LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

"ಅನ್ನಭಾಗ್ಯ: ೫ ಕೆಜಿ ಅಕ್ಕಿ ಬದಲು ದಿನಸಿ ಪದಾರ್ಥ ವಿತರಣೆ-ಡಿಸಿಎಂ"

ಬೆಂಗಳೂರು :ರಾಜ್ಯದಲ್ಲಿ ಇನ್ಮುಂದೆ ೧೦ ಕೆಜಿಯ ಅಕ್ಕಿ ಬದಲು ೫ ಕೆಜಿ ಅಕ್ಕಿ ಕೊಟ್ಟು, ಇನ್ನುಳಿದ ೫ ಕೆಜಿಯ ಲೆಕ್ಕದಲ್ಲಿ ದಿನಸಿ ಪದಾರ್ಥಗಳನ್ನು ವಿತರಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಹಸಿವುಮುಕ್ತ ಕರ್ನಾಟಕ ನಿರ್ಮಾಣವೇ ನಮ್ಮ ಮುಖ್ಯಉದ್ದೇಶವಾಗಿರುವುದರಿಂದ ಅನ್ನಭಾಗ್ಯದ ಅಕ್ಕಿಯ ಜೊತೆಗೆ ಇಂದಿರಾಕಿಟ್ ವಿತರಿಸಲು ನಮ್ಮ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಅನ್ನಭಾಗ್ಯದ ೧೦ ಕೆಜಿಯಅಕ್ಕಿಯ ಬದಲು ಇನ್ಮುಂದೆ ೫ ಕೆಜಿ ಅಕ್ಕಿ ಕೊಟ್ಟು, ಇನ್ನುಳಿದ ೫ ಕೆಜಿಯ ಲೆಕ್ಕದಲ್ಲಿ ದಿನಸಿ ಪದಾರ್ಥಗಳನ್ನು ವಿತರಿಸಲಿದ್ದೇವೆ. ಯಾರೊಬ್ಬರೂ ಹಸಿವಿನಿಂದ ಇರಬಾರದುಎಂಬುದೇ ನಮ್ಮ ಸರ್ಕಾರದ ಕಾಳಜಿಯಾಗಿದೆ ಎಂದು ಹೇಳಿದ್ದಾರೆ.

ಇಂದಿರಾ ಆಹಾರದ ಕಿಟ್‌ನಲ್ಲಿ ಏನಿರಲಿದೆ?

ತೊಗರಿ ಬೇಳೆ - ೧ ಕೆಜಿ
ಹೆಸರುಕಾಳು- ೧ ಕೆಜಿ
ಅಡುಗೆಎಣ್ಣೆ - ೧ ಲೀಟರ್
ಸಕ್ಕರೆ - ೧ ಕೆಜಿ
ಉಪ್ಪು  - ೧ ಕೆಜಿ

ಅನ್ನಭಾಗ್ಯಯೋಜನೆಯಡಿ ೫ ಕೆಜಿ ಹೆಚ್ಚುವರಿ ಅಕ್ಕಿ ನೀಡಲುಅಯವ್ಯಯದಲ್ಲಿ ಹಂಚಿಕೆ ಮಾಡಿರುವ ರೂ.೬,೪೨೬ಕೋಟಿಅನುದಾನದಲ್ಲಿ ರೂ.೬,೧೧೯.೫೨ ಕೋಟಿ ವೆಚ್ಚದಲ್ಲಿಇಂದಿರಾಆಹಾರಕಿಟ್‌ಒದಗಿಸಲು ಬಜೆಟ್ ಮರು ಹಂಚಿಕೆ ಮಾಡಲು ನುಮೋದನೆ ನೀಡಿದೆ.

 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST