರಾಂತಿಕಾರಿ ಮನೋಭಾವ, ಚಾಣಾಕ್ಷ ವಿದೇಶಾಂಗ ನೀತಿ, ಸದೃಢ ನಾಯಕತ್ವ, ಸ್ಪಷ್ಟವಾದ ನಿಲುವು ಪರಾಕ್ರಮದ ಗಣಿಯಾದ ಸುಭಾಷ್ ಚಂದ್ರ ಬೋಸರನ್ನು ಹತ್ತಿಕ್ಕುವ ಕಾರ್ಯಗಳು ದೇಶ ವಿದೇಶಗಳಲ್ಲೂ ನಡೆದೇ ಹೋದವು. ಇವರ ಅಗಾಧ ರಾಷ್ಟçಪ್ರೇಮ ಮತ್ತು ಅಭ್ಯುದಯ ಸಹಿಸಿದ ಅನೇಕರು ತೆರೆಮರೆಯಲ್ಲಿ ಕಾರ್ಯನಿರತರಾದರು. ಪರಿಣಾಮವಾಗಿ, ಆಗಸ್ಟ್ ೧೮, ೧೯೪೫ ರಂದು ತೈವಾನ್‌ನಲ್ಲಿ ವಿಮಾನ ಅಪಘಾತದಲ್ಲಿ ಇವರ ಸಾವು ಸಂಭವಿಸಿದೆ ಎಂದು ನಂಬಿಸಲಾಯಿತು, ಆದರೆ ಅವರ ಸಾವು ಇಂದಿಗೂ ನಿಗೂಢವಾಗಿದ್ದು, ನೇತಾಜಿಯವರ ಅಂತ್ಯವನ್ನು ಭೇಧಿಸಲಾಗಿಲ್ಲವೆಂಬುದು ದುರದೃಷ್ಟಕರ. ಇವರ ಹುಟ್ಟು ಮಾತ್ರ ಎಲ್ಲರಿಗೂ ತಿಳಿಯಿತು. ಆದರೆ ಸಾವು ಹೇಗಾಯಿತು ಎಂಬುದು ಅಸ್ಪಷ್ಟವಾದರೂ, ಇವರ ದೇಶಾಭಿಮಾನದ ಕಿಚ್ಚು ಯುವ ಪೀಳಿಗೆಗೆ ಸ್ಪೂರ್ತಿಯಾಗುವುದರೊಂದಿಗೆ ವಿದೇಶಿಗರ ನಿದ್ದೆಯನ್ನು ಹರಣಗೈದಿತ್ತು. ಬೋಸ್ ಎಂದರೆ ವಿದೇಶಿಗರಿಗೆ ಸಹಿಸಲಸಾಧ್ಯವಾದ ಕ್ರಾಂತಿಕಾರಿಯಾಗಿದ್ದರು. ಇಂತಹ ಮಹಾನ್ ದೇಶಭಕ್ತನ ಅಸಾಮಾನ್ಯ ಕೊಡುಗೆಯನ್ನು ಸ್ಮರಿಸುತ್ತ, ಅವರಿಗಾಗಿಯೇ ಮೀಸಲಾಗಿರುವ ಪರಾಕ್ರಮ ದಿವಸದ ಶುಭಾಶಯಗಳನ್ನು ಕೋರುತ್ತಾ, ನಿಮ್ಮಂತಹ ಕಟ್ಟಾ ದೇಶಭಕ್ತರು ಮತ್ತೊಮ್ಮೆ ಈ ನಾಡಿನಲ್ಲಿ ಜನಿಸಲಿ, ಯುವ ಪೀಳಿಗೆಗೆ ಸ್ಪೂರ್ತಿಯಾಗಲಿಯೆಂದು ಪ್ರಾರ್ಥಿಸೋಣವೇ?
*************************
-ಪುಷ್ಪಲತಾ ಹೆಗಡೆ, ಬೆಂಗಳೂರು

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು