LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಬ್ಯಾಂಗಲ್ ಬಂಗಾರಿ ಚಿತ್ರಕ್ಕೆ ಚಾಲನೆ

ಶಂಕರ್ ರಾಮರೆಡ್ಡಿ ನಿರ್ಮಿಸಿ, ಮರಡಿಹಳ್ಳಿ ಚಂದ್ರ ನಾಗ್ ಅವರು ನಿರ್ದೇಶಿಸುತ್ತಿರುವ ನೂತನ ಚಿತ್ರಕ್ಕೆ “ಬ್ಯಾಂಗಲ್ ಬಂಗಾರಿ” ಎಂದು ಹೆಸರಿಡಲಾಗಿದೆ. 


ಇತ್ತೀಚೆಗೆ ಈ ಚಿತ್ರದ ಮುಹೂರ್ತ ನೆರವೇರಿತು. ನಿರ್ಮಾಪಕಇ.ಕೃಷ್ಣಪ್ಪ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಶಾಸಕ ಗೋಪಲಯ್ಯ ಕ್ಯಾಮೆರಾ ಚಾಲನೆ ಮಾಡಿದರು. “ಬ್ಯಾಂಗಲ್ ಬಂಗಾರಿ”  ಇದೊಂದು ಪ್ರೇಮಕಥೆ. ಜೊತೆಗೆ ಕ್ರೈಮ್ ಸಹ ಇದೆ.  ಸುನೀಲ್ ಶಶಿಧರ್, ಪ್ರಕೃತಿ ರಾಜೇಂದ್ರ ನಾಯಕ - ನಾಯಕಿಯಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಶರತ್ ಲೋಹಿತಾಶ್ವ, ಗೋಪಾಲಕೃಷ್ಣ ದೇಶಪಾಂಡೆ, ಪ್ರಕಾಶ್ ಬೆಳವಾಡಿ, ರವಿ ಕಾಳೆ, ಸಂಪತ್ ಮೈತ್ರೇಯ ಮುಂತಾದವರು ತಾರಾಬಳಗದಲ್ಲಿದ್ದಾರೆ. ರೇಣು ಸಂಗೀತ ನಿರ್ದೇಶನ, ಸತೀಶ್ ಕೆ ಛಾಯಾಗ್ರಹಣ ಹಾಗೂ ಗಿರೀಶ್ ಕುಮಾರ್ ಅವರ ಸಂಕಲನ ಎನ್ ವಿನಾಯಕ ಸಂಭಾಷಣೆ ಬರೆದಿದ್ದಾರೆ. ಹಾಡುಗಳನ್ನು ಕೆ.ಕಲ್ಯಾಣ್, ಲೋಕೇಶ್ ಕೃಷ್ಣ ಹಾಗೂ  ರೇಣು ರಚಿಸಿದ್ದಾರೆ. ವಿಜಯ್ ಪ್ರಕಾಶ್, ಕೈಲಾಶ್ ಖೇರ್ , ಜಸ್ಕರಣ್ ಸಿಂಗ್, ಅನುರಾಧಾ ಭಟ್ ಹಾಡುಗಳನ್ನು ಹಾಡಲಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಎರಡನೇ ಹಂತದ ಚಿತ್ರೀಕರಣ ಸಕಲೇಶಪುರದಲ್ಲಿ ನಡೆಸಲು ಸಿದ್ದತೆ ನಡೆಯುತ್ತಿದೆ. ನಾನೇ ಕಥೆ ಹಾಗೂ ಚಿತ್ರಕಥೆ ಬರೆದಿದ್ದೇನೆ. ಶಂಕರ್ ರಾಮ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಮರಡಿಹಳ್ಳಿ ಚಂದ್ರ ನಾಗ್ ತಿಳಿಸಿದರು.ಇದು ನನಗೆ ನಾಯಕನಾಗಿ ಎರಡನೇ ಚಿತ್ರ. ಈ ಚಿತ್ರದಲ್ಲಿ ನಾನು ಎಂಜಿನಿಯರ್. ಆಡಿಶನ್ ಮೂಲಕ ಆಯ್ಕೆಯಾದೆ. ನಟನೆಗೆ ಬೇಕಾದ ತರಬೇತಿ ಪಡೆದುಕೊಂಡು ಬಂದಿದ್ದೇನೆ ಎಂದು ನಾಯಕ ಸುನೀಲ್ ಶಶಿಧರ್ ಹೇಳಿದರು. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಕಾವ್ಯ. ನಿರ್ದೇಶಕರು ನನ್ನ ಪಾತ್ರದ ಬಗ್ಗೆ ಹೇಳಿದ ತಕ್ಷಣ ತುಂಬಾ ಇಷ್ಡವಾಯಿತು. ನಾನು ಮೂಲತಃ ನೃತ್ಯಗಾರ್ತಿ. ಈ ಚಿತ್ರದಲ್ಲೂ ನೃತ್ಯ ಮಾಡಲು ಅವಕಾಶವಿದೆ ಎಂದರು ನಾಯಕಿ ಪ್ರಕೃತಿ ರಾಜೇಂದ್ರ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST